ಕನ್ನಡದ ಈ ಗಾದೆಮಾತು ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳಲ್ಲಿನ ಒಂದು ಸೂಕ್ಷ್ಮ ಅಂಶವನ್ನು ದಾಖಲಿಸುತ್ತದೆ. ಒಬ್ಬರ ಮನೆಗೆ ಅತಿಥಿಯಾಗಿ ಹೋದವರು, ಅತಿಥಿತನಕ್ಕೆ ಒಪ್ಪುವಂತೆ ಎಷ್ಟು ಕಾಲ ಇರಬೇಕೋ ಅಷ್ಟು ಕಾಲ ಮಾತ್ರ ಇದ್ದರೆ ಉಚಿತ. ಆದರೆ ಅದಕ್ಕಿಂತ ಹೆಚ್ಚು ಸಮಯ ಅತಿಥೇಯರ ಮನೆಯಲ್ಲಿದ್ದರೆ, ಅವರನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಎಂಬ ಕಟುಸತ್ಯವು ಇಲ್ಲಿ ಗೊತ್ತಾಗುತ್ತದೆ. ಪ್ರಾರಂಭದಲ್ಲಿ ಅತಿಥಿಗಳನ್ನು ಮಣೆಹಾಕಿ ಕೂರಿಸಿ ಉಪಚರಿಸಲಾಗುತ್ತದೆ. ಈ ಹಂತದ ನಂತರವೂ ಅತಿಥಿಯು ಅತಿಥೇಯರ ಮನೆಯಲ್ಲೇ ಇದ್ದರೆ ಮಣೆಯನ್ನು ಹಾಕುವುದಿಲ್ಲ, ಬದಲಾಗಿ ದೂರದಿಂದಲೇ ನೂಕಲಾಗುತ್ತದೆ (ಇಲ್ಲಿ ಮಣೆ ಮತ್ತು ಅದನ್ನು ಕೊಡುವ ಅಥವಾ ಕೊಡದಿರುವ ರೀತಿಯು ಅತಿಥಿಗಳನ್ನು ನೋಡಿಕೊಳ್ಳುವ ವಿಷಯಕ್ಕೆ ಸಂಕೇತವಾಗುತ್ತಾ ಹೋಗಿದೆ ಎಂಬುದನ್ನು ಗಮನಿಸಬೇಕು). ಈ ಹಂತವನ್ನು ದಾಟಿಯೂ ಅತಿಥಿ ಉಳಿದುಕೊಂಡರೆ “ಇನ್ನು ಯಾಕೆ ಮಣೆ ನಿನಗೆ? ನೆಲದ ಮೇಲೆಯೇ ಕುಕ್ಕರುಬಡಿ! ಎಂಬ ಕೀಳುಗಳೆಯುವ ವರ್ತನೆ ಸಿಕ್ಕೀತು. ಹೀಗಾಗಿ ಅತಿಥಿಗಳು ತಾವು ಇರುವ ಸ್ಥಳ, ಸಮಯದ ಸೂಕ್ಷ್ಮಗಳ ಬಗ್ಗೆ ಜಾಗ್ರತೆ ವಹಿಸಬೇಕು.

Kannada proverb : haakmane, nookmane, yakmane(Please sit – hello, take it, you may sit – why you need a seat?)

Mane is a wooden floor level stool used in South Indian homes for sitting to eat meals or during worship. For newly arrived guests this stool is offered with great respect. But if the guest overstays in the host’s home, as the days go by, the stool is pushed towards him, which is not as respectful as offering. Even worse, for a guest who stays irritatingly long, the stool is not offered at all! It is deemed unnecessary!! This is why guests need to be sensitive about their length of stay when they visit a home. So, this proverb is an eye opener about the finer things about `being a good guest’.