Liquefied petroleum gas (LPG)

ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ – ದ್ರವೀಕೃತ ಪೆಟ್ರೋಲಿಯಂ ಅನಿಲ‌ – ವಿವಿಧ ಪೆಟ್ರೋಲಿಯಂ ಅನಿಲಗಳು, ಮುಖ್ಯವಾಗಿ ಪ್ರೋಪೇನ್ ಮತ್ತು ಬ್ಯೂಟೇನ್ ಗಳನ್ನು ಒತ್ತಡ ಹಾಕಿ ದ್ರವಸ್ಥಿತಿಯಲ್ಲಿ ಇಟ್ಟಿರುವಂಥದ್ದು‌. ಇದನ್ನು ಚಾಲಕಯಂತ್ರದ ಇಂಧನವಾಗಿ ಬಳಸುತ್ತಾರೆ. ‘ಸಿಲಿಂಡರ್ ಹೆಡ್’ ಎಂಬ ಯಂತ್ರಭಾಗದಲ್ಲಿ ಈ ವಸ್ತುವು ತುಂಬ ಕಡಿಮೆ ಗಷ್ಟು ಅಥವಾ ಶೇಷ ಉಳಿಸುತ್ತದೆ ಎಂಬುದು ಇದಕ್ಕಿರುವ ಉತ್ತಮ ಗುಣವಾಗಿದೆ‌. 

Liquification  of gases

ಲಿಕ್ವಿಫಿಕೇಷನ್ ಆಫ್ ಗ್ಯಾಸಸ್ – ಅನಿಲಗಳ ದ್ರವೀಕರಣ – ಒಂದು ಅನಿಲದ ತಾಪಮಾನವು ಅದರ ನಿರ್ಧಾರಕ ತಾಪಮಾನಕ್ಕಿಂತ ಕಡಿಮೆ ಇದ್ದಾಗ, ಆ ಅನಿಲದ ಮೇಲೆ ಬಾಹ್ಯ ಒತ್ತಡವನ್ನು‌ ಹಾಕಿದಾಗಷ್ಟೇ ಅದನ್ನು ದ್ರವೀಕರಿಸಬಹುದು.

Line spectrum

ಲೈನ್ ಸ್ಪೆಕ್ಟ್ರಮ್ – ರೇಖಾತ್ಮಕ ವರ್ಣಪಟಲ – ಪ್ರತ್ಯೇಕ ಏಕರೇಖೆಗಳಿಂದ ಕೂಡಿರುವಂತಹ ಹೊರಸೂಸುವಿಕೆಯ ಅಥವಾ ಹೀರುವಿಕೆಯ ವರ್ಣಪಟಲ. ಇದರಲ್ಲಿ ಪ್ರತಿಯೊಂದು ಗೆರೆಯೂ ಒಂದು ಸ್ಪಷ್ಟವಾಗಿ ನಿರೂಪಿತವಾದ ತರಂಗಾಂತರಕ್ಕೆ ಸಂಬಂಧಿಸಿರುತ್ತದೆ.

Line of force ( electric)

ಲೈನ್ ಆಫ್ ಫೋರ್ಸ್ ( ಎಲೆಕ್ಟ್ರಿಕ್) – ಬಲರೇಖೆ (ವಿದ್ಯುತ್) – ಒಂದು ವಿದ್ಯುತ್ ಕ್ಷೇತ್ರ ಅಥವಾ ಕಾಂತಕ್ಷೇತ್ರದಲ್ಲಿನ ಕಲ್ಪಿತ ರೇಖೆ ಇದು‌. ಇದರ ಯಾವುದೇ ಬಿಂದುವಿನಲ್ಲಿನ ಸ್ಪರ್ಶರೇಖೆಯು ( ಟ್ಯಾಂಜೆಂಟ್) ಆ ಬಿಂದುವಿನಲ್ಲಿನ ವಿದ್ಯುತ್ ಕ್ಷೇತ್ರದ ದಿಕ್ಕನ್ನು ತೋರಿಸುತ್ತದೆ‌ . ಈ ಬಲರೇಖೆಗಳು ಎಂದೂ ಒಂದನ್ನೊಂದು ದಾಟುವುದಿಲ್ಲ.

Linear motor

ಲೀನಿಯರ್ ಮೋಟಾರ್ – ರೇಖಾತ್ಮಕ ಯಂತ್ರಚಾಲಕ (ರೇಖಾತ್ಮಕ ಮೋಟಾರು) – ಒಂದು ರೀತಿಯ ವಿದ್ಯುತ್ ಪ್ರೇರಕ ಯಂತ್ರಚಾಲಕ‌.‌ ಇದರಲ್ಲಿನ ಚಲಿಸದ ಭಾಗ(ಸ್ಟೇಟರ್) ಮತ್ತು ಚಲಿಸಿವ ಭಾಗ ( ರೋಟರ್) ಗಳು ಗುಂಡುಕಂಬದಂತಿರದೆ ನೇರವಾಗಿರುತ್ತವೆ  ಹಾಗೂ ಸಮ ಅಕ್ಷವನ್ನು ಹೊಂದಿರುವ ಬದಲು ಸಮಾನಾಂತರವಾಗಿರುತ್ತವೆ‌.

ಕನ್ನಡ ಗಾದೆಮಾತು – ಯುಕ್ತಿಯ ಮಾತು  ಮಕ್ಕಳಿಂದಾದರೂ ತಿಳ್ಕೋ‌

ಜೀವನವು ಎಷ್ಟು ಸಂಕೀರ್ಣ ಹಾಗೂ ಅನೂಹ್ಯ ಎಂಬುದು ಎಲ್ಲ ಪ್ರಬುದ್ಧ ವಯಸ್ಕರಿಗೂ, ಒಂದಲ್ಲ‌ ಒಂದು ಸಲ  ಭಾಸವಾಗಿಯೇ ಆಗುವ  ಸತ್ಯ. ಹೀಗಾಗಿ ವಿನಯ ಹಾಗೂ ನಿರಂತರ ಕಲಿಕೆಯ ಮನ:ಸ್ಥಿತಿ ಮಾತ್ರ ಜೀವನದ ಅಸಾಧ್ಯ ಏರುತಗ್ಗುಗಳ ಪಯಣದಲ್ಲಿ ನಮ್ಮ ಆಧಾರಗಳಾಗಬಲ್ಲವು. ಕಲಿಕೆ ಮುಖ್ಯ ಎಂದಾದಾಗ ನಾವು ಕಲಿಸುವವರ ವಯಸ್ಸು, ವಿದ್ಯೆ, ಸ್ಥಾನಮಾನ ನೋಡದೆ ಕಲಿಯಬೇಕು‌. ಅದರಲ್ಲೂ ವಯಸ್ಕ ಜೀವನದ ಇಕ್ಕಟ್ಟುಗಳಿಗೆ ಇನ್ನೂ ಪರಿಚಿತರಾಗದ ಚಿಕ್ಕ ಮಕ್ಕಳು ತಮ್ಮ ಬೆರಗು, ನಗು, ಸರಳ-ಮುಗ್ಧ ಮನೋನೆಲೆಗಳಿಂದ ಜೀವನದ ಬಗ್ಗೆ ಅತ್ಯಂತ ನೂತನ […]

‘ಶ್ರಗ್’ ಎಂಬ ಅಂಗಿಗೆ ಕನ್ನಡದಲ್ಲಿ ಏನಂತಾರೆ?

ಈಗಿನ‌ ಹುಡುಗಿಯರು, ಮಹಿಳೆಯರು ಜೀನ್ಸು ಪ್ಯಾಂಟು/ಲಂಗ/ ಅಂಗಿ ತೊಟ್ಟಾಗ ಅದರ ಮೇಲೆ ‘ಶ್ರಗ್’ ಎಂಬ ಸಡಿಲವಾದ, ಗುಂಡಿರಹಿತ ಕೋಟ್ ನಂತೆ ತೋರುವ, ಸಾಮಾನ್ಯವಾಗಿ ತೆಳುವಾದ ಬಟ್ಟೆಯಲ್ಲಿ ಹೊಲಿದಿರುವ, ತೋಳುಗಳಿರುವ, ಒಂದು ಮೇಲಂಗಿಯನ್ನು ತೊಡುವುದನ್ನು ನಾವು ಗಮನಿಸುತ್ತೇವಲ್ಲ, ಅದನ್ನು ಇಂಗ್ಲಿಷ್ ನಲ್ಲಿ Shrug ಎನ್ನುತ್ತಾರೆ‌. ಆ ಭಾಷೆಯಲ್ಲಿ ಶ್ರಗ್ ಎಂಬ ಪದಕ್ಕೆ  “ಔದಾಸೀನ್ಯ, ಅಸಹಾಯಕತೆ, ತಿರಸ್ಕಾರ, ಕೋಪ ಮೊದಲಾದವುಗಳನ್ನು ಸೂಚಿಸುವುದಕ್ಕಾಗಿ ಭುಜ ಎಗರಿಸು, ಹೆಗಲು ಹಾರಿಸು” ಎಂಬ ಅರ್ಥವು, ಅದು ಕ್ರಿಯಾಪದ ಆದಾಗ ಬರುತ್ತೆ. ಇನ್ನು, ಅದು ನಾಮಪದ […]

Linear modulation

ಲೀನಿಯರ್ ಮಾಡ್ಯುಲೇಷನ್ – ರೇಖಾತ್ಮಕ ಅಲೆಪರಿವರ್ತನೆ – ಒಯ್ಯಕ ಅಲೆಯ ಪರಿವರ್ತಿತ ಗುಣಲಕ್ಷಣವು ಶ್ರವ್ಯ ಆವರ್ತನಗತಿಯ ಒಂದು ಶ್ರೇಣಿಯ ಮೌಲ್ಯಕ್ಕೆ ಸಂಬಂಧಿಸಿದಂತೆ ಸಮಾನುಪಾತದಲ್ಲಿದ್ದರೆ, ಅದನ್ನು ರೇಖಾತ್ಮಕ ಅಲೆ ಪರಿವರ್ತನೆ ಎನ್ನುತ್ತಾರೆ.

Linear expansion

ಲೀನಿಯರ್ ಎಕ್ಸ್ ಪ್ಯಾನ್ಶನ್ – ರೇಖಾತ್ಮಕ ವಿಸ್ತರಣೆ – ಒಂದು ವಸ್ತುವನ್ನು ಕಾಯಿಸಿದಾಗ ಅದರ ಉದ್ದದಲ್ಲಿ ಆಗುವ ಬದಲಾವಣೆ‌.

Linear distortion

ಲೀನಿಯರ್ ಡಿಸ್ಟಾರ್ಷನ್ – ರೇಖಾತ್ಮಕ  ವಿರೂಪಣೆ –  ವಿದ್ಯುದಲೆಯ ಎತ್ತರಕ್ಕೆ ಯಾವುದೇ ಸಂಬಂಧವಿಲ್ಲದಂತಹ ಯಾವುದೇ ರೂಪದ ಕೊಂಕು ಅಥವಾ ವಿರೂಪಣೆ.

Page 1 of 128

Kannada Sethu. All rights reserved.