ವರ್ಷ್‌ತೊಡ್ಕು, ಹೊಸ್ತೊಡ್ಕು  ವರ್ಷದ ತೊಡಗು(ತೊಡಕು)

ಯುಗಾದಿ ಹಬ್ಬದ ಮಾರನೆಯ ದಿನ ಎಲ್ಲ ಕಡೆ ರಜೆಯ ಮನಸ್ಥಿತಿ ಇರುವುದನ್ನು ನಾವು ಗಮನಿಸಿದ್ದೇವೆ ಅಲ್ಲವೇ? “ಇವತ್ತು ವರ್ಷ್‌ತೊಡ್ಕಲ್ವಾ, ಖಾರದೂಟ ಇರುತ್ತೆ. ನಿಮ್ಮನೇಲಿ ಏನು ವಿಶೇಷ? ॒॒ ॒“ಇಲ್ಲಪ್ಪಾ ನಾವು ಖಾರದೂಟದವರಲ್ಲ, ಹೊಸ್ತೊಡಕಿಗೆ ನಮ್ಮನೇಲಿ ಇವತ್ತು ಪಾಯ್ಸ ಮಾಡ್ತಾರೆ ಇಂತಹ ಮಾತುಗಳು ಕಿವಿ ಮೇಲೆ ಅಂದು ಬೀಳುತ್ತವೆ.

Binoculars

ಜೋಡಿಕೊಳವೆ ದೂರದರ್ಶಕ – ಎರಡು ಕಣ್ಣುಗಳಿಗೂ ಒಂದೊಂದು ನೋಡುಕೊಳವೆಯನ್ನು ನೀಡಿ, ದೂರದಲ್ಲಿರುವ ವಸ್ತುಗಳು ದೊಡ್ಡದಾಗಿ ಮತ್ತು ಸ್ಪಷ್ಟವಾಗಿ ಕಾಣುವಂತೆ ಮಾಡುವ ದೃಷ್ಟಿವಿಜ್ಞಾನದ ಒಂದು ಉಪಕರಣ.

Binocular vision

ದ್ವಿನಯನ ದೃಷ್ಟಿ  ಎರಡೂ ಕಣ್ಣುಗಳನ್ನು ಬಳಸಿಕೊಳ್ಳುವ ದೃಷ್ಟಿ. ನಮ್ಮ ಮೆದುಳು ಎರಡು ಬೇರೆ ಬೇರೆ ಬಿಂಬಗಳಿಂದ ಮೂರು ಆಯಾಮಗಳ, ಏಕೀಭವಿಸಿದ ನೋಟವನ್ನು ನಿರ್ಮಿಸುತ್ತದೆ.

Binomial theorem

ದ್ವಿಪದೋಕ್ತಿ ಪ್ರಮೇಯ – ಎರಡು ಚರಾಕ್ಷರಗಳಿರುವ ಗಣಿತೋಕ್ತಿ ಅಥವಾ ದ್ವಿಪದೋಕ್ತಿಯನ್ನು ವಿಸ್ತರಿಸುವಾಗ ಬಳಸುವ ನಿಯಮ.

Bioluminescence 

ಜೀವಿಸೂಸಿತ ಪ್ರಕಾಶ – ಜೀವಿಗಳು ಹೊರಸೂಸುವ ತಾಪರಹಿತ ಬೆಳಕು. ಮಿಂಚುಹುಳುಗಳು, ಬ್ಯಾಕ್ಟೀರಿಯಾ, ಅಣಬೆಗಳು ಮತ್ತು ಸಮುದ್ರದಾಳದಲ್ಲಿರುವ ಅನೇಕ ಮೀನುಗಳು ಇಂತಹ ಬೆಳಕನ್ನು ಹೊರಸೂಸುತ್ತವೆ.

Biophysics 

ಜೈವಿಕ ಭೌತಶಾಸ್ತ್ರ  ಜೀವಶಾಸ್ತ್ರೀಯ ವಿದ್ಯಮಾನ(ಆಗುಹೋಗುಗಳಿಗೆ) ಭೌತಶಾಸ್ತ್ರದ ನಿಯಮಗಳನ್ನು ಅನ್ವಯಿಸುವ ಜ್ಞಾನಶಿಸ್ತು.

ಊರು ಉಪಕಾರ ಅರೀದು, ಹೆಣ ಶೃಂಗಾರ ಅರೀದು.

ಕನ್ನಡದ ಒಂದು ಪ್ರಸಿದ್ಧ ಗಾದೆ ಮಾತು ಇದು. ಊರ ಜನರಿಗೆ ಉಪಕಾರ ಮಾಡುವವರು, `ತಾವು ಊರಿಗೋಸ್ಕರ ಸೇವೆ, ತ್ಯಾಗ ಮಾಡುತ್ತಿದ್ದೇವೆ ಎಂಬ ಭಾವನೆ ಇಟ್ಟುಕೊಂಡಿದ್ದು, ತಮ್ಮಿಂದ ಉಪಕಾರ ಪಡೆದ ಜನ ಎಂದಾದರೂ ತಮ್ಮನ್ನು ನೆನೆಪಿಸಿಕೊಳ್ಳಬಹುದು ಎಂಬ ಒಳ ಆಸೆಯನ್ನು ಇಟ್ಟುಕೊಂಡಿರುತ್ತಾರೆ, ಆದರೆ ಎಷ್ಟೋ ಸಲ ಜನ ಆ ಘಳಿಗೆಯಲ್ಲಿ ಉಪಕಾರ ಮಾಡಿಸಿಕೊಂಡು ತುಂಬ ಕೃತಜ್ಞತೆ ತೋರುವವರಂತೆ ಕಂಡರೂ,

“ಕನ್ನಡ `ರಾಜ್ಯೋಸ್ತವಕ್ಕೆ ಚೀಫ್‌ಗೆಸ್ಟ್ ಬೇಕು, ಇಲ್ಲಿ ಸಿಗ್ತಾರಲ್ಲ?

ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿ ನವೆಂಬರ್ ತಿಂಗಳು ಬಂತೆಂದರೆ ಒಂದು ಗಡಿಬಿಡಿ ಪ್ರಾರಂಭವಾಗುತ್ತದೆ. ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ, ಕನ್ನಡ ಅಧ್ಯಾಪಕರನ್ನು ಅತಿಥಿಗಳಾಗಿ ಆಹ್ವಾನಿಸಲು ಆಯೋಜಕರು, ಸಂಘಟಕರು ಬರುವ ತಿಂಗಳು ಅದು.

Page 3 of 3

Kannada Sethu. All rights reserved.