ಈಚೆಗೆ ನಾನು ನಮ್ಮ ಕುಟುಂಬದ ಒಬ್ಬ ಸ್ನೇಹಿತರ ಮನೆಗೆ ಸಮಾರಂಭವೊಂದಕ್ಕಾಗಿ ಹೋಗಿದ್ದೆ. ಇನ್ನೂ ಕೆಲವು ನೆಂಟರಿಷ್ಟರು ಅಲ್ಲಿ ಸೇರಿದ್ದರು. ಅಲ್ಲಿ ಎಲ್ಲರ ಮಾತಿನ ಆಸಕ್ತಿಗೆ ಕಾರಣವಾದದ್ದು ಒಂದು ಸೋಫಾ ಸೆಟ್ಟು! ಇದಕ್ಕೆ ಕಾರಣವೇನೆಂದರೆ ಅಂದು ಅತಿಥೇಯರ ಮನೆಯ ಪಡಸಾಲೆಯ ನಡುಮಧ್ಯದಲ್ಲಿ ಒಂದು ಹೊಸ ಸೇಫಾ ಸೆಟ್ಟು ವಿರಾಜಮಾನವಾಗಿತ್ತು. ಹೆಚ್ಚು ಕಮ್ಮಿ ಬಿಳಿಬಣ್ಣದ್ದೇ ಅನ್ನಬಹುದಾದ ನೀಲಿಯ ಅತಿ ತಿಳಿ ಛಾಯೆಯ ಪೀಠಾವಳಿ ಅದು. ‘ಮೂರು ಲಕ್ಷ ರೂಪಾಯಿ ಕೊಟ್ಟು ಅದನ್ನು ಕೊಂಡಿದ್ದೀವಿ, ಆದರೆ ಈಗ ಅದರ ಮೇಲೆ ಒಂದು […]
ಫೀಲ್ಡ್ – ಕ್ಷೇತ್ರ- ಖಾಲಿ ಅವಕಾಶದಲ್ಲಿ ಕಣಗಳ ನಡುವೆ ನಡೆಯುವ ಅಂತರ್ ಕ್ರಿಯೆಯನ್ನು ವಿವರಿಸಲು ಪರಿಚಯಿಸಲ್ಪಟ್ಟ ಒಂದು ಪರಿಕಲ್ಪನೆ ಇದು. ಉದಾಹರಣೆಗೆ, ವಿದ್ಯುತ್ ಕ್ಷೇತ್ರ, ಕಾಂತ ಕ್ಷೇತ್ರ, ಗುರುತ್ವ ಕ್ಷೇತ್ರ.
ಫಿಶನ್ ಪ್ರಾಡಕ್ಟ್ಸ್ – ವಿದಳನ ಉತ್ಪನ್ನಗಳು – ಅಣುಬೀಜ ವಿದಳನದಿಂದ ಉತ್ಪತ್ತಿಯಾದ ಸ್ಥಿರ ಮತ್ತು ಅಸ್ಥಿರ ಸಮರೂಪಿಗಳು.
ಫಿಕ್ಸ್ಡ್ ಪಾಯಿಂಟ್ - ನಿಶ್ಚಿತ ಬಿಂದು – ಹಿಮಬಿಂದು, ಆವಿಬಿಂದು…..ಈ ಮುಂತಾದವುಗಳಂತೆ ಬಹು ಕರಾರುವಾಕ್ಕಾಗಿ ಪುನರುತ್ಪಾದಿಸಬಹುದಾದ ಒಂದು ಸಮತೋಲಿತ ಉಷ್ಣತೆ.
ಫಿಶನ್ ಟ್ರ್ಯಾಕ್ ಡೇಟಿಂಗ್ – ವಿದಳನ ಜಾಡು ಕಾಲನಿಗದಿ – ಗಾಜುಗಳು ಮತ್ತು ಇತರ ಖನಿಜಗಳು ಹೊಂದಿರುವ ಯುರೇನಿಯಂ ಮೂಲವಸ್ತುವು ತಂತಾನೇ ವಿದಳನಗೊಳ್ಳುವುದರಿಂದ ಉಂಟಾದ ಚೂರುಗಳು ಈ ಘನವಸ್ತುಗಳಲ್ಲಿ ಜಾಡುಗಳನ್ನು ಮಾಡಿರುತ್ತವೆ. ಈ ಜಾಡುಗಳನ್ನು ಅವಲಂಬಿಸಿ ಈ ಘನವಸ್ತುಗಳ ಕಾಲವನ್ನು ಅಳೆಯುವ ವಿಧಾನವೇ ‘ವಿದಳನ ಜಾಡು ಕಾಲನಿಗದಿ’.
ಫಿಶನ್ ರಿಯಾಕ್ಟರ್ – ವಿದಳನ ಪರಮಾಣು ಸ್ಥಾವರ – ಬೀಜಕೇಂದ್ರದ ವಿದಳನದಿಂದ ಉತ್ಪತ್ತಿಯಾಗುವ ಶಕ್ತಿಯನ್ನು ಉಪಯುಕ್ತ ಶಕ್ತಿಯಾಗಿ ಬಳಸಲು ಅನುವು ಮಾಡಿಕೊಡುವ ಒಂದು ಉಪಕರಣ.
Like us!
Follow us!