‘ವಿದ್ಯಾರ್ಥಿಗಳು ತುಂಬ ಲವಲವಿಕೆಯಿಂದ ಸಮಾರಂಭದಲ್ಲಿ ಭಾಗವಹಿಸಿದರು’. ‘ನರ್ತಕಿಯ ಲವಲವಿಕೆಯು ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿಸಿತು’. ‘ಹದಿಹರೆಯದ ಸಹಜ ಲವಲವಿಕೆಯಿಂದ ಕಂಗೊಳಿಸುತ್ತಿದ್ದ ಪ್ರೇಕ್ಷಕ ಸಮುದಾಯವು ಅತಿಥಿಗಳ ಗಮನ ಸೆಳೆಯಿತು’. ಇಂತಹ ವಾಕ್ಯಗಳನ್ನು ಓದಿದಾಗೆಲ್ಲ ನನಗೆ ಈ ‘ಲವಲವಿಕೆ’ ಎಂಬ ಪದದ ಬಗ್ಗೆ ಬಹಳ ಕುತೂಹಲ ಉಂಟಾಗ್ತಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟು ಈ ನಾಮಪದಕ್ಕೆ ‘ಉತ್ಸಾಹ, ಹುರುಪು, ಹಂಬಲ, ಆಸಕ್ತಿ’ ಎಂಬ ಅರ್ಥಗಳನ್ನು ಕೊಡುತ್ತದೆ. ಅದೇ ನಿಘಂಟಿನಲ್ಲಿ ‘ಲವಲವಿಸು’ ಎಂಬ ಕ್ರಿಯಾಪದ ಸಹ ಇದೆ. ಇದಕ್ಕೆ ‘ಉತ್ಸುಕವಾಗು, […]
ಹೋಡೋಸ್ಕೋಪ್ – ಗಮನ ಗ್ರಾಹಕ – ವಿದ್ಯುದಂಶ ಹೊಂದಿರುವ ( ಸಾಮಾನ್ಯವಾಗಿ ವಿಶ್ವಾತ್ಮಕ ಕಿರಣಗಳ) ಕಣಗಳ ಪಥವನ್ನು ಗೊತ್ತು ಮಾಡುವ ( ಅವುಗಳ ಜಾಡು ಹಿಡಿಯುವ) ಉಪಕರಣ.
ಹೈ ಟೆನ್ಶನ್ ( HT) – ಉಚ್ಚ ವಿದ್ಯುದೊತ್ತಡ/ ಉಚ್ಚ ವಿದ್ಯುತ್ ಸಾಮರ್ಥ್ಯ ವ್ಯತ್ಯಾಸ ಅಥವಾ ಹೈ ವೋಲ್ಟೇಜ್ – ನೂರು ವೋಲ್ಟ್ ಗಳು ಅಥವಾ ಅದಕ್ಕಿಂತ ಹೆಚ್ಚಿರುವ ವಿದ್ಯುತ್ ಸಾಮರ್ಥ್ಯ ವ್ಯತ್ಯಾಸ.
ಹೈ ಸ್ಪೀಡ್ ಸ್ಟೀಲ್ – ಉಚ್ಚ ವೇಗದ ಉಕ್ಕು – ಮಬ್ಬುಕೆಂಪು ತಾಪ( ಡಲ್ ರೆಡ್ ಹೀಟ್) ದಲ್ಲೂ ತನ್ನ ಕಾಠಿಣ್ಯವನ್ನು ಉಳಿಸಿಕೊಳ್ಳುವಂತಹ ಉಕ್ಕು. ಟಂಗ್ಸ್ಟನ್, ಕ್ರೋಮಿಯಂ, ಇಂಗಾಲ, ವೆನೆಡಿಯಂ, ಮಾಲಿಬ್ಡಿನಮ್ ಮತ್ತು ಇನ್ನೂ ಕೆಲವು ಲೋಹಗಳನ್ನು ಸೇರಿಸಿ ಇದನ್ನು ತಯಾರಿಸುತ್ತಾರೆ.
ಹೈ ಫ್ರೀಕ್ವೆನ್ಸಿ(HF) – ಉಚ್ಚ ಆವರ್ತನ – 3-30 ಮೆಗಾ ಹರ್ಟ್ಝ್ ವರೆಗಿನ ಆವರ್ತನವನ್ನು ಹೊಂದಿರುವ ವಿದ್ಯುತ್ಕಾಂತೀಯ ಅಲೆಗಳು, ಅಂದರೆ ಇವುಗಳ ತರಂಗಾಂತರವು 10-100 ಮೀಟರ್ ಆಗಿರುತ್ತದೆ.
ಹ್ಯೂಸ್ಲರ್ ಅಲ್ಲಾಯ್ಸ್ – ಹ್ಯೂಸ್ಲರರ ಮಿಶ್ರಲೋಹಗಳು – ಯಾವುದೇ ಪ್ರಬಲ ಅಯಸ್ಕಾಂತ ಮೂಲವಸ್ತುಗಳು ಇಲ್ಲದ, ವಿಶೇಷ ರೀತಿಯ ಮಿಶ್ರಲೋಹಗಳು. ವಿವಿಧ ವಿದ್ಯುನ್ಮಾನ ಉಪಕರಣಗಳಿಗೆ ಸಂಬಂಧಿಸಿದಂತೆ ಬಹೂಪಯೋಗಿಯಾದ ಇವನ್ನು 20ನೇ ಶತಮಾನದ ಜರ್ಮನ್ ಗಣಿಯಂತ್ರಜ್ಞಾನಿ ಕಾನ್ರಾಡ್ ಹ್ಯೂಸ್ಲರ್ ರು ಕಂಡುಹಿಡಿದರು.
ಹ್ಯೂರಿಸ್ಟಿಕ್ – ಮಾಡಿಕಲಿಯುವ ಅಥವಾ ಸ್ವಂತ ಅನ್ವೇಷಣೆಯ ವಿಧಾನ – ಸಮಸ್ಯೆಯನ್ನು ಪರಿಹಾರ ಮಾಡುವ ಯಾವುದೇ ಕ್ರಮವಿಧಿ ಇಲ್ಲದೆ ಇದ್ದಾಗ, ಮತ್ತೆ ಮತ್ತೆ ಮಾಡಿ ಮಾಡಿ ಸರಿಯಾದ ಪರಿಹಾರ ಹುಡುಕಿಕೊಳ್ಳುವ ರೀತಿ. ಬೇರೆ ಪದಗಳಲ್ಲಿ ಹೇಳಬೇಕೆಂದರೆ ಪ್ರಯತ್ನ ಮತ್ತು ತಪ್ಪುಗಳಿಂದ ( Trial and error) ಪರಿಹಾರ ಕಂಡುಕೊಳ್ಳುವ ವಿಧಾನ.
ಹೆಟಿರೋಡೈನ್ – ಅಲೆಸಂಯೋಜಕ ಅಥವಾ ಭಿನ್ನ ಅಲೆ ಮಿಶ್ರಕ – ಒಳಬರುತ್ತಿರುವ ಅಲೆಯೊಂದರ ಮೇಲೆ ತಾನೇ ಉತ್ಪತ್ತಿ ಮಾಡಿದ ರೇಡಿಯೋ ( ವಿದ್ಯುತ್ ಕಾಂತೀಯ) ಅಲೆಯೊಂದನ್ನು ಹಾಯಿಸಿ, ಬಡಿತವು ಉತ್ಪತ್ತಿಯಾಗುವಂತೆ ಮಾಡುವ ಉಪಕರಣ ಅಥವಾ ವಿಧಾನ.