ಹೆಟಿರೋಜೀನಸ್ ರಿಯಾಕ್ಟರ್ – ಭಿನ್ನವಸ್ತು ಮಿಶ್ರಿತ ಅಣುಸ್ಥಾವರ – ಇಂಧನವನ್ನು ಮಂದಕ ( moderator) ದಿಂದ ಪ್ರತ್ಯೇಕವಾಗಿ ಇರಿಸಿದ ಅಣುಸ್ಥಾವರ. ಇಲ್ಲಿ ನೂಟ್ರಾನುಗಳಿಗೆ ಭಿನ್ನವಸ್ತುಗಳಿಂದ ಕೂಡಿದ ಒಂದು ಮಿಶ್ರಣ ದೊರಕುತ್ತದೆ.
ಹರ್ಟ್ಝ್( Hz) – ಪುನರಾವರ್ತನೆಯ ಎಸ್.ಐ.ಮೂಲಮಾನ- 1 ಹರ್ಟ್ಝ್ – 1 ಸೆಕೆಂಡಿಗೆ ಒಂದು ಸುತ್ತು ಅಥವಾ 1 ಸೆಕೆಂಡಿಗೆ ಒಂದು ಆವರ್ತನ. ಜರ್ಮನಿಯ ವಿಜ್ಞಾನಿ ಹೇನ್ರಿಚ್ ಹರ್ಟ್ಝ್ ರ ನೆನಪಿನಲ್ಲಿ ಇಟ್ಟ ಹೆಸರು. ವಿದ್ಯುತ್ ಕಾಂತೀಯ ಅಲೆಗಳ ಅಸ್ತಿತ್ವವನ್ನು ವಾಸ್ತವಿಕವಾಗಿ ಮೊದಲ ಬಾರಿಗೆ ತೋರಿಸಿಕೊಟ್ಟವರಿವರು.
ಹೆನ್ರಿ( H) – ಹೆನ್ರಿ ( H) – ಸ್ವಯಂ ವಿದ್ಯುತ್ ಪ್ರೇರಕತೆ ಅಥವಾ ಪರಸ್ಪರ ವಿದ್ಯುತ್ ಪ್ರೇರಕತೆಯ ಎಸ್.ಐ.ಮೂಲಮಾನ ಇದು. 1H = 1 ವೆಬರ್ /ಆಂಪಿಯರ್. ಜೋಸೆಫ್ ಹೆನ್ರಿ (1797-1878) ಎಂಬ ಅಮೆರಿಕಾದ ಭೌತಶಾಸ್ತ್ರಜ್ಞರ ನೆನಪಿನಲ್ಲಿ ಇಟ್ಟ ಹೆಸರು. ವಿದ್ಯುತ್ ಪ್ರೇರಕತೆಯನ್ನು ಕಂಡು ಹಿಡಿದ ವಿಜ್ಞಾನಿ ಇವರು.