Hydrogen bomb

ಹೈಡ್ರೋಜನ್ ಬಾಂಬ್ – ಜಲಜನಕ ಸ್ಫೋಟವಸ್ತು (ಬಾಂಬು) – ಅತ್ಯಂತ ಹೆಚ್ಚಿನ ಉಷ್ಣತೆಯಲ್ಲಿ ಜಲಜನಕ ಬೀಜಕೇಂದ್ರಗಳ ಸೇರುವಿಕೆಯ ಪ್ರಕ್ರಿಯೆಗಳಿಂದ ನಿರ್ಮಿತವಾಗುವ ಬಲಾಢ್ಯ ಸ್ಫೋಟಕ ವಸ್ತು ಇದು. ಈ ಸೇರುವಿಕೆಯು ಉಷ್ಣತೆಯ ರೂಪದಲ್ಲಿ ಅತ್ಯಂತ ಹೆಚ್ಚಿನ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.

Hydroelectric power

ಹೈಡ್ರೋ ಎಲೆಕ್ಟ್ರಿಕ್ ಪವರ್ – ಜಲವಿದ್ಯುತ್ ಶಕ್ತಿ – ನೀರಿನ ಹರಿಯುವಿಕೆಯಿಂದ ಉತ್ಪತ್ತಿ ಮಾಡಿದ ವಿದ್ಯುಚ್ಛಕ್ತಿ. ಸಹಜ ಜಲಪಾತಗಳು ಈ ಶಕ್ತಿಗೆ ಆಕರವನ್ನು ಒದಗಿಸುತ್ತವೆ.

ಕನ್ನಡ ಗಾದೆಮಾತು – ಬಳ್ಳಿಗೆ ಕಾಯಿ ಭಾರವಾ? ಮರಕ್ಕೆ ಬಿಳಲು ಭಾರವಾ?

ಕನ್ನಡ ಭಾಷೆಯಲ್ಲಿ ಬಹಳವಾಗಿ ಬಳಕೆಯಲ್ಲಿರುವ ಗಾದೆ ಮಾತಿದು. ಬಹಳ ನವಿರು, ಕೋಮಲ ಅನ್ನಿಸುವ ಬಳ್ಳಿಗಳು ದಪ್ಪ ದಪ್ಪವಾದ ದೊಡ್ಡ ಕಾಯಿಗಳನ್ನು ಆರಾಮವಾಗಿ ಧರಿಸಿರುತ್ತವೆ ; ಆಲದ ಮರದಂತಹ ಮರಗಳು ದೊಡ್ಡ ದೊಡ್ಡ ಬಿಳಲುಗಳನ್ನು ಸರಾಗವಾಗಿ ಧರಿಸಿರುತ್ತವೆ‌. ಇದೇ ರೀತಿಯಲ್ಲಿ ತಂದೆ ತಾಯಂದಿರು (೯೯ ಶೇಕಡ) ತಮಗೆ ಎಷ್ಟೇ ಬಡತನ ಇದ್ದರೂ, ಎಷ್ಟೇ ಮಕ್ಕಳಿದ್ದರೂ ಅವರನ್ನು ಭಾರ ಎಂದುಕೊಳ್ಳದೆ ಅವರನ್ನು ಪ್ರೀತಿಯಿಂದ ಸಾಕುತ್ತಾರೆ. ಇಂತಹ ಸಂದರ್ಭದಲ್ಲಿ ಹುಟ್ಟಿರಬಹುದಾದ ಗಾದೆ ಮಾತಿದು. ಹಳೆಯ ಕಾಲದಲ್ಲಿ, ವಿವಾಹಿತ ಹೆಣ್ಣುಮಕ್ಕಳು ತಮ್ಮ ಗಂಡನ […]

ಕಾಳು ಮೆಣಸೋ…ಒಳ್ಳೆ ಮೆಣಸೋ…!

 ನಮ್ಮ ತಾಯಿಯವರು ಉಡುಪಿ ಮೂಲದವರಾಗಿದ್ದು ಕೊಡಗಿನಲ್ಲಿ ಬೆಳೆದವರು. ‌ಅವರು ಅಡಿಗೆ, ಊಟಗಳ ಬಗ್ಗೆ ಮಾತಾಡುವಾಗ ‘ಒಳ್ಳೆ ಮೆಣಸು’ ಎಂಬ ಪದವನ್ನು ಸಹಜವಾಗಿ ಬಳಸುತ್ತಿದ್ದರು. ಅವರು ಆ ಪದ ಬಳಸುತ್ತಿದ್ದುದು ಕರಿಮೆಣಸು/ಕಾಳು ಮೆಣಸು ಅಥವಾ ಮೆಣಸಿನ ಕಾಳು ಎಂಬ ಪದಕ್ಕೆ ಸಂವಾದಿಯಾಗಿ(ಪೆಪ್ಪರ್).  ಕನ್ನಡ ಮಾತಾಡುವ ಎಲ್ಲ ಮನೆಗಳಲ್ಲೂ  ಒಳ್ಳೆ ಮೆಣಸು ಎಂಬ  ಈ ಪದ ಬಳಕೆಯಲ್ಲಿದೆಯೇ ಎಂಬ ಕುತೂಹಲ ನನಗೆ. ಆದರೆ ಈ ಪದವನ್ನು ಜನ ಅಷ್ಟಾಗಿ ಬಳಸುವುದಿಲ್ಲವೇನೋ.   ಒಂದು ಮಸಾಲಾ ಪದಾರ್ಥದ ಹೆಸರಿನ ಹಿಂದೆ ಈ ‘ಒಳ್ಳೆ’ ಎಂಬ […]

Hydrodynamics

ಹೈಡ್ರೋಡೈನಮಿಕ್ಸ್ – ಜಲಚಲನಾ ಶಾಸ್ತ್ರ – ಒತ್ತರಿಸಲಾಗದ ( ಇನ್ಕಂಪ್ರೆಸ್ಸಿಬಲ್)  ದ್ರವಗಳ ಚಲನೆ ಮತ್ತು ತಮ್ಮ ಸೀಮೆಗಳ‌  ಜೊತೆ ಈ ದ್ರವಗಳ ಅಂತರ್ ಕ್ರಿಯೆಗಳನ್ನು ಕುರಿತ ಅಧ್ಯಯನ. 

Hydrology

ಹೈಡ್ರಾಲಜಿ‌ – ಜಲವಿಜ್ಞಾನ – ವಾತಾವರಣದ ವಾಯುಮಂಡಲ‌ ಹಾಗೂ ಜಲಮಂಡಲಗಳಲ್ಲಿ ನೀರು ಸಿಗುವಂತಹ ಸ್ಥಳಗಳು ಮತ್ತು ಇವಕ್ಕೆ ಸಂಬಂಧಿಸಿದ ಗುಣಲಕ್ಷಣಗಳ ಅಧ್ಯಯನ.

Hydrogen ion

ಹೈಡ್ರೋಜನ್ ಅಯಾನ್ – ಜಲಜನಕದ ವಿದ್ಯುದಣು – ಧನ ವಿದ್ಯುದಂಶವುಳ್ಳ ಜಲಜನಕದ ಪರಮಾಣು ಅಂದರೆ ಪ್ರೋಟಾನು.

Hydrogen electrode

ಹೈಡ್ರೋಜನ್ ಎಲೆಕ್ಟ್ರೋಡ್ – ಜಲಜನಕದ ವಿದ್ಯುದ್ವಾರ – ವಿದ್ಯುದ್ವಾರ ಸಾಮರ್ಥ್ಯವು ಸೊನ್ನೆಯಾಗಿರುವಂತೆ ಇರಿಸಿದ, ಜಲಜನಕವನ್ನು ಆಧರಿಸಿದ ಒಂದು ವಿದ್ಯುದ್ವಾರ. ಹೀಗಾಗಿ ಬೇರೆ ಮೂಲವಸ್ತುಗಳನ್ನು ಇದರೊಂದಿಗೆ ಹೋಲಿಸಬಹುದಾಗಿರುತ್ತದೆ.

Hydraulic press

ಹೈಡ್ರಾಲಿಕ್ ಪ್ರೆಸ್ – ಜಲಸಾಮರ್ಥ್ಯದ ಒತ್ತುಯಂತ್ರ – ದ್ರವವೊಂದರಲ್ಲಿನ ಒತ್ತಡದ ಮೂಲಕ‌ ಬಲಗಳು ವರ್ಗಾಯಿಸಲ್ಪಡುವ ಒಂದು ಯಂತ್ರ.

ಕನ್ನಡ ಗಾದೆಮಾತು – ಕಿಡಿ ಸಣ್ಣದಾದ್ರೂ ಕಾಡು ಸುಡಬಲ್ಲುದು.

ತುಂಬ ಅರ್ಥಪೂರ್ಣವಾದ ಗಾದೆಮಾತು ಇದು. ‌ಬೆಂಕಿ ಕಿಡಿ ಚಿಕ್ಕದು ಎಂದು ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಪುಟ್ಟ ಹುಲ್ಲಿನಿಂದ ಪ್ರಾರಂಭಿಸಿ ಪೊದೆ, ಗಿಡ, ಮರ ಎಲ್ಲವನ್ನೂ ಒಂದರ ಹಿಂದೆ ಒಂದರಂತೆ ಸುಡಬಲ್ಲುದು ಅದು. ಹಾಗೆಯೇ ಚಾಡಿಮಾತು, ಹೊಟ್ಟೆಕಿಚ್ಚು, ಒಳಸಂಚುಗಳಂತಹ ಕೆಟ್ಟ ಸಂಗತಿಗಳು ; ಶುರುವಿನಲ್ಲಿಯೇ ಅವುಗಳ ಬೇರು ಚಿವುಟದಿದ್ದರೆ ಇಡೀ ಬದುಕನ್ನೇ ಹಾಳು ಮಾಡಬಲ್ಲಂತಹ ಶಕ್ತಿ ಹೊಂದಿರುತ್ತವೆ‌‌. ಹೀಗಾಗಿ ಚಿಕ್ಕದೆಂದು ನಿರ್ಲಕ್ಷ್ಯ ಮಾಡದೆ ಇಂತಹ ‘ಬೆಂಕಿಯ ಕಿಡಿ’ಗಳನ್ನು ನಾವು ಬೇಗನೆ ನಂದಿಸಬೇಕು. ಇಲ್ಲದಿದ್ದರೆ ನಮ್ಮ ಬದುಕೆಂಬ ಶ್ರೀಮಂತ ಕಾಡು ನಾವು […]

Page 2 of 3

Kannada Sethu. All rights reserved.