ಹೀಗೇ ತತ್ರಾಪಿ ( casually) ಮಾತಾಡುತ್ತಿದ್ದಾಗ ನನ್ನ ಸಾಹಿತಿ-ಕಲಾವಿದ ಮಿತ್ರರೊಬ್ಬರು ಈಚೆಗೆ ತಮಗೆ ಆದ ಒಂದು ಪೇಚಿನ ಪ್ರಸಂಗವೊಂದನ್ನು ಹೇಳಿದರು. ಪದಗಳನ್ನು ಬಳಸುವಾಗ ಜಾಗ್ರತೆ ವಹಿಸದಿದ್ದರೆ ಏನಾಗಬಹುದು ಎಂಬುದಕ್ಕೆ ಈ ಪ್ರಸಂಗ ಉದಾಹರಣೆಯಾಗುತ್ತದೆ ಅನ್ನಿಸಿತು ನನಗೆ. ಅದಕ್ಕಾಗಿ ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಕೆಲವು ದಿನಗಳ ಹಿಂದೆ, ಬೆಂಗಳೂರಿನಿಂದ ಸುಮಾರು ಇನ್ನೂರು ಕಿ.ಮೀ. ದೂರ ಇರುವ ಊರಿನ ಸಾಹಿತ್ಯಕ ಸಂಘದವರೊಬ್ಬರು ಇವರಿಗೆ ದೂರವಾಣಿ ಕರೆ ಮಾಡಿ, ಮುಂದಿನ ವಾರ ಇಂತಹ ದಿನ ‘ಒಂದು ಸನ್ಮಾನ ಇಟ್ಕೊಂಡಿದೀವಿ, ದಯಮಾಡಿ ಬರಬೇಕು […]
ಹೈಬ್ರಿಡ್ ಐ ಸಿ – ಮಿಶ್ರ ವಿದ್ಯುನ್ಮಂಡಲ – ಒಂದು ಆಧಾರದ ಮೇಲೆ ( ಸಿಲಿಕಾನ್ ಚಿಪ್ಪು), ಒಂದು ಅಥವಾ ಅದಕ್ಕಿಂತ ಹೆಚ್ಚು ಭಾಗಗಳನ್ನು ಏರಿಸಿದ ಅಥವಾ ಜೋಡಿಸಿದ ವಿದ್ಯುನ್ಮಂಡಲ.
ಹೈಗನ್ಸ್ ಪ್ರಿನ್ಸಿಪಲ್ – ಹೈಗನ್ಸ್ ರ ಸಿದ್ಧಾಂತ – ಒಂದು ಅಲೆಯ ಮೇಲಿನ ಪ್ರತಿಯೊಂದು ಬಿಂದುವನ್ನು ಸಹ ಅದರಿಂದ ಹುಟ್ಟುವ ಆನುಷಂಗಿಕ ( ಪುಟ್ಟ ಹೊಸ) ಅಲೆಗಳ ಕೇಂದ್ರವೆಂಬಂತೆ ಪರಿಗಣಿಸಬಹುದು. ಈ ಹೊಸ ಆನುಷಂಗಿಕ ಅಲೆಗಳ ಅಡ್ಡಹಾಯುವಿಕೆಯ ಫಲಿತವಾಗಿ ಹುಟ್ಟುವ ಅಲೆಗಳು ಮೂಲ ಅಲೆಗಳ ತರಹವೇ ಇರುತ್ತವೆ.
ಹೈಗನ್ಸ್ ಕನ್ಸಟ್ರಕ್ಷನ್ – ಹೈಗನ್ ರ (ಅಲೆ)ನಿರ್ಮಿತಿ – ಈಗಾಗಲೇ ಇರುವ ಅಲೆಯೊಂದರಿಂದ ಅದರ ನಂತರ ಏಳುವ ಮತ್ತೊಂದು ಅಲೆಯನ್ನು ನಿರ್ಮಿಸುವ ಒಂದು ವಿಧಾನ. ಹೈಗನ್ ರ ಸಿದ್ಧಾಂತವು ಅಲೆಗಳ ಅಡ್ಡ ಹಾಯುವಿಕೆ( ಇಂಟರ್ ಫರೆನ್ಸ್) ಮತ್ತು ಹಬ್ಬುವಿಕೆ ( ಡಿಫ್ರ್ಯಾಕ್ಷನ್)ಗಳಿಗೆ ಉತ್ತಮವಾದ ವಿವರಣೆಯನ್ನು ನೀಡುತ್ತದೆ.
ಹ್ಯೂಮಿಡಿಟಿ – ತೇವಾಂಶ – ಗಾಳಿಯಲ್ಲಿರುವ ನೀರಿನ ಆವಿಯ ಅಂಶದ ಅಳತೆ ಇದು. ‘ಪರಮ ತೇವಾಂಶ’ವನ್ನು ವಾಯುವಿನ ಏಕಘಟಕ ಪರಿಮಾಣದಲ್ಲಿರುವ ನೀರಿನ ಆವಿಯ ಪ್ರಮಾಣವೆಂದು ನಿರೂಪಿಸಲಾಗುತ್ತದೆ.
ಹಮ್ಮ್ – ಗುಂಯ್ ಎಂಬ ಸದ್ದು – ವಿದ್ಯುತ್ ಬಲವರ್ಧಕವು ನೀಡುವ ಹೊರಹರಿವಿನಲ್ಲಿ ( ಔಟ್ ಪುಟ್) ಉಂಟಾಗುವ ಬಾಹ್ಯ, ಪರ್ಯಾಯ ವಿದ್ಯುತ್ ಪ್ರವಾಹಗಳು. ಇವುಗಳ ಮೂಲವು ನಮ್ಮ ಗಮನದಲ್ಲಿರುವ ಉಪಕರಣಕ್ಕೆ ಜೋಡಿಸಲಾದ ಒಂದು ಉಪಕರಣ ಅಥವಾ ಅದಕ್ಕೆ ಹತ್ತಿರದಲ್ಲಿ ಇರಿಸಿರುವ ವಿದ್ಯುನ್ಮಂಡಲಗಳಲ್ಲಿ ಇರುತ್ತದೆ.