ಕೆ.ಪಿ.ರಾವ್ ಎಂಬ ಕಾರ್ಯಧೀಮಂತ, ಕನ್ನಡ ‘ನುಡಿ’ ಶ್ರೀಮಂತ.

ನಮ್ಮ ನಲ್ಮೆಯ ಕನ್ನಡ ಭಾಷೆಯಲ್ಲಿ ಒಂದು ಒಳ್ಳೆಯ ಮಾತಿದೆ, ‘ತಂಪು ಹೊತ್ತಿನಲ್ಲಿ ನೆನೆಯಬೇಕಾದವರು’ ಅಂತ.‌ ಸ್ವಲ್ಪ ಮಟ್ಟಿಗೆ ಸಂಸ್ಕೃತದ ‘ಪ್ರಾತಃಸ್ಮರಣೀಯರು’ ಎಂಬ ಪದದ ಅರ್ಥಕ್ಕೆ ಹತ್ತಿರವಾದ ಪದ ಇದು‌.  ಕಿನ್ನಿಕಂಬಳ ಪದ್ಮನಾಭ ರಾವ್, ಜನಪ್ರಿಯವಾಗಿ ನಾವೆಲ್ಲರೂ ಬಲ್ಲಂತೆ ಕೆ.ಪಿ‌.ರಾವ್ ರು ಅಂತಹ ಒಬ್ಬ ವ್ಯಕ್ತಿ, ಅಂದರೆ, ನಾವು ತಂಪು ಹೊತ್ತಿನಲ್ಲಿ  ನೆನೆಯಬೇಕಾದವರು.  ಭಾಷೆಗಳ ಬಗೆಗೆ ಅಪಾರ ಕುತೂಹಲ, ಯಂತ್ರಗಳನ್ನು ಕುರಿತ ದೀರ್ಘಾವಧಿಯ ಪರಿಣತಿ ಹಾಗೂ ನಿರಂತರ ಕಲಿಕೆಯ ಬಗ್ಗೆ ಅತ್ಯಾಸಕ್ತಿ ಇರುವ ವ್ಯಕ್ತಿಯೊಬ್ಬರು, ತನ್ನ ನಾಡು, ನುಡಿಗೆ […]

Inertial mass

ಇನರ್ಷಿಯಲ್ ಮಾಸ್ – ಜಡತ್ವ ದ್ರವ್ಯರಾಶಿ – ಜಡತ್ವದ ಗುಣಲಕ್ಷಣದ ಆಧಾರದಿಂದ ಅಳೆದಂತಹ, ವಸ್ತುವಿನ ದ್ರವ್ಯರಾಶಿ.

Inertial frame

ಇನರ್ಷಿಯಲ್ ಫ್ರೇಮ್ – ಜಡತ್ವ ಚೌಕಟ್ಟು ‌- ನ್ಯೂಟನ್‌ರ ನಿಯಮಗಳು ಪಾಲಿಸಲ್ಪಡುವಂತಹ ನಿರ್ದೇಶಕ ಚೌಕಟ್ಟು.

Inertia

ಇನರ್ಷಿಯಾ – ಯಥಾಸ್ಥಿತಿ ಜಡತ್ವ –  ಇದು ವಸ್ತುವಿಗಿರುವ ಒಂದು ಆಂತರಿಕ ಗುಣ. ನ್ಯೂಟನ್ ರ ಮೊದಲ ಚಲನಾ ನಿಯಮವು ಈ ಗುಣವನ್ನು ನಿರೂಪಿಸುತ್ತದೆ. ಈ ಗುಣದಿಂದಾಗಿ‌ ವಸ್ತುವು ತಾನು ಇರುವ ವಿಶ್ರಾಂತ ಸ್ಥಿತಿ ಅಥವಾ ಚಲನೆಯ ಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಯನ್ನು ಪ್ರತಿರೋಧಿಸುತ್ತದೆ.

Inert gases

ಇನರ್ಟ್ ಗ್ಯಾಸಸ್ – ಜಡಾನಿಲಗಳು – ಹೀಲಿಯಂ, ಆರ್ಗಾನ್, ನಿಯಾನ್, ಕ್ರಿಪ್ಟಾನ್ ಮತ್ತು ಆರ್ಗ್ನೆಸಾನ್‌ – ಈ ಮೂಲವಸ್ತುಗಳು. ಇವುಗಳ ಅತ್ಯಂತ ಹೊರಗಿನ ಕಕ್ಷೆಯು ಸಂಪೂರ್ಣವಾಗಿ ತುಂಬಿರುತ್ತದೆ. 

Inelastic collission

ಇನೆಲಾಸ್ಟಿಕ್ ಕೊಲಿಷನ್ – ಸ್ಥಿತಿಸ್ಥಾಪಕವಲ್ಲದ ಢಿಕ್ಕಿ ‌- ಚಲನಶಕ್ತಿಯು ನಷ್ಟವಾಗುವಂತಹ ಢಿಕ್ಕಿಯನ್ನು ಸ್ಥಿತಿಸ್ಥಾಪಕವಲ್ಲದ ಢಿಕ್ಕಿ ಎನ್ನುತ್ತಾರೆ. ಇಲ್ಲಿ ಚಲನಶಕ್ತಿಯ ಒಂದಷ್ಟು ಭಾಗವು ಆಂತರಿಕ ಶಕ್ತಿಯಾಗಿ ಮಾರ್ಪಾಡಾಗುತ್ತದೆ.

ಕನ್ನಡ ಗಾದೆ ಮಾತು – ಸೌಟಿಗೇನು ಗೊತ್ತು ಸಾರಿನ ರುಚಿ?

ಜೀವನದ ಒಂದು ವಿಪರ್ಯಾಸವನ್ನು ಈ ಗಾದೆಮಾತು ಹೇಳುತ್ತಿದೆ. ಸೌಟು ಸದಾಕಾಲವೂ ರುಚಿಕರವಾದ ಸಾರಿನಲ್ಲೇ ಇದ್ದರೂ ಅದಕ್ಕೆ ಸಾರಿನ ರುಚಿಯನ್ನು ಸವಿಯುವ ಸಾಮರ್ಥ್ಯ ಇರುವುದಿಲ್ಲ. ಇದೇ ರೀತಿಯಲ್ಲಿ ಮನೆ ತುಂಬಾ ಪುಸ್ತಕಗಳಿದ್ದರೂ ಒಂದು ಪುಸ್ತಕವನ್ನೂ ಓದದವರು, ಅತಿ ಸುಂದರವಾದ ಹೂವಿನ ತೋಟದಲ್ಲಿ ಓಡಾಡುತ್ತಿದ್ದರೂ ಒಂದೇ ಒಂದು ಹೂವಿನ ಅಂದವನ್ನೂ ಕಣ್ತುಂಬಿಕೊಳ್ಳದವರು, ಮುದ್ದಾದ ಮಕ್ಕಳ ನಡುವೆ ಇದ್ದರೂ ಒಂದೇ ಒಂದು ಮಗುವಿನ ಮುಗ್ಧ ಚೈತನ್ಯದ ಸಂತೋಷವನ್ನು ಅನುಭವಿಸದವರು, ಅವಕಾಶವಿದ್ದರೂ ಜೀವನ ಸಮೃದ್ಧಿಯಿಂದ ವಂಚಿತರಾಗುತ್ತಾರೆ. ಬದುಕಿನ ಒಂದು ನೈಜ ವಿಷಾದವನ್ನು ಈ […]

ಆಟೋರಿಕ್ಷಾದ ಹಿಂದೆ ಬರೆದಿದ್ದ ಸಾಲು…ಕನ್ನಡನಾಡಿನಲ್ಲಿ‌ ಜ್ಞಾನ ಸಿಗುವುದು ಅನಿರೀಕ್ಷಿತ ಸ್ಥಳಗಳಲ್ಲೂ!

ಮೊನ್ನೆ ದಿನ, ಎಂದಿನಂತೆ ನನ್ನ ದ್ವಿಚಕ್ರಿಣಿಯಲ್ಲಿ( ಹೊಂಡಾ ಆಕ್ಟಿವಾ ಸ್ಕೂಟರು) ನಾನು ಕಾಲೇಜಿಗೆ ಹೋಗುತ್ತಿದ್ದಾಗ, ರಾಜಾಜಿನಗರ ಪ್ರವೇಶಸ್ಥಳದಲ್ಲಿ ( ಎಂಟ್ರೆನ್ಸ್) ರಸ್ತೆಗಳು  ಕೂಡುವ ಬಿಂದುವಿನಲ್ಲಿ ಸಂಚಾರದೀಪ ಕೆಂಪಾಯಿತು. ಸರಿ, ಗಾಡಿ ನಿಲ್ಲಿಸಿ, ಆ ದೀಪ ಹಸಿರಾಗಲು ಕಾಯುತ್ತಿದ್ದೆ. ಆಗ ನನ್ನ ಮುಂದೆ ನಿಂತಿದ್ದ ಆಟೋರಿಕ್ಷಾ ಒಂದರ ಹಿಂದೆ ಬರೆದಿದ್ದ ಬರಹವೊಂದು ನನ್ನ ಗಮನ ಸೆಳೆಯಿತು.  “ಹೇಳಿ ಮಾಡಿಸಿದ ಜೋಡಿ ಅನ್ನುವುದು ಸಿಗುವುದು ಚಪ್ಪಲಿಯ ವಿಷಯದಲ್ಲಿ ಮಾತ್ರ, ಇನ್ನೆಲ್ಲ‌ ಹೊಂದಾಣಿಕೆ” ಎಂಬ ಸಾಲು ಅದು! ಅಬ್ಬ ಅನ್ನಿಸಿತು‌. ಬದುಕಿನ […]

Page 3 of 3

Kannada Sethu. All rights reserved.