ಇಂಟರ್ ಪ್ಲ್ಯಾನೇಟರಿ ಸ್ಪೇಸ್ – ಅಂತರ್ ಗ್ರಹ ಸ್ಥಳಾವಕಾಶ – ಸೌರವ್ಯೂಹದಲ್ಲಿ ಸೂರ್ಯ ಮತ್ತು ಮತ್ತು ಗ್ರಹಗಳ ನಡುವೆ ಇರುವಂತಹ ಸ್ಥಳ. ಇದರಲ್ಲಿ ಅಂತರ್ ಗ್ರಹ ವಸ್ತುಕಣಗಳು ಇರುತ್ತವೆ.
ಇಂಟರ್ ನ್ಯಾಷನಲ್ ಕ್ಯಾಂಡಲ್ – ಇಂಟರ್ ನ್ಯಾಷನಲ್ ಕ್ಯಾಂಡಲ್ – ಪ್ರಕಾಶಮಾನ ತೀಕ್ಷ್ಣತೆಯನ್ನು ಸೂಚಿಸುವ ಹಿಂದಿನ ಕಾಲದ ಒಂದು ಮೂಲಮಾನ. ಇದು ಅಂದಾಜು 1.0183 ಕ್ಯಾಂಡಲಾಗೆ ಸಮ. ಮೂಲತಃ ಇದನ್ನು ಒಂದು ನಿರ್ದಿಷ್ಟ ವಿದ್ಯುತ್ ದೀಪದಿಂದ ಒಂದು ಸೆಕೆಂಡ್ ಗೆ ಹೊರಸೂಸಲ್ಪಟ್ಟ ಬೆಳಕು ಎಂದು ವ್ಯಾಖ್ಯಾನಿಸಲಾಗಿತ್ತು. ನಂತರ, ಎಸ್ ಐ ಮೂಲಮಾನವಾದ ಕ್ಯಾಂಡೆಲಾ ಇದನ್ನು ಸ್ಥಾನಪಲ್ಲಟಿಸಿತು.
ಇಂಟರ್ನಲ್ ರೆಜಿಸ್ಟೆನ್ಸ್ – ಆಂತರಿಕ ಪ್ರತಿರೋಧ – ವಿದ್ಯುಚ್ಛಕ್ತಿಯ ಆಕರವೊಂದರಲ್ಲಿರುವ ಪ್ರತಿರೋಧ.
ಇಂಟರ್ ಮೀಡಿಯೆಟ್ ರಿಯಾಕ್ಟರ್ – ಮಧ್ಯಮಗತಿಯ ಅಣುಸ್ಥಾವರ – ಇದೊಂದು ವಿಶೇಷ ರೀತಿಯ ಅಣುಸ್ಥಾವರ. ಇದರಲ್ಲಿ ಬೀಜಕೇಂದ್ರದ ಸರಣಿಕ್ರಿಯೆಯನ್ನು ಮಧ್ಯಮಗತಿಯ ನ್ಯೂಟ್ರಾನುಗಳು ನಿರ್ವಹಿಸುತ್ತಿರುತ್ತವೆ.
ಇಂಟರ್ ಮೀಡಿಯೆಟ್ ನ್ಯೂಟ್ರಾನ್ಸ್ – 100 eV ಯಿಂದ 10000 eV ವರೆಗಿನ ಶಕ್ತಿಯನ್ನು ಹೊಂದಿರುವ ನ್ಯೂಟ್ರಾನುಗಳು.
ಇಂಟರ್ನಲ್ ಎನರ್ಜಿ : ಸಿಂಬಲ್ U – ಆಂತರಿಕ ಶಕ್ತಿ (ಸಂಕೇತ U) – ಒಂದು ವ್ಯವಸ್ಥೆಯಲ್ಲಿನ ಅಣುಗಳು ಹಾಗೂ ಪರಮಾಣುಗಳ ಚಲನಾ ಶಕ್ತಿ ಮತ್ತು ಅಂತಃಶಕ್ತಿಗಳ ಒಟ್ಟು ಮೊತ್ತ.
ಇಂಟರ್ನಲ್ ಕಂಬಶ್ಚನ್ ಇಂಜಿನ್ – ಆಂತರಿಕ ದಹನ ಯಂತ್ರ – ಉಗಿ ಯಂತ್ರಗಳಲ್ಲಿರುವಂತೆ ಪ್ರತ್ಯೇಕ ಕುಲುಮೆಯಿಲ್ಲದೆ, ಇಂಧನವನ್ನು ತನ್ನಲ್ಲಿಯೇ ಇರುವ ದಹನ ಘಟಕಗಳಲ್ಲಿ ಉರಿಸುವಂತಹ ಒಂದು ತಾಪಯಂತ್ರ.
Like us!
Follow us!