ಮಕ್ಕಳಿಗೆ ಊಟತಿಂಡಿ ಮಾಡಿ ಹಾಕುವ ತಾಯಂದಿರಿಗೆ ಮಕ್ಕಳ ಬೇಡಿಕೆಗಳನ್ನು ಪೂರೈಸುವ ಸಂದರ್ಭದಲ್ಲಿ ಕೆಲವೊಮ್ಮೆ ನಗೆ ಹುಟ್ಟಿಸುವ ಅನುಭವಗಳಾಗುತ್ತವೆ. ನಮ್ಮ ಮನೆಯಲ್ಲೂ ಇತ್ತೀಚೆಗೆ ಇಂತಹ ಒಂದು ಅನುಭವ ಆಯಿತು. ನನ್ನ ಚಿಕ್ಕ ಮಗಳು ಪ್ರಣತಿ ತುಂಬ ಸೂಕ್ಷ್ಮವಾದ ರುಚಿಪ್ರಜ್ಞೆ ಇರುವ ಹುಡುಗಿ ; ಕೇವಲ ಪರಿಮಳ ನೋಡಿ ಖಾದ್ಯಪದಾರ್ಥ ತನಗೆ ಬೇಕೋ ಬೇಡವೋ ಎಂದು ನಿರ್ಧರಿಸಿಬಿಡುತ್ತಾಳೆ! ಅವಳು ಎಳೆಯ ಪುಟಾಣಿ ಆಗಿದ್ದಾಗಿನಿಂದಲೂ ಅವಳಿಗೆ ಇಷ್ಟವಾಗುವಂತೆ ತಿಂಡಿ-ಅಡಿಗೆ ಮಾಡುವುದು ನನಗೆ ಮತ್ತು ನಮ್ಮ ಮನೆಗೆಲಸ ಸಹಾಯಕರಾದ ಯಲ್ಲಮ್ಮರಿಗೆ ಸವಾಲಿನ ಸಂಗತಿಯೇ. […]
ಇಂಟರ್ ಮಾಲಿಕ್ಯುಲಾರ್ ಫೋರ್ಸಸ್ – ಅಂತರ್ ಅಣುವಿಕ ಬಲಗಳು – ಅಣುಗಳು ಮತ್ರು ಪರಮಾಣುಗಳ ನಡುವಿನ ಬಲಗಳು. ಇವು ಆಕರ್ಷಣೆಯ ಬಲಗಳಾಗಿರುತ್ತವೆ.
ಇಂಟರ್ ಫೆರ್ರೋಮೀಟರ್ – ಅಲೆ ಹಾಯುವಿಕೆಯ ಮಾಪಕ – ಬೆಳಕಿನ ತರಂಗಾಂತರ, ವರ್ಣಪಟಲದ ಗೆರೆಗಳ ಅತಿಸೂಕ್ಷ್ಮ ರಚನೆಗಳು, ಬೇರೆ ಬೇರೆ ವಸ್ತುಗಳ ವಕ್ರೀಭವನ ಸೂಚ್ಯಂಕಗಳು ….ಈ ಮುಂತಾದ ಇನ್ನೂ ಹಲವು ಸಂಗತಿಗಳನ್ನು ನಿಖರವಾಗಿ ಅಳೆಯಲು ಬಳಸುವ ದೃಶ್ಯೋಪಕರಣ.
ಇಂಟರ್ಫೆರೆನ್ಸ್ – ಅಡ್ಡ ಹಾಯುವಿಕೆ – ಒಂದು ಅಲೆಯ ಮೇಲೆ ಇನ್ನೊಂದು ಅಲೆಯು ಹಾಯ್ದಾಗ ಉಂಟಾಗುವ ಪರಿಣಾಮ.
ಇಂಟೆನ್ಸಿಫೈಯರ್ – ತೀಕ್ಷ್ಣಕಾರಕ – ಛಾಯಾಚಿತ್ರ ಮಾಧ್ಯಮದ ಧನಾತ್ಮಕ ಅಥವಾ ಋಣಾತ್ಮಕ ಬಿಂಬವನ್ನು ತೀಕ್ಷ್ಣ ಗೊಳಿಸುವ ಅಥವಾ ಬಲಪಡಿಸುವ ವಸ್ತು.
ಇಂಟಿಗ್ರೇಟರ್ – ಸಂಕಲನ( ಕೂಡುವ) ಯಂತ್ರ – ನಿರಂತರ ಕೂಡುವಿಕೆ ಎಂಬ ಗಣಿತಕ್ರಿಯೆಯನ್ನು ಮಾಡಲು ಬಳಸುವ ಯಂತ್ರಚಾಲಕ ಅಥವಾ ವಿದ್ಯುತ್ ಉಪಕರಣ.