ಇದು ಕನ್ನಡ ಭಾಷೆಯ ಒಂದು ಸ್ವಾರಸ್ಯಕರ ಗಾದೆಮಾತು. ಜನರು ಕೆಲವು ಸಲ ಅನಗತ್ಯವಾಗಿ ತೊಂದರೆಗಳನ್ನು ಆಹ್ವಾನಿಸಿಕೊಂಡಾಗ ಈ ಗಾದೆಮಾತನ್ನು ನೆನಪಿಸಿಕೊಳ್ಳಲಾಗುತ್ತದೆ. ಗೊತ್ತಿದ್ದೂ ಗೊತ್ತಿದ್ದೂ ಜಗಳಗಂಟರೊಡನೆ ಜಗಳಕ್ಕೆ ಹೋಗುವುದು, ಇಷ್ಟವಿಲ್ಲದ ಕೆಲಸವನ್ನು ಮಾಡಲು ಒಪ್ಪಿಕೊಂಡು ಆಮೇಲೆ ಪೇಚಾಡುವುದು, ಮಲಗಿದ್ದ ನಾಯಿಗೆ ಕಲ್ಲೆಸೆದು ಅದಕ್ಕೆ ಕೋಪ ಬರಿಸಿ ಅದರಿಂದ ಕಚ್ಚಿಸಿಕೊಂಡು ಒದ್ದಾಡುವುದು ಇಂತಹ ಬುದ್ಧಿಹೀನ ಕೆಲಸಗಳನ್ನು ತಮ್ಮ ಪರಿಚಿತರು ಮಾಡಿದಾಗ “ನೋಡು, ಇರಲಾರದೆ ಇರುವೆ ಬಿಟ್ಕೊಂಡ್ರು!’ ಎಂದು ಜನ ಮಾತಾಡಿಕೊಳ್ಳುತ್ತಾರೆ. ಇರುವೆಗಳು ಮೈಮೇಲೆ ತಾವಾಗಿ ಬಂದಾಗಲೇ ಎಷ್ಟು ಹಿಂಸೆ, ಕಿರಿಕಿರಿ, ತುರಿಕೆ, ಗಾಯ ಆಗುತ್ತದೆ ಎಂದು ನಮಗೆ ಗೊತ್ತಿದೆ. ಹಾಗಿರುವಾಗ ತಮ್ಮ ಪಾಡಿಗೆ ತಾವು ಸುಮ್ಮನೆ ಹೋಗುತ್ತಿದ್ದ ಇರುವೆಗಳನ್ನು ತೆಗೆದು ಮೈಮೇಲೆ ಬಿಟ್ಟುಕೊಳ್ಳುವುದೆಂದರೆ! ಇದು ಮೂರ್ಖತನದ ಪರಮಾವಧಿಯಲ್ಲವೇ!? ಹೀಗೆ, ನಾವು ಅರ್ಥ ಮಾಡಿಕೊಂಡು ಅದರಿಂದ ಕಲಿತರೆ, ಜೀವನದಲ್ಲಿ ತುಂಬ ಸಹಾಯ ಮಾಡುವ ಒಂದು ವಿವೇಕಯುತ ಸಂಗತಿಯನ್ನು ಈ ಗಾದೆಮಾತು ತುಂಬ ಚಿತ್ರಕವಾಗಿ ಹೇಳುತ್ತದೆ.
Kannada proverb- Iralaarade iruve bitkondranthe (Instead of staying quite, they took ants on their body it seems!)
This is a very interesting proverb in Kannada language. Some people have the habit of inviting trouble! For example they irritate a person unnecessarily even when they know that he/she is quarrelsome, they would throw stones at a sleeping dog at get bitten … etc. As it is, it is a painful experience to have biting ants all over your body. But if you yourself take some moving ants and put on your body, isn’t it inviting trouble? So this proverb points to a foolish behavior in human beings and warns us against it, in a very picturesque manner.