ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದು ಮುಖ್ಯವಾದ ವಿಷಯವು ಈ ಗಾದೆಮಾತಿನಲ್ಲಿದೆ.‌ ನಾವು ತಿನ್ನುವ ತುತ್ತು ತುಸು ಕಡಿಮೆಯಾದರೂ ಪರವಾಗಿಲ್ಲ, ಆದರೆ ಅದು ಹೆಚ್ಚಾಗಬಾರದು‌. ಹೆಚ್ಚಾದರೆ ಅಜೀರ್ಣ, ತೂಕದ ಸಮಸ್ಯೆ, ಜಡತೆ….ಹೀಗೆ ಏನೇನೋ ಸಮಸ್ಯೆಗಳು‌ ಬರುತ್ತವೆ. ಆದ್ದರಿಂದ ನಾವು ತುತ್ತು ಹೆಚ್ಚಾದರೆ ಕುತ್ತು ಅಥವಾ ಅಪಾಯ ಎಂಬ ಗಾದೆಮಾತನ್ನು ಮರೆಯಬಾರದು. ಈ ವಿಷಯಕ್ಕೆ ಬಂದಾಗ, ಎಂಬತ್ತು ಶೇಕಡ ಮಾತ್ರ ಹೊಟ್ಟೆ ತುಂಬಿಸಿಕೊಳ್ಳುವ  ಜಪಾನೀ ಜನರ ಆಹಾರದ ಅಭ್ಯಾಸ ನಮಗೆ  ಮೇಲ್ಪಂಕ್ತಿಯಾಗಬೇಕು.

Kannada proverb – Thuththu hechchadre kuththu ( It is dangerous if you eat too much).

This Kannada proverb offers a good health tip. What we  eat should never exceed a limit. If we eat too much we get problems like indigestion, wait gain, slumpyness etc. In this aspect the Japanese people have set a role model for all of us. It is their habit to stop eating when they just start to feel full, that means they fill only 80% of their tummy with food. They leave some space for air,  inside them. We need to keep this in mind when we eat.