ಕನ್ನಡದಲ್ಲಿ ಆಗಾಗ ಬಳಕೆಯಾಗುವ ಗಾದೆ ಮಾತು ಇದು. ‘ಇನ್ನೇನು ನಮ್ಮ ಮೇಲೆ ಬೀಸಲಿರುವ ದೊಣ್ಣೆಯ ಏಟು ತಕ್ಷಣಕ್ಕೆ ತಪ್ಪಲಿ, ಹಾಗೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಸಿಕ್ಕಿದಂತೆ ಆಗುತ್ತೆ, ಮುಂದೆ ನೋಡಿಕೊಳ್ಳೋಣ’ ಎಂಬ ಚಿಂತನೆ ಈ ಗಾದೆಮಾತಿನ ಹಿನ್ನೆಲೆಯಲ್ಲಿದೆ. ನಿಜ ಜೀವನದಲ್ಲಿ ಬರುವ ಅನೇಕ ತ್ರಾಸದಾಯಕ ಸಂದರ್ಭಗಳು ಈ ಜಾಣ್ಣುಡಿಯನ್ನು ನೆನಪಿಸಿಕೊಳ್ಳುವಂತೆ ಮಾಡುತ್ತವೆ. ಉದಾಹರಣೆಗೆ,
ನ್ಯಾಯಾಲಯದ ಪ್ರಕರಣಗಳಲ್ಲಿ ತಡೆಯಾಜ್ಞೆ ಸಿಕ್ಕಿದರೆ, ತುಂಬ ಕಷ್ಟವಾದ ವಿಷಯಗಳ ಪರೀಕ್ಷೆಗಳು ಮುಂದೂಲ್ಪಟ್ಟರೆ, ಉದ್ಯೋಗಿಗಳಿಗೆ ಕೆಲಸದ ಸ್ಥಳದಿಂದ ಆಗುವಂತಹ, ಇಷ್ಟವಿಲ್ಲದ ವರ್ಗಾವಣೆ ಯಾವುದೋ ಕಾರಣಕ್ಕಾಗಿ ಆ ವರ್ಷ ಆಗದಿದ್ದರೆ ……ಇಂತಹ ಸಂದರ್ಭಗಳಲ್ಲಿ, ಅಂದರೆ, ಆಗಬಹುದಾದ ತೊಂದರೆಗಳು ತಾತ್ಕಾಲಿಕವಾಗಿ ತಪ್ಪಿದರೆ, ಈ ಗಾದೆಮಾತನ್ನು ಬಳಸುತ್ತಾರೆ.
Kannada Proverb : Beeso donne tappidre saavira varsha aayassu( If I can dodge the stick which is about to beat me, I will gain thousand years of life!).
We humans do not like troubles, therefore, in some way, any which way we want to escape from them. Therefore even if we get a temporary respite or relief from our troubles, we feel happy. A stick which is about to strike on us is a danger. By some chance or luck, if that striking is cancelled or missed, we feel that we earned a thousand years to live! Similarly, if we get a stay order in a court case, if a difficult examination is postponed or a transfer to an inconvenient place is temporarily postponed, this is the proverb which comes to mind. It shows one basic, trouble avoiding nature of all human beings.