ಕನ್ನಡ ಭಾಷೆಯಲ್ಲಿ ಆಗಾಗ ಬಳಕೆಯಾಗುವ ಗಾದೆಮಾತು ಇದು.

 ನಮ್ಮ ತಲೆ ( ಮಂಡೆ) ಗಟ್ಟಿ ಇದೆ ಎಂದು ನಾವು ಭಾವಿಸಿ, ಅದಕ್ಕಿಂತ ಸಾವಿರ ಪಾಲು ಗಟ್ಟಿ ಇರುವ ಬಂಡೆಗಲ್ಲಿಗೆ ಅದನ್ನು ಚಚ್ಚಿದರೆ ನಮ್ಮ ತಲೆ ಉಳಿದೀತೇ? ಇಲ್ಲ. ಒಡೆದು ರಕ್ತ ಬರುತ್ತದೆ. ಹಾಗೆಯೇ ಜೀವನದಲ್ಲಿ ಕೆಲವು ಸಲ ಅತಿ ಕಠಿಣ  ಸಮಸ್ಯೆ, ಸನ್ನಿವೇಶಗಳು ಎದುರಾಗುತ್ತವೆ. ಅಂತಹ ಸಮಯದಲ್ಲಿ ನಮ್ಮ ಕೈಯಿಂದ ಪರಿಹಾರ  ಇದನ್ನು ಪರಿಹಾರ ಮಾಡಲು ಸಾಧ್ಯವೇ?, ಆ ಶಕ್ತಿ ಸಾಮರ್ಥ್ಯ  ನಮಗಿದೆಯೇ? ಎಂದು ಯೋಚಿಸಿ ನಾವು ಮುಂದಿನ ಹೆಜ್ಜೆ ಇಡಬೇಕು‌.  ಹಾಗಲ್ಲದೆ ನಾವು ದುಡುಕಿ ಧುಮುಕಿದರೆ ಭಾರೀ ಅನಾಹುತಗಳನ್ಬು ಎದುರಿಸಬೇಕಾದೀತು. ಉದಾಹರಣೆಗೆ, ಆಯುಧದಾರಿ ಕಳ್ಳರು/ದರೋಡೆಕಾರರ ಗುಂಪನ್ನು ಒಬ್ಬರೇ ಎದುರಿಸಲು ಹೋಗುವುದು, ರಾಜಕೀಯ, ಆರ್ಥಿಕ ಬೆಂಬಲ ಇರುವ ಅತಿಭ್ರಷ್ಟ ವ್ಯಕ್ತಿಗಳನ್ನು ಸರಿಯಾಗಿ ಯೋಜನೆ, ಯೋಚನೆ ಮಾಡದೆ ಪ್ರಶ್ನಿಸುವುದು, ಓಡುತ್ತಿರುವ ರೈಲನ್ನು ಹತ್ತಿಬಿಡುವೆ ಎಂದು ಓಡುವುದು…. ಇಂಥವು ನಮಗೆ ನಾವೇ ಅಪಾಯ. ತಂದುಕೊಳ್ಳುವ ಸಂದರ್ಭಗಳು. ಈ ರೀತಿಯ ಸನ್ನಿವೇಶಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲೆಂದೇ ನಮ್ಮ ಹಿರಿಯರು ಈ ಗಾದೆಮಾತನ್ನು ಬಳಕೆಗೆ ತಂದಿದ್ದಾರೆ  ಅನ್ನಿಸುತ್ತೆ. 

Kannada proverb – Mande gatti antha bandege chachchidranthe (He repeatedly hit his head against the boulder thinking that his head is very hard and strong). 

Sometimes we humans overestimate our capacities and strength. It is true that our head/skull is strong and hard, but it is not stronger than a hard boulder or rock. If we hit our head against a hard rock repeatedly, it is sure that we end up getting bruised badly. Similarly, in some situations of life, for example dealing with a set of goons or extremely corrupt persons we should not behave in a risky way,  i.e. we should not go to attacking mode without thinking. We need  to asses the pros and cons of our actions and also think hard about our limits, when we encounter the tough and unfair things of life. The proverb warns us against risky behavior, where we are overestimating our strength.