ಕುವೆಂಪು ಅವರು ಬರೆದ ಸಾಲಿದು. `ದೋಣಿ ಸಾಗಲಿ ಮುಂದೆ ಹೋಗಲಿ ಗೇಯಕವಿತೆಯ(ಹಾಡಲಾಗುವ ಕವಿತೆ) ಕೊನೆಯ ಸಾಲು. ನಿನ್ನೆಯ ಚಿಂತೆ, ನಾಳಿನ ಚಿಂತೆ ನಮ್ಮ ಇಂದಿನ ಸಮಯವನ್ನು ಹಾಳು ಮಾಡುತ್ತದೆ. ಹೀಗಾಗಿ ಇವತ್ತು ನಮ್ಮ ಕೈಯಲ್ಲಿ ಏನಿದೆಯೋ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ನಿನ್ನೆಯನ್ನು ನಾವು ಬದಲಾಯಿಸಲಾಗುವುದಿಲ್ಲ, ನಾಳೆಯನ್ನು ಇಂದೇ ಜೀವಿಸಲಾಗುವುದಿಲ್ಲ. ಹೀಗಾಗಿ `ಇಂದು ಅಂದರೆ ಈ ದಿನವು ನಮಗೆ ಕೊಡುವ ಉಡುಗೊರೆಗಳಿಗೆ ನಾವು ಕುರುಡಾಗುವುದು ಬೇಡ ಎಂಬುದು ಈ ಕವಿನುಡಿಯ ಅರ್ಥ. ಈ ಗೀತೆಯು ಹಳೆಯ ಕಾಲದ ಪ್ರಸಿದ್ಧ ಕನ್ನಡ ಚಲನಚಿತ್ರವಾದ `ಮಿಸ್ ಲೀಲಾವತಿಯಲ್ಲಿ ಸೇರಿದೆ.
Poet speak: ninne ninnege indu indige irali naaleyu naalege (Let yesterday and tomorrow be in their places, think of just today).
This is a line penned by the Great Kannada poet Kuvempu(Kuppalli Venkatappa Puttappa). It means that one should not worry too much about yesterday and tomorrow, but just live today’s life as it comes. This is the last line of the famous song in Kannada language, `doni saagali munde hogali’ which is included in the film good old Kannada movie Miss Leelvathi.