ಬೆಂಗಳೂರಿನ ಕೋಣನಕುಂಟೆಯಲ್ಲಿ ಒಂದು ಮಹಿಖಾ ಸಂಘವಿದೆ, ‘ಆದರ್ಶ ಮಹಿಳಾ ಸಂಘ’ ಎಂದು ಅದರ ಹೆಸರು. ನೂರೈವತ್ತಕ್ಕೂ ಹೆಚ್ಚು ಸದಸ್ಯೆಯರಿರುವ ಸಂಘ ಇದು.  ಇದನ್ನು ಕಳೆದ ಹದಿನಾಲ್ಕು ವರ್ಷಗಳಿಂದ ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಇದರ ಅಧ್ಯಕ್ಷೆ ಶ್ರೀಮತಿ ಪುಷ್ಪಾ‌ ಹಾಗೂ ಅವರ ಸಮರ್ಥ ಬಳಗದವರು. ಹೆಂಗಸರಿಗೆ ಜೀವನೋತ್ಸಾಹ ಮೂಡಿಸುವ ಅನೇಕ ಒಳ್ಳೆಯ ಮೌಲ್ಯ, ಆಚರಣೆ, ಅಭ್ಯಾಸ ಹಾಗೂ ಕಾರ್ಯಕ್ರಮಗಳ ಮೊತ್ತವಾಗಿದೆ ಈ ಸಂಘ.

11-11-2025ರಂದು ನಡೆದ ಈ ಸಂಘದ  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ಒದಗಿ ಬಂದಿತ್ತು. ‌ಅದರಲ್ಲಿ ಸಂಘದ ಸದಸ್ಯೆಯರಿಗಾಗಿ ಏರ್ಪಡಿಸಿದ್ದ ಒಂದು ‘ಕನ್ನಡ ಆಟ’ ಮೆಚ್ಚುವಂಥದ್ದು. ಪ್ರತಿಯೊಬ್ಬರಿಗೂ ನಿಖರವಾಗಿ  ಕೊಡಲಾಗುವ ಒಂದು ನಿಮಿಷ ಕಾಲಾವಕಾಶದಲ್ಲಿ, ಯಾವ ಕನ್ನಡ ಅಕ್ಷರವು ತಾವು ಎತ್ತಿದ ಚೀಟಿಯಲ್ಲಿ ತಮಗೆ ಬರುತ್ತದೋ ಆ ಅಕ್ಷರದಿಂದ ಬರುವ ಪದಗಳನ್ನು, ತಮಗೆ ಸಾಧ್ಯವಾದಷ್ಟು ಮಟ್ಟಿಗೆ ಹೇಳಬೇಕು. ಯಾರು ಗರಿಷ್ಠ ಪದಗಳನ್ನು ಹೇಳುವರೋ ಅವರಿಗೆ ಬಹುಮಾನ. ನಾನು  ಗಮನಿಸಿದಂತೆ ನಿಮಿಷಕ್ಕೆ ಹದಿಮೂರು ಪದ ಹೇಳಿದವರಿಗೆ ಬಹುಮಾನ ಬಂತು.

ಒಂದು ವಿಶಾಲಾರ್ಥದಲ್ಲಿ, ಕನ್ನಡ ಉಳಿಸುವುದೆಂದರೆ ಅದನ್ಬು ಬಳಸುವುದೇ. ಇದೇ ಮೂಲ, ಇದೇ ಮುಖ್ಯ. ಇದರೆಡೆಗೆ ಮಹಿಳೆಯರು ಮನಸ್ಸು ಮಾಡುವಂತೆ ಮಾಡಿದ ಸ್ಪರ್ಧೆ ಇದು ; ಖಂಡಿತವಾಗಿಯೂ ಇದು ಕನ್ನಡ ರಾಜ್ಯೋತ್ಸವದ ಸರಳ ಹಾಗೂ ಅರ್ಥಪೂರ್ಣ ಆಚರಣೆ. 

ಚೆಲುವ ಕನ್ನಡನಾಡಿನಲ್ಲಿ ಕನ್ನಡವನ್ನು ಪ್ರೀತಿಸುವ ಬಗೆಗಳು ಹಲವಾರು. ಸದಾ ನಗುತಿರಲಿ ಕನ್ನಡ ತಾಯಿಯು ಮುಡಿದ ಅಲರು.