ಗಾದೆಮಾತುಗಳಲ್ಲಿ ಎಷ್ಟು ಸೂಕ್ಷ್ಮವಾದ ಜೀವನ ಗಮನಿಕೆ ಇರುತ್ತದೆ ಎಂಬುದಕ್ಕೆ ಈ ಗಾದೆಮಾತು ಸಾಕ್ಷಿಯಾಗಿದೆ. ಆನೆಯೊಂದಕ್ಕೆ ಇರುವೆ ತೀರಾ ಚಿಕ್ಕ ಯಕಶ್ಚಿತ್ ಜೀವಿ, ಅದು ಏನು ಮಹಾ ಭಾರ ಹೊರಬಲ್ಲುದು ಅನ್ನಿಸಬಹುದೇನೋ. ಹಾಗೆಯೇ, ಜನರು ಸಾಮಾನ್ಯವಾಗಿ ತಮ್ಮ ಸ್ವಂತ ಜವಾಬ್ದಾರಿ ಅಥವಾ ಕಷ್ಟಗಳು ತುಂಬ ಹೆಚ್ಚು ಹಾಗೂ ಬಹಳ ಗಂಭೀರ ಸ್ವರೂಪದವು ಎಂದು ಭಾವಿಸಿರುತ್ತಾರೆ. ಉದಾಹರಣೆಗೆ ಕಛೇರಿಯ ಮೇಲಧಿಕಾರಿಯೊಬ್ಬ ತನ್ನ ಜವಾಬ್ದಾರಿ, ಕೆಲಸದ ಭಾರಗಳು ಬಹಳ ಹೆಚ್ಚು, ಚಪರಾಸಿ ಅಥವಾ ಜವಾನನೊಬ್ಬನಿಗೆ ಇರುವ ಕೆಲಸ ಕಷ್ಟದ್ದಲ್ಲ ಎಂಬ ಅನಿಸಿಕೆ ಹೊಂದಿರಬಹುದು. ಆದರೆ ಚಪರಾಸಿಗೆ ಅವನ ಕೆಲಸ ಅಷ್ಟೇನೂ ಸುಲಭದ್ದಲ್ಲ ಎಂದುಕೊಳ್ಳಲು ಅವನದ್ದೇ ಕಾರಣಗಳಿರುತ್ತವೆ ಅನ್ನಿಸುತ್ತೆ. ಹಾಗೆಯೇ ಮನೆಯಲ್ಲಿನ ಹಿರಿಯರು ಮತ್ತು ಕಿರಿಯರ ನಡುವೆಯೂ ಹೀಗೆಯೇ ‘ನನ್ನ ಭಾರ ನಿನ್ನ ಭಾರಕ್ಕಿಂತ ತುಂಬಾ ಹೆಚ್ಚು’ , ‘ಇಲ್ಲ ನನ್ನದು ಹೆಚ್ಚು’… ಎಂದು ತಕರಾರು ನಡೆಯಬಹುದು. ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯ ಏನೆಂದರೆ, ನಮಗೆ ನಮ್ಮ ಭಾರ ಎಷ್ಟು ಎಂದು ಅರ್ಥವಾಗಬಹುದೇ ಹೊರತು ಬೇರೆಯವರ ಭಾರ ಎಷ್ಟು ಎಂದು ಅರ್ಥ ಆಗುವುದಿಲ್ಲ. ಹೀಗಾಗಿ ಈ ವಿಷಯದಲ್ಲಿ ನಾವು ಟೀಕೆ ಮಾಡಲು, ಮೂದಲಿಸಲು ಹೋಗದೆ ನಮ್ಮ ಪಾಡಿಗೆ ನಾವು ಇರುವುದು ಒಳ್ಳೆಯದು. ಎಷ್ಟು ಒಳ್ಳೆಯ ಜೀವನ ವಿವೇಕವನ್ನು ಹೇಳಿದೆ ಅಲ್ಲವೇ, ಈ ಗಾದೆ ಮಾತು?
Kannada proverb – Aaneya bhara aanege, iruveya bhaara iruvege( Elephant or ant.. his burden is his own.) This is a very interesting proverb in Kannada. The elephant might feel that he carries a lot of load when compared to an ant. But the tiny ant may feel that he is carrying a lot! Everything is a matter of perspective and our own first hand experience. Only when we try to see the situation in some other person’s perspective, we stop making negative comments about him or the burden he feels. So, this proverb makes sense. Isn’t it?