ಕೆಲವು ಸಲ ಜೀವನದಲ್ಲಿ ಯಾರಾದರೂ ನಮ್ಮ ಮುಂದೆ ಯಾವುದಾದರೂ ಕೋರಿಕೆ ಇಟ್ಟಾಗ ಅದನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿ ನಾವು ಇರುವುದಿಲ್ಲ. ‌ ಹೀಗಿದ್ದಾಗ ನಾವು ತಕ್ಷಣ ಆಗುವುದಿಲ್ಲ ಎಂದು ಹೇಳಲು ಮುಜುಗರ ಪಟ್ಟುಕೊಂಡು ” ಹಾಂ ಹೂಂ…ಅದೇನೆಂದ್ರೆ… ಸ್ವಲ್ಪ ಕಷ್ಟ   …. ‌ ‌ ನೋಡೋಣ ” ಎಂದು ಹೇಳಿದೆವು ಎಂದಿಟ್ಟುಕೊಳ್ಳಿ‌. ತುಂಬ ಚಾಲಾಕಿಗಳಾಗಿರುವವರು ಅಥವಾ  ಏನಾದರೂ ಸರಿ    ನಮ್ಮಿಂದ ಕೆಲಸ ಮಾಡಿಸಲೇಬೇಕು ಎಂದಿರುವವರು ನಮ್ಮ ದಾಕ್ಷಿಣ್ಯದ ಅನಿಶ್ಚಿತ ನಿರಾಕರಣೆಯನ್ನು  ಒಪ್ಪಿಗೆ ಎಂದೇ ಊಹಿಸಿಕೊಂಡು ನಮ್ಮ ಮೇಲೆ ಜುಲುಮೆ ಮಾಡಲು ಶುರು ಮಾಡುತ್ತಾರೆ. ಅಥವಾ ನಾವು ಅರೆಮನಸ್ಸಿನಿಂದ ಒಪ್ಪಿ ಆ ಕೆಲಸ ಮಾಡಲು ಆಗದಿದ್ದರೂ ಅವರಿಗೆ ಅಪ್ರಿಯರಾಗುತ್ತೇವೆ. ಹೀಗಾಗಿ ಒಂದು ನಿರ್ದಿಷ್ಟ ಕೆಲಸ ಮಾಡಲು ಇಷ್ಟ ಇಲ್ಲದಿದ್ದಾಗ ಅಥವಾ ಒಂದು ವಿಷಯದ ಬಗೆಗೆ ಒಪ್ಪಿಗೆ ಇಲ್ಲದಿದ್ದಾಗ  ಅದನ್ನು ಮೊದಲೇ ಹೇಳಿಬಿಡುವುದು 

ಒಳ್ಳೆಯದು. ಕಡೇಪಕ್ಷ ನಾವು ಆ ಕೆಲಸಕ್ಕೆ ಅಡ್ಡವಾಗಿ ನಿಲ್ಲುವುದಾದರೂ ತಪ್ಪುತ್ತದೆ. ಜೊತೆಗೆ ನಿಷ್ಠುರ ಮಾಡಿಕೊಂಡು ಸಂಬಂಧ ಕೆಡುವುದೂ ತಪ್ಪುತ್ತದೆ‌.‌

Kannada proverb – Anthya nishturakkintha aarambha nishturave melu( Frank disagreement in the beginning is much better than its counterpart in the end)

Sometimes we hesitate to say NO right in the beginning, though we feel like it and then get into considerable trouble. If we do not like something or do not want to do something, it is better to say at the moment the job offer is made. If we dilly dally and keep saying ‘ may be, may be not’ we will be giving wrong signal to the person associated with it. Then after the time lapse even of we say sorry and give two hundred reasons for our ‘ inert ‘ behavior, nobody gets convinced.  Therefore if you want to say NO, do not wait till eternity, so that at the least you won’t be a block in their way.