ನೋನೋನೋನೋ!! ದಿಸ್ ವರ್‍ಡ್ ಈಸ್ ವೆರಿ ಬ್ಯಾಡ್ ಮೇಡಂ!!!!!!

ಮಹಾರಾಣಿ ಕಾಲೇಜಿನಲ್ಲಿ ನಡೆಯುವ ತರಗತಿ ಚುನಾವಣೆಗಳ ಬಗ್ಗೆ ಹಿಂದಿನ ವಾರದ ಕನ್ನಡ ಪ್ರಸಂಗದಲ್ಲಿ ಹೇಳಿದ್ದೆ. ಈ ಕುರಿತ ಇನ್ನೊಂದು ಅನುಭವವನ್ನು ಈಗ ಹೇಳುತ್ತೇನೆ.

Agate

ಅಗೇಟ್ – ಸಿಲಿಕಾದ ಹರಳುಗಟ್ಟಿದ ರೂಪ ಇದು. ತುಂಬ ಗಟ್ಟಿಯಾದ ಪದಾರ್ಥವಾದ ಇದನ್ನು ಒಡವೆಗಳಲ್ಲಿ ಹಾಗೂ ಚಾಕು ಮುಂತಾದ ಪರಿಕರಗಳನ್ನು ಮಾಡುವ ಸಂದರ್ಭದಲ್ಲಿ ಬಳಸುತ್ತಾರೆ.

Algorithm

ಕ್ರಮವಿಧಿ – ನಿಖರವಾದ ಸೂಚನಾಪಟ್ಟಿಯೊಂದನ್ನು ಇಟ್ಟುಕೊಂಡು ಹಂತಹಂತವಾಗಿ ಸಮಸ್ಯೆಯೊಂದನ್ನು ಪರಿಹರಿಸುವ ಗಣಿತ ವಿಧಾನ.

Alloy

ಮಿಶ್ರಲೋಹ : ಎರಡು ಅಥವಾ ಅದಕ್ಕಿಂತ ಹೆಚ್ಚು ಲೋಹಗಳಿಂದ ಕೂಡಿದ ವಸ್ತು.

Alnico

ಅಲ್ನಿಕೋ : ಕಬ್ಬಿಣ, ಅಲ್ಯುಮಿನಿಯಂ, ನಿಕ್ಕಲ್, ಕೋಬಾಲ್ಟ್ ಮತ್ತು ತಾಮ್ರವನ್ನು ಒಳಗೊಂಡ ಒಂದು  ಸರಣಿಯ ವ್ಯಾಪಾರೀನಾಮ. ಇದನ್ನು ಶಾಶ್ವತ ಅಂiiಸ್ಕಾಂತಗಳನ್ನು ಮಾಡಲು ಬಳಸುತ್ತಾರೆ.

Alpha Irradiation

ಆಲ್ಫಾ ಪ್ರಕಾಶ : ಒಂದು ವಸ್ತುವನ್ನು ಆಲ್ಪಾ ಕಣಗಳ ಕಿರಣ ಸಮೂಹಕ್ಕೆ ಒಡ್ಡುವುದು.

ದೊರೆ ಮನಸ್ಸು, ಮರದ ನೆರಳು ಇದ್ಹಂಗಿರಲ್ಲ.

ಅಧಿಕಾರವುಳ್ಳವರು ತಮ್ಮ ಕೈಕೆಳಗಿನ ನೌಕರರನ್ನು ನಡೆಸಿಕೊಳ್ಳುವ ರೀತಿ ಯಾವಾಗಲೂ ಒಂದೇ ಸಮನಾಗಿರುವುದಿಲ್ಲ. ತಮ್ಮ ಆಜ್ಞಾನುವರ್ತಿಗಳನ್ನು ಅಧಿಕಾರವುಳ್ಳವರು ಇಂದು ಎಷ್ಟೇ ಆಪ್ತತೆಯಿಂದ ನಡೆಸಿಕೊಂಡರೂ ನಾಳೆ ಅದೇ ಆಪ್ತತೆ, ವಿಶ್ವಾಸಗಳಿಂದ ನಡೆಸಿಕೊಳ್ಳುತ್ತಾರೆ ಎಂದು ಖಚಿತವಾಗಿ ಹೇಳಲಾಗದು. ಸನ್ನಿವೇಶ ಬದಲಾದಾಗ ದೊರೆ/ಅಧಿಕಾರಿಗಳು ಇದ್ದಕ್ಕಿದ್ದಂತೆ ತಮ್ಮ ವರ್ತನೆಗಳನ್ನು ಬದಲಾಯಿಸುವ ಸಾಧ್ಯತೆ ಇರುತ್ತದೆ.

ಅಭಿಮಾನಿ ಕನ್ನಡತಿ ಹಾಗೂ ಅಲಂಕಾರ ಕನ್ನಡತಿ

ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುವುದು ಅನೇಕ ವರ್ಷಗಳಿಂದ ನಡೆದು ಬಂದ ಒಂದು ಪದ್ಧತಿ. ನಮ್ಮ ಮಹಾರಾಣಿ ವಿಜ್ಞಾನ ಕಾಲೇಜೂ(ಬೆಂಗಳೂರು) ಇದಕ್ಕೆ ಹೊರತಲ್ಲ. ನವೆಂಬರ್ ೧ನೆಯ ದಿವಸವು, ಪರೀಕ್ಷೆಯೋ, ಅರ್ಧವಾರ್ಷಿಕ ಪರೀಕ್ಷೆಯ ನಂತರದ ದೀರ್ಘ ರಜೆಯ ನಡುವೆ ಬಂದಾಗ ಅಂದೇ ರಾಜ್ಯೋತ್ಸವವನ್ನು ಆಚರಿಸಲು ಸಾಧ್ಯವಾಗುವುದಿಲ್ಲ.

Adiabatic change

ಶಕ್ತಿ ವಿನಿಮಯರಹಿತ ಬದಲಾವಣೆ  ವ್ಯವಸ್ಥೆಯಲ್ಲಿರುವ ಶಕ್ತಿಯು ಹೊರಗೆ ಹೋಗದೆ, ಹೊರಗಿನಿಂದ ಶಕ್ತಿಯು ಒಳಗೆ ಪ್ರವೇಶಿಸದೆ ನಡೆಯುವಂತಹ ಪ್ರಕ್ರಿಯೆ.

Aeriel(Antenna)

ಆಕರ್ಷಣ ತಂತಿ – ಬಾನುಲಿ, ದೂರದರ್ಶನಗಳಲ್ಲಿ ವಿದ್ಯುತ್ ಕಾಂತೀಯ ತರಂಗಗಳನ್ನು ಆಕರ್ಷಿಸಲು ಬಳಸುವ ತಂತಿ.

Page 110 of 113

Kannada Sethu. All rights reserved.