ನಾನು ಸದ್ಯದಲ್ಲಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಒಂದು ಭಾಗವಾದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ, ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ವೃತ್ತಿಯ ಭಾಗವಾಗಿ ನಾನು ನನ್ನ ವಿದ್ಯಾರ್ಥಿನಿಯರೊಂದಿಗೆ, ಆದಷ್ಟೂ ಕನ್ನಡ ಪದಗಳನ್ನು ಬಳಸಿ ಮಾತಾಡುವ ಪ್ರಯತ್ನದಲ್ಲಿ ತೊಡಗಿರುತ್ತೇನೆ. ಬೆಂಗಳೂರಿಗರು ವ್ಯಾಪಕವಾಗಿ ಬಳಸುವ `ಕಂಗ್ಲೀಷನ್ನು'(ಅಂದರೆ, ಕನ್ನಡ ಇಂಗ್ಲಿಷ್ ಸೇರಿದ ಕನ್ನಡದ ಒಂದು ಭಾಷಾರೂಪವನ್ನು) ಕಡಿಮೆ ಬಳಸಬೇಕು ಎಂಬ ಉದ್ದೇಶವು ಸಹ ಇದರ ಹಿಂದೆ ಇದೆ ಅನ್ನಿ.
ಶಬ್ಧವಿಜ್ಞಾನ – ಶಬ್ಧವನ್ನು ಕುರಿತು ಅಧ್ಯಯನ ಮಾಡುವ ಭೌತವಿಜ್ಞಾನದ ಶಾಖೆ.
ಅಂಟಿಕೊಳ್ಳುವಿಕೆ – ಒಂದರಂತೆ ಒಂದಿಲ್ಲದ ಕಣಗಳು ಅಥವಾ ಮೇಲ್ಮೈ ಗಳು ಪರಸ್ಪರ ಅಂಟಿಕೊಳ್ಳುವ ಪ್ರವೃತ್ತಿ.
ಆಲ್ಫಾ ಕಣಗಳು – ಎರಡು ಪ್ರೋಟಾನುಗಳು ಮತ್ತು ಎರಡು ನ್ಯೂಟ್ರಾನುಗಳು ಒಟ್ಟಿಗೆ ಬೆಸೆದುಕೊಂಡು ಉಂಟಾಗಿರುವ ಕಣ. ಹೀಲಿಯಂ ಅಣುವಿನ ಬೀಜಕೇಂದ್ರಕ್ಕೆ ಸಮನಾದದ್ದು.
ಆಕಾರರಹಿತ ಘನವಸ್ತು – ಹರಳುಗಟ್ಟದಿರುವಂತಹ ಘನವಸ್ತು. ಇದಕ್ಕೆ ನಿಶ್ಚಿತ ಆಕಾರ ಇರುವುದಿಲ್ಲ.
ಪ್ರತಿ ಕಣ – ಒಂದು ಕಣವು ಹೊಂದಿರುವಷ್ಟೇ ದ್ರವ್ಯರಾಶಿ ಮತ್ತು ಗಿರಕಿ(ಸ್ಪಿನ್)ಗಳನ್ನು ಹೊಂದಿದ್ದರೂ ಅದಕ್ಕೆ ವಿರುದ್ಧವಾದ ವಿದ್ಯುದಂಶವನ್ನು ಹೊಂದಿರುವ ಕಣ.
ವೇಗೋತ್ಕರ್ಷ – ದಿಶಾಯುತ ವೇಗ ಅಥವಾ ದಿಕ್ಕುಳ್ಳ ವೇಗ(ವೆಲಾಸಿಟಿ)ದಲ್ಲಿ ಉಂಟಾಗುವ ಹೆಚ್ಚಳ.
ನಿರ್ಜೀವಿಮೂಲ ಜೀವೋತ್ಪತ್ತಿ – ಜೀವವಿಲ್ಲದ ಕಣಗಳಿಂದ ಜೀವೋತ್ಪತ್ತಿ ಆಗಿರಬಹುದಾದ ಸಾಧ್ಯತೆಯ ಅಧ್ಯಯನ.
Like us!
Follow us!