ಕನ್ನಡದ ಒಂದು ವಿಶಿಷ್ಟ ಗಾದೆಮಾತಿದು. ಜೀವನದಲ್ಲಿ ನಾವು ಕೆಲವೊಮ್ಮೆ ನಮ್ಮ ಕುಟುಂಬ ಸದಸ್ಯರಿಗೆ, ಬಂಧುಮಿತ್ರರಿಗೆ ಅಥವಾ ಉದ್ಯೋಗ ಕ್ಷೇತ್ರದ ಸಹೋದ್ಯೋಗಿಗಳಿಗೆ ಎಷ್ಟು ಸಹಾಯ/ಸೇವೆ ಮಾಡಿದರೂ ಅವರಿಗೆ ಏಕೋ ಸಮಾಧಾನ,ತೃಪ್ತಿ ಇರುವುದಿಲ್ಲ. ‘ನೀನೇನು ಮಹಾ ಮಾಡಿದೆ? ಯಾರಿದ್ರೂ ಇಷ್ಟು ಮಾಡ್ತಿದ್ರು ಬಿಡು’ ಅಂದುಬಿಡುತ್ತಾರೆ. ಕೆಲವು ಸಲ ನಾವು ಕೂಡ ಅವರು ‘ತಮ್ಮ ಗರಿಷ್ಠ ಮಿತಿ’ ಎಂದು ತಿಳಿದ ಕೆಲಸದ ಬಗ್ಗೆ ಹೀಗೆಯೇ ಪ್ರತಿಕ್ರಯಿಸಬಹುದು. ಅಂತಹ ಸನ್ನಿವೇಶದಲ್ಲಿ ‘ ಅಯ್ಯೋ, ಇದರಿಂದ ಆಚೆಗೆ ಇನ್ನೇನು ಮಾಡಲಪ್ಪಾ!?’ ಎಂಬ ಅಸಹಾಯಕ ಭಾವಕ್ಕೆ […]
ಗೈರೋಸ್ಟ್ಯಾಟ್ ಆರ್ ಗೈರೋಸ್ಟೆಬಿಲೈಝರ್ – ಭ್ರಮಣ ಸಂಸ್ಥಾಪಕ ಅಥವಾ ಸುತ್ತು ಸ್ಥಿತಿಸ್ಥಾಪಕ – ತುಸು ಪರಿವರ್ತನೆ ಮಾಡಲ್ಪಟ್ಟ ಒಂದು ಭ್ರಮಣ ದರ್ಶಕ ಇದು. ಇದರಲ್ಲಿ, ತಿರುಗುತ್ತಿರುವ ಚಕ್ರವನ್ನು ಒಂದು ಗಟ್ಟಿಯಾದ, ಅಲ್ಲಾಡದ ಆವರಣದಲ್ಲಿ ಊರಿರುತ್ತಾರೆ. ಅಕ್ಷವು ಒಂದೇ ಸಮನಾಗಿ ಇದ್ದಲ್ಲೇ ಇದೆಯೋ, ಇಲ್ಲವೋ ಎಂಬುದನ್ನು ಪತ್ತೆ ಮಾಡಲು ಇದನ್ನು ಬಳಸುತ್ತಾರೆ.
ಗೈರೋಸ್ಕೋಪ್ – ಭ್ರಮಣ ದರ್ಶಕ – ತುಂಬ ವೇಗವಾಗಿ ಸುತ್ತುತ್ತಿರುವ ಚಕ್ರ ಅಥವಾ ಸುತ್ತ ಸುತ್ತುತ್ತಿರುವ ಬೆಳಕಿನ ಪುಂಜವನ್ನು ಹೊಂದಿರುವ ಒಂದು ಉಪಕರಣ. ಒಂದು ವಸ್ತುವು ತಾನು ಇರಬೇಕಾದ ದಿಕ್ಕಿನಿಂದ ಬೇರೆ ಕಡೆಗೆ ಸರಿದದ್ದನ್ನು ಪತ್ತೆ ಹಚ್ಚಲು ಈ ಉಪಕರಣವನ್ನು ಬಳಸುತ್ತಾರೆ.
ಗೈರೋಮ್ಯಾಗ್ನೆಟಿಕ್ ರೇಶ್ಯೋ – ಭ್ರಮಣ ಕಾಂತೀಯ ಅನುಪಾತ – ಒಂದು ಪರಮಾಣು ಅಥವಾ ಬೀಜಕೇಂದ್ರದ ಕಾಂತೀಯ ಸಾಮರ್ಥ್ಯ ಹಾಗೂ ಅದರ ಕೋನೀಯ ದ್ರವ್ಯವೇಗ (ಯಾಂಗುಲಾರ್ ಮೊಮೆಂಟಮ್)ಗಳಿಗಿರುವ ಅನುಪಾತ.
ಗೈರೋಮ್ಯಾಗ್ನೆಟಿಕ್ ಎಫೆಕ್ಟ್ಸ್ – ಭ್ರಮಣ ಕಾಂತೀಯ ಪರಿಣಾಮಗಳು – ಒಂದು ವಸ್ತುವಿನ ಕಾಂತೀಕರಣಕ್ಕೂ ಅದರ ಭ್ರಮಣಕ್ಕೂ (ಸುತ್ತುವಿಕೆಗೂ) ಇರುವ ಸಂಬಂಧದ ಗಮನಿಕೆ.
ಗೈಡೆಡ್ ಮಿಸೈಲ್ – ನಿರ್ದೇಶಿತ ಕ್ಷಿಪಣಿ – ಒಂದೋ ಪೂರ್ವನಿಶ್ಚಿತ ಅಥವಾ ತನ್ನೊಳಗಿನ ಸ್ವಯಂ ಪ್ರತಿಕ್ರಯಿಸುವ ಉಪಕರಣಗಳಿಂದಾಗಿ ಅಥವಾ ರೇಡಿಯೋ (ಒಂದು ರೀತಿಯ ವಿದ್ಯುತ್ಕಾಂತೀಯ ಅಲೆ) ಆದೇಶಗಳಿಂದ ತನ್ನ ಗುರಿಯ ಕಡೆಗೆ ನಿರ್ದೇಶಿತಗೊಂಡ ಕ್ಷಿಪಣಿ.
ಗ್ರೂಪ್ ವೆಲಾಸಿಟಿ – ತಂಡ ವೇಗ ಅಥವಾ ಸಮೂಹ ವೇಗ – ಅಲೆಗಳ ತಂಡ (ಸಮೂಹ) ವೊಂದು ಚಲಿಸುವ ವೇಗ.
Like us!
Follow us!