Gas thermometer

ಗ್ಯಾಸ್ ಥರ್ಮೋಮೀಟರ್ – ಅನಿಲ ತಾಪಮಾಪಕ – ಒಂದು ರೀತಿಯ ತಾಪಮಾಪಕ – ಇದರಲ್ಲಿ ತಾಪದ ಉತ್ಪನ್ನವಾಕ್ಯ(ಫಂಕ್ಷನ್)ವಾಗಿ ಅನಿಲದ ಗುಣಗಳ ಬದಲಾವಣೆಯನ್ನು ಗಮನಿಸಿ ತಾಪಮಾನದ ಅಳತೆ ಮಾಡಲಾಗುತ್ತದೆ. 

Gas oil

ಗ್ಯಾಸ್ ಆಯಿಲ್ – ಅನಿಲ ಎಣ್ಣಿ ಅಥವಾ ಡೀಸೆಲ್ ಎಣ್ಣೆ – ಕಚ್ಚಾ ಪೆಟ್ರೋಲಿಯಂನಿಂದ ಪೆಟ್ರೋಲ್ ಮತ್ತು ಸೀಮೆಎಣ್ಣೆಯನ್ನು ಭಟ್ಟಿ ಇಳಿಸಿ‌ ತೆಗೆದ ನಂತರ ಉಳಿಯುವ ಎಣ್ಣೆ. ಇದನ್ನು ಡೀಸಲ್ ಚಾಲಿತ  ಚಾಲಕಯಂತ್ರಗಳಲ್ಲಿ ಇಂಧನವಾಗಿ ಬಳಸುತ್ತಾರೆ, ಮತ್ತು ಅಶ್ರುವಾಯು ತಯಾರಿಸುವಾಗಿನ ಇಂಗಾಲ ಮಿಶ್ರಣವನ್ನು ಮಾಡುವಲ್ಲಿ ಬಳಸುತ್ತಾರೆ.

Gas maser

ಗ್ಯಾಸ್ ಮೇಸರ್ – ಅನಿಲ‌ ಬಲವರ್ಧಕ – ಮೈಕ್ರೋ ಅಲೆಗಳ ವಿಕಿರಣವು ಅನಿಲದ ಅಣುಗಳೊಂದಿಗೆ ಅಂತರ್ ಕ್ರಿಯೆ ನಡೆಸುವ ಒಂದು ಬಲವರ್ಧಕ.

Gas laws

ಗ್ಯಾಸ್ ಲಾಸ್ – ಅನಿಲ ನಿಯಮಗಳು – ಒಂದು ಅನಿಲದ ಒತ್ತಡ ಮತ್ತು/ಅಥವಾ ಉಷ್ಣತೆಯನ್ನು ಬದಲಾಯಿಸಿದಾಗ ಉಂಟಾಗುವ ಬದಲಾವಣೆಗಳನ್ನು ವಿವರಿಸುವ ನಿಯಮಗಳು. ಉದಾಹರಣೆಗೆ ಬಾಯ್ಲ್ ರ ನಿಯಮ, ಚಾಲ್ಸ್ರ್ ರ ನಿಯಮ.

Gas cell

ಗ್ಯಾಸ್ ಸೆಲ್ – ಅನಿಲ ವಿದ್ಯುತ್ ಕೋಶ – – ತನ್ನ ವಿದ್ಯುತ್ ದ್ವಾರಗಳು ಅನಿಲವನ್ನು ಹೀರಿಕೊಳ್ಳುವುದರ ಮೂಲಕ ಕೆಲಸ ಮಾಡುವಂತಹ ಒಂದು ವಿದ್ಯುತ್ ಕೋಶ.

ಕನ್ನಡ ಗಾದೆಮಾತು – ಮುತ್ತಿಗಿಂತ ಹೊತ್ತು‌ ಉತ್ತಮ.

ಮೂರೇ ಪದಗಳಿರುವ ಗಾದೆ ಮಾತಾದರೂ ಬಹು ಮುಖ್ಯವಾದ ಜೀವನ ಸಂದೇಶವನ್ನು ಕೊಡುವಂತಹ ಸೊಲ್ಲು ಇದು. ಹೊತ್ತು ಅಥವಾ ಸಮಯವು ಬದುಕಿರುವ ಪ್ರತಿಯೊಬ್ಬರಿಗೂ ದಿನವೊಂದಕ್ಕೆ ಇಪ್ಪತ್ನಾಲ್ಕು ಗಂಟೆಯಂತೆ  ದೊರೆಯುವ ಸಂಪತ್ತು. ಇದು‌ ಉಚಿತವಾಗಿ ಸಿಗುವುದು ಹೌದಾದರೂ ಒಮ್ಮೆ ಕಳೆದುಹೋದರೆ ಏನು ಮಾಡಿದರೂ ಮತ್ತೆ ಮರಳಿ ಸಿಗುವುದಿಲ್ಲ. ಅಮೂಲ್ಯ ಮುತ್ತಾದರೂ, ಅದು ಕಳೆದು‌ಹೋದರೆ ಹೇಗಾದರೂ ಮಾಡಿ ಇನ್ನೊಮ್ಮೆ ಅದನ್ನು ಕೊಳ್ಳಬಹುದು. ಆದರೆ ಕಳೆದು ಹೋದ ಹೊತ್ತು ಮಾತ್ರ ಏನೇ ಮಾಡಿದರೂ, ಎಷ್ಟೇ ಹಣ ಕೊಟ್ಟರೂ ಮತ್ತೆ ಸಿಗುವುದಿಲ್ಲ. ಹಾಗಾಗಿಯೇ ನಾವು […]

‘ಕನಸು ಮತ್ತು ಕಣಸು’ – ಮಾತಿನ‌ ಗಾರುಡಿಗ ಬೇಂದ್ರೆ ಅಜ್ಜ ಕಲಿಸುವ ಕನ್ನಡ ಪಾಠ

ಕನ್ನಡದ ವರಕವಿ  ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಭಾಷೆಯ ಪದಗಳನ್ನು ಲೀಲಾಮಯವಾಗಿ, ಗರಿಷ್ಠ ಅರ್ಥವಿಸ್ತಾರದಲ್ಲಿ ಬಳಸುತ್ತಿದ್ದ ರೀತಿಯು ತುಂಬ ವಿಶಿಷ್ಟವಾದದ್ದು. ಒಂದೇ ಪದಕ್ಕಿರುವ ಬೇರೆ ಬೇರೆ ಅರ್ಥಗಳನ್ನು ದುಡಿಸಿಕೊಳ್ಳುತ್ತಿದ್ದದ್ದು, ಹೆಚ್ಚುಕಮ್ಮಿ ಒಂದೇ ಉಚ್ಚಾರವುಳ್ಳ ಆದರೆ ಅಪಾರ ಅರ್ಥ ವ್ಯತ್ಯಾಸವುಳ್ಳ ಪದಗಳನ್ನು ಒಟ್ಟೊಟ್ಟಿಗೆ ಬಳಸಿ ಶ್ರಾವ್ಯಸುಂದರ ಹಾಗೂ ಅರ್ಥಬಂಧುರ ಲೋಕವನ್ನು ಸೃಷ್ಟಿಸುವ ಅದ್ಭುತ ಶಕ್ತಿ ಅವರಲ್ಲಿತ್ತು. ಅದಕ್ಕೆ ಒಂದು ಉದಾಹರಣೆ‌ ಅಂದರೆ ಅವರು ಕನಸು ಮತ್ತು ಕಣಸು ಎಂಬ ಪದಗಳನ್ನು ತಮ್ಮ ಕವಿತೆಯೊಂದರಲ್ಲಿ ಬಳಸಿರುವ ರೀತಿ.  ಪ್ರಸ್ತುತ ಕವಿತೆಯ […]

Gas 

ಅನಿಲ – ಯಾವ ವಸ್ತುವಿನ ಅಣುಗಳು ಅಥವಾ ಪರಮಾಣುಗಳು ಅದನ್ನು ಇರಿಸಿರುವ ಇಡೀ ಪಾತ್ರೆಯ ಪರಿಮಾಣವನ್ನು ಆವರಿಸುತ್ತವೋ, ಆಕ್ರಮಿಸುತ್ತವೋ ಅಂತಹ ವಸ್ತು.

Gamut

ಗ್ಯಾಮಟ್ – ಪೂರ್ಣ ಸ್ವರಶ್ರೇಣಿ – ಒಂದು ಸ್ವರಕ್ಕೂ ಮತ್ತು ಅದು ಇರುವಂತಹ ಸ್ವರಾಷ್ಟಕ ಶ್ರೇಣಿಗೂ ಇರುವ ಮಧ್ಯಂತರವನ್ನು ಸಾಮಾನ್ಯವಾಗಿ ಏಳು ಚಿಕ್ಕ ಚಿಕ್ಕ ಮಧ್ಯಂತರಗಳಾಗಿ ವಿಂಗಡಿಸಿರುತ್ತಾರೆ.‌ ಹೀಗೆ ರೂಪುಗೊಂಡ ಎಂಟು ಸ್ವರಗಳು ‘ಒಂದು ಸಂಗೀತ ಶ್ರೇಣಿ’ ಅಥವಾ ಪೂರ್ಣ ಸ್ವರಶ್ರೇಣಿ ಅನ್ನಿಸಿಕೊಳ್ಳುತ್ತವೆ.

Gamma ray spectrum

ಗಾಮಾ ರೇ ಸ್ಪೆಕ್ಟ್ರಮ್ – ಗಾಮಾ ಕಿರಣ ವರ್ಣಪಟಲ( ಗಾಮಾ ಕಿರಣ ರೋಹಿತ) – ಒಂದು ವಿಕಿರಣ ಆಕರದಿಂದ ಹೊರ ಸೂಸಲ್ಪಟ್ಟು ಗಾಮಾಕಿರಣ ಪ್ರದೇಶದಲ್ಲಿ ಜೋಡಣೆಗೊಳ್ಳುವ ತರಂಗಾಂತರ ಶ್ರೇಣಿ. 

Page 36 of 112

Kannada Sethu. All rights reserved.