ಗಾಮಾ ರೇಸ್( ಗಾಮಾ ರೇಡಿಯೇಷನ್) – ಗಾಮಾ ಕಿರಣಗಳು ( ಗಾಮಾ ವಿಕಿರಣ) – ತುಂಬ ಚಿಕ್ಕ ತರಂಗಾಂತರವುಳ್ಳ ವಿದ್ಯುತ್ಕಾಂತೀಯ ವಿಕಿರಣ.
ಗ್ಯಾಲ್ವನೋಸ್ಟ್ಯಾಟ್ – ಸ್ಥಿರ ವಿದ್ಯುತ್ ಉತ್ಪಾದಕ – ಹೆಚ್ಚಿನ ವಿದ್ಯುತ್ ಸಾಮರ್ಥ್ಯ ಇರುವ ವಿದ್ಯುತ್ ಕೋಶದಿಂದ ಸ್ಥಿರ ವಿದ್ಯುತ್ತನ್ನು ಉತ್ಪಾದಿಸಬಲ್ಲ ಉಪಕರಣ.
ಗ್ಯಾಲ್ವನೋಮೀಟರ್ – ಗ್ಯಾಲ್ವನೋಮೀಟರು ಅಥವಾ ಕಿರುವಿದ್ಯುತ್ ಪತ್ತೆಯಂತ್ರ – ತುಂಬ ಕಡಿಮೆ ಪ್ರಮಾಣದ ವಿದ್ಯುತ್ತನ್ನು ಕಂಡು ಹಿಡಿಯಲು ಬಳಸುವ ಒಂದು ಉಪಕರಣ.
ಗ್ಯಾಲ್ವನೈಝ್ಡ್ ಐರನ್ – ಲೋಹ ಲೇಪಿತ ಕಬ್ಬಿಣ – ತುಕ್ಕು ಹಿಡಿಯದಂತೆ, ಸತುವಿನ ಪದರವೊಂದನ್ನು ಲೇಪಿಸಿರುವ ಕಬ್ಬಿಣ ಅಥವಾ ಉಕ್ಕು.
ಗ್ಯಾಲ್ವಾನಿಕ್ ಸೆಲ್ ಆರ್ ವೋಲ್ಟಾಯಿಕ್ ಸೆಲ್ – ಗ್ಯಾಲ್ವನಿ ವಿದ್ಯುತ್ ಕೋಶ ಅಥವಾ ವೋಲ್ಟಾ ವಿದ್ಯುತ್ ಕೋಶ – ಇದು ಒಂದು ಆದಿಮ ವಿದ್ಯುತ್ ವಿಭಜಕ ಕೋಶ. ಇದರಲ್ಲಿ ಎರಡು ಬೇರೆ ಬೇರೆ ಲೋಹದ ಹಾಳೆಗಳನ್ನು ಒಂದು ವಿದ್ಯುತ್ ವಿಭಜಕ ದ್ರಾವಣದಲ್ಲಿ ಮುಳುಗಿಸಿ ಇಟ್ಟಿರುತ್ತಾರೆ.
ಗೆಲೆಲಿಯನ್ ಟೆಲಿಸ್ಕೋಪ್ – ಗೆಲೆಲಿಯವರ ದೂರದರ್ಶಕ – ನೇರ ಬಿಂಬವನ್ನು ಉಂಟುಮಾಡುವ, ಬೇರೆ ಬೇರೆ ಸಂಗಮದೂರಗಳನ್ನು ಹೊಂದಿರುವ ಎರಡು ಮಸೂರಗಳನ್ನು ಹೊಂದಿರುವ, ಗೆಲಿಲಿಯೋ ಗೆಲಿಲಿ ಎಂಬ ವಿಜ್ಞಾನಿಯು ಕಂಡುಹಿಡಿದಿರುವ ದೂರದರ್ಶಕ ಇದು.
ಗೆಲಿಲಿಯನ್ ಇನ್ವೇರಿಯನ್ಸ್ – ಗೆಲಿಲಿಯವರ ನಿತ್ಯಸತ್ಯ ಸಿದ್ಧಾಂತ - ಒಂದು ಇನ್ನೊಂದಕ್ಕೆ ಸಂಬಂಧಿಸಿದಂತೆ, ಏಕರೂಪವಾದ ವೇಗದಲ್ಲಿ ಚಲಿಸುತ್ತಿರುವ ಎರಡು ವಸ್ತುಗಳ ಮಟ್ಟಿಗಿನ ಭೌತಶಾಸ್ತ್ರದ ನಿಯಮಗಳು ಎಲ್ಲಾ ಪರಾಮರ್ಶನ ವ್ಯವಸ್ಥೆಗಳಲ್ಲೂ ಒಂದೇ ಆಗಿರುತ್ತವೆ, ಬದಲಾಗುವುದಿಲ್ಲ.
Like us!
Follow us!