“ಅಧ್ಯಾಪಕರು ಚಿರಂತನ ಆಶಾವಾದಿಗಳು” ಎಂಬ ಒಂದು ಮಾತಿದೆ. ನಾಳೆಯ ಪ್ರಜೆಗಳಾದ ವಿದ್ಯಾರ್ಥಿಗಳ ಮನಸ್ಸನ್ನು ರೂಪಿಸುವ ಕೆಲಸ ಮಾಡುವ ಅವರು ಮುಂದಿನ ಪೀಳಿಗೆಗಳ ಬಗ್ಗೆ ಭರವಸೆ ಕಳೆದುಕೊಳ್ಳಬಾರದು ಎಂಬ ಆಶಯ ಈ ಸೂಕ್ತಿಯ ಹಿಂದೆ ಇದೆ ಅನ್ನಿಸುತ್ತೆ. ಈ ಹಿನ್ನೆಲೆಯಲ್ಲಿ ಒಬ್ಬ ಕನ್ನಡ ಅಧ್ಯಾಪಕಿಯಾಗಿ ನಾನು ಮುಂದಿನ ಪೀಳಿಗೆಗಳು ಕನ್ನಡವನ್ನು ತಮ್ಮ ಹೃದಯಕ್ಕೆ ಹತ್ತಿರವಿರಿಸಿಕೊಳ್ಳುವಂತೆ ಪ್ರೇರೇಪಿಸಲು ಏನು ಮಾಡಬಹುದು ಎಂದು ಯೋಚಿಸುತ್ತಾ ಇರುತ್ತೇನೆ. ಹೀಗೆ ಯೋಚಿಸಿದಾಗ ಈ ಅಧ್ಯಾಪಕಿಗೆ ತೋಚಿದ ಒಂದು ಸರಳ ಉಪಾಯ ಅಂದರೆ ಪ್ರತಿದಿನವೂ ತರಗತಿಯಲ್ಲಿ ಕರಿಹಲಗೆಯ […]
ಫುಟ್ – ಅಡಿ : ಫುಟ್- ಪೌಂಡ್- ಸೆಕೆಂಡ್ ( ಎಫ್. ಪಿ. ಎಸ್) ಮೂಲಮಾನ ವ್ಯವಸ್ಥೆಯಲ್ಲಿನ ಉದ್ದದ ಮೂಲಮಾನ. ಒಂದು ಗಜದ ( ಯಾರ್ಡ್ ) ಮೂರನೇ ಒಂದು ಭಾಗ.
ಫೋಕಲ್ ಪ್ಲೇನ್ – ಸಂಗಮ ಮೇಲ್ಮೈ – ಒಂದು ಮಸೂರ ಅಥವಾ ಕನ್ನಡಿಯ ಅಕ್ಷಕ್ಕೆ ಲಂಬವಾಗಿರುವ ಹಾಗೂ ಅದರ ಸಂಗಮ ಬಿಂದುವಿನ ಮೂಲಕ ಹಾಯ್ದುಹೋಗುವ ಮೇಲ್ಮೈ.
ಫೋಕಲ್ ಲೆಂಗ್ತ್ – ಸಂಗಮ ದೂರ – ಒಂದು ಮಸೂರ ಅಥವಾ ಕನ್ನಡಿಯು ಬೆಳಕಿನ ಸಮಾಂತರ ಪುಂಜವೊಂದನ್ನು ಒಂದೇ ಬಿಂದುವಿಗೆ ಸೇರಿಸಿ ತರುವುದರ ದೂರದ ಅಳತೆ ಇದು.
ಫ್ರೆಸ್ನೆಲ್ ಲೆನ್ಸ್ – ಫ್ರೆಸ್ನೆಲ್ ಮಸೂರ – ಒಂದು ರೀತಿಯ ಮಸೂರ ಇದು. ಇದರ ಒಂದು ಮೇಲ್ಮೈಯನ್ನು ಮೆಟ್ಟಿಲು ಮೆಟ್ಟಿಲಾಗಿ ಕತ್ತರಿಸಿರುತ್ತಾರೆ. ಇದರಿಂದಾಗಿ ಈ ಮಸೂರದಿಂದ ಇನ್ನೂ ದಪ್ಪ, ಭಾರ ಹಾಗೂ ದುಬಾರಿಯಾದ ಸಾಂಪ್ರದಾಯಿಕ ಮಸೂರದ ಮೂಲಕ ಆಗುವಂತಹ ಬೆಳಕಿನ ವಕ್ರೀಭವನ ಉಂಟಾಗುತ್ತದೆ.
ಫ್ರೆಸ್ನೆಲ್ಸ್ ಡಿಫ್ರ್ಯಾಕ್ಷನ್ – ಫ್ರಸ್ನೆಲ್ ಹಬ್ಬುವಿಕೆ – ಇದು ಒಂದು ರೀತಿಯ (ಬೆಳಕಿನಲೆಯ) ಹಬ್ಬುವಿಕೆ. ಇದರಲ್ಲಿನ ಅಲೆಮುಖವು ಸಮತಲವಾಗಿರುವುದಿಲ್ಲ, ಬಾಗಿರುತ್ತದೆ.
ಪ್ರಸ್ನೆಲ್ – ಫ್ರೆಸ್ನೆಲ್ – ಆವರ್ತನದ ಒಂದು ಮೂಲಮಾನ ಇದು. 1000000000000 ಹರ್ಟ್ಝ್ ಗೆ ಸಮ ಹಾಗೂ ಒಂದು ಟೆರಾ ಹರ್ಟ್ಝ್ ಗೆ ಸಮ. ಇದು ಎ.ಜೆ.ಫ್ರೆಸ್ನೆಲ್ ( 1788-1827) ಎಂಬ ಫ್ರೆಂಚ್ ವಿಜ್ಞಾನಿಯ ನೆನಪಿನಲ್ಲಿ ಇಟ್ಟ ಹೆಸರು .
ಎಫ್.ಎಂ – (ಫ್ರೀಕ್ವೆನ್ಸಿ ಮಾಡ್ಯುಲೇಷನ್) – ಪ್ರಸಾರವಾಗಬೇಕಾಗಿರುವ ಶ್ರವ್ಯ ಅಥವಾ ದೃಶ್ಯ ಅಲೆಗೆ ಅನುಗುಣವಾಗಿ ಒಯ್ಯಕ ಅಲೆಯ ಆವರ್ತನವನ್ನು ನಿಯಂತ್ರಿಸುವ ಕ್ರಿಯೆ.