ಗಾದೆಮಾತುಗಳಲ್ಲಿ ಎಷ್ಟು ಸೂಕ್ಷ್ಮವಾದ ಜೀವನ ಗಮನಿಕೆ ಇರುತ್ತದೆ ಎಂಬುದಕ್ಕೆ ಈ ಗಾದೆಮಾತು ಸಾಕ್ಷಿಯಾಗಿದೆ. ಆನೆಯೊಂದಕ್ಕೆ ಇರುವೆ ತೀರಾ ಚಿಕ್ಕ ಯಕಶ್ಚಿತ್ ಜೀವಿ, ಅದು ಏನು ಮಹಾ ಭಾರ ಹೊರಬಲ್ಲುದು ಅನ್ನಿಸಬಹುದೇನೋ. ಹಾಗೆಯೇ, ಜನರು ಸಾಮಾನ್ಯವಾಗಿ ತಮ್ಮ ಸ್ವಂತ ಜವಾಬ್ದಾರಿ ಅಥವಾ ಕಷ್ಟಗಳು ತುಂಬ ಹೆಚ್ಚು ಹಾಗೂ ಬಹಳ ಗಂಭೀರ ಸ್ವರೂಪದವು ಎಂದು ಭಾವಿಸಿರುತ್ತಾರೆ. ಉದಾಹರಣೆಗೆ ಕಛೇರಿಯ ಮೇಲಧಿಕಾರಿಯೊಬ್ಬ ತನ್ನ ಜವಾಬ್ದಾರಿ, ಕೆಲಸದ ಭಾರಗಳು ಬಹಳ ಹೆಚ್ಚು, ಚಪರಾಸಿ ಅಥವಾ ಜವಾನನೊಬ್ಬನಿಗೆ ಇರುವ ಕೆಲಸ ಕಷ್ಟದ್ದಲ್ಲ ಎಂಬ ಅನಿಸಿಕೆ […]
ಫ್ಲುಯಿಡಿಟಿ- ಪ್ರವಾಹಿ ಗುಣ( ದ್ರವತ್ವ) – ಸ್ನಿಗ್ಧತೆಯ ವಿರುದ್ಧ ಗುಣ ( ಸ್ನಿಗ್ಧತೆ = ಜಿಡ್ಡು, ಮಂದ).
ಫ್ಲುಯಿಡ್ – ದ್ರವ( ಪ್ರವಾಹಿ) – ಪ್ರವಹಿಸಬಲ್ಲ ಅಂದರೆ ಹರಿಯುವ ಸಾಮರ್ಥ್ಯವಿರುವ ವಸ್ತುವಿಗೆ ಬಳಸುವ ಪದ. ಇದು ಅನಿಲವೂ ಆಗಿರಬಹುದು.
ಫ್ಲೊಟೇಷನ್ ಲಾ – ತೇಲುವಿಕೆಯ ನಿಯಮ – ಒಂದು ದ್ರವದಲ್ಲಿ ತೇಲುತ್ತಿರುವ ವಸ್ತುವು ಸ್ಥಳಪಲ್ಲಟಿಸುವ ಆ ದ್ರವದ ದ್ರವ್ಯರಾಶಿಯು ಆ ವಸ್ತುವಿನ ದ್ರವ್ಯರಾಶಿಗೆ ಸಮವಾಗಿರುತ್ತದೆ.
ಫ್ಲಿಂಟ್ ಗ್ಲಾಸ್ – ಚಕಮಕಿ ಗಾಜು – ಸೀಸದ ಸಿಲಿಕೇಟ್ ಹೊಂದಿರುವ ಒಂದು ಬಗೆಯ ಗಾಜು. ಇದನ್ನು ಮಸೂರಗಳು, ಪಟ್ಟಕಗಳು ಮುಂತಾದವನ್ನು ತಯಾರು ಮಾಡುವ ಬೆಳಕುವಿಜ್ಞಾನದ ಗಾಜಾಗಿ ಬಳಸುತ್ತಾರೆ.
ಫ್ಲಿಕ್ಕರ್ ಫೋಟೋಮೀಟರ್ – ಮಿಣುಕು ಬೆಳಕುಮಾಪಕ – ಬೇರೆ ಬೇರೆ ಬೆಳಕಿನ ಆಕರಗಳ ಬೆಳಕನ್ನು ಹೋಲಿಸಲು ಬಳಸುವ ಬೆಳಕುಮಾಪಕ.
ಫೀಲ್ಡ್ – ಕ್ಷೇತ್ರ- ಖಾಲಿ ಅವಕಾಶದಲ್ಲಿ ಕಣಗಳ ನಡುವೆ ನಡೆಯುವ ಅಂತರ್ ಕ್ರಿಯೆಯನ್ನು ವಿವರಿಸಲು ಪರಿಚಯಿಸಲ್ಪಟ್ಟ ಒಂದು ಪರಿಕಲ್ಪನೆ ಇದು. ಉದಾಹರಣೆಗೆ, ವಿದ್ಯುತ್ ಕ್ಷೇತ್ರ, ಕಾಂತ ಕ್ಷೇತ್ರ, ಗುರುತ್ವ ಕ್ಷೇತ್ರ.