Fovea ( yellow spot)

ಫೋವಿಯಾ ( ಯೆಲ್ಲೋ‌ ಸ್ಪಾಟ್) – ಕುಳಿ ( ಹಳದಿ ಕುಳಿ) – ಅಕ್ಷಿ ಪರದೆಯ (ರೆಟಿನಾ) ಮೇಲೆ ಶಂಕುಗಳು ಅತಿ ಹೆಚ್ಚಾಗಿ, ಒತ್ತೊತ್ತಾಗಿ ಸಂಗ್ರಹಿತವಾಗಿರುವ ಒಂದು ಚಿಕ್ಕ ಪ್ರದೇಶ ಇದು (ಕಾಲು ಮಿಲಿಮೀಟರ್ ). ಕಣ್ಣಿನಲ್ಲಿ ದೃಷ್ಟಿಯು ಅತ್ಯಂತ ತೀಕ್ಷ್ಣ ವಾಗಿರುವ ಸ್ಥಳವೆಂದರೆ ಇದೇ. 

ಕನ್ನಡ ಗಾದೆಮಾತು – ಉಪ್ಪು ಸಿಕ್ರೆ ತುಪ್ಪದ ಚಿಂತೆ, ತುಪ್ಪ‌ ಸಿಕ್ರೆ ಕೊಪ್ಪರಿಗೆ ಚಿಂತೆ.

ಮನುಷ್ಯನ ಆಸೆಗೆ ಮಿತಿ ಇಲ್ಲ. ಉಪ್ಪು ಸಿಗುವವರೆಗೂ ಅದರ ಚಿಂತೆ ಮಾಡುವ ಮನುಷ್ಯ ಅದು ಸಿಕ್ಕಿದ ತಕ್ಷಣ ತುಪ್ಪದ ಚಿಂತೆ ಮಾಡುತ್ತಾನೆ. ಇನ್ನು ತುಪ್ಪ ಸಿಕ್ಕಿದರೆ ಅವನಿಗೆ ತೃಪ್ತಿ ಆಗುತ್ತದೆಯೇ? ಇಲ್ಲ.‌ ಮುಂದೆ ಅವನಿಗೆ ಕೊಪ್ಪರಿಗೆ ಹೊನ್ನಿನ ಚಿಂತೆ ಶುರುವಾಗುತ್ತದೆ! ಒಟ್ಟಿನಲ್ಲಿ ಎಷ್ಟಿದ್ದರೂ ಇನ್ನಷ್ಟಕ್ಕೆ ಆಸೆ ಪಡುವುದೇ ಮನುಷ್ಯನ ಸ್ವಭಾವ.‌ ಪುರಂದರದಾಸರು ಸಹ ‘ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ’ ಎಂದು ಮನುಷ್ಯನ ಈ ಸ್ವಭಾವವನ್ನು ಬಯಲಿಗೆಳೆದಿದ್ದಾರೆ.‌ ಈ ಗಾದೆಮಾತನ್ನು ಅರ್ಥ ಮಾಡಿಕೊಂಡರೆ ಬಹುಶಃ […]

ಕನ್ನಡ ಸಂಸ್ಕೃತಿಯ ಹೆಮ್ಮೆಯಾದ ಯಕ್ಷಗಾನವನ್ನು ಹಿಂದಿ ನಾಡಿಗೆ ಕೊಂಡೊಯ್ದ ಪ್ರತಿಭಾವಂತ ಕಲಾವಿದೆ – ಶ್ರೀಮತಿ  ವಿದ್ಯಾ ಕೋಳ್ಯೂರು

ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ‘ಸಾಹಿತಿ ಹಾಗೂ ಕಲಾವಿದರ ಸಮಾವೇಶ’ದಲ್ಲಿ ಒಬ್ಬ ವಿಶಿಷ್ಟ ಕಲಾವಿದೆ – ಸಂಘಟಕಿಯನ್ನು ಭೇಟಿ ಆಗುವ ಸದವಕಾಶ ಬಂತು ನನಗೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದ ಶ್ರೀಮತಿ‌ ವಿದ್ಯಾ ಕೋಳ್ಯೂರು ಎಂಬ ಮಹಿಳೆ ಅವರು. ಊಟದ ಬಿಡುವಿನಲ್ಲಿ ಹೀಗೆಯೇ ಪರಸ್ಪರ  ಪರಿಚಯಿಸಿಕೊಂಡು  ಲೋಕಾಭಿರಾಮವಾಗಿ ಮಾತಾಡುತ್ತಾ ಇದ್ದಾಗ ಅವರ ವಿಶಿಷ್ಟ ಕಲಾಕೈಂಕರ್ಯದ ಬಗ್ಗೆ ತಿಳಿದು ನನಗೆ ಸಂತೋಷ ಮತ್ತು ಆಶ್ಚರ್ಯ ಎರಡೂ ಆದವು. ಏಕೆ ಗೊತ್ತೇ? ಕಾಸರಗೋಡಿನ ಬಳಿ ಇರುವ ಕೋಳ್ಯೂರಿನ ಹಿರಿಯ […]

Fourth dimension

ಫೋರ್ತ್ ಡೈಮೆನ್ಶನ್ – ನಾಲ್ಕನೆಯ ಆಯಾಮ   – ಅವಕಾಶ ಮತ್ತು ಸಮಯದ ನಿರಂತರತೆಯ ಒಂದು ಆಯಾಮ ಇದು. ಉದ್ದ, ಅಗಲ, ದಪ್ಪಗಳನ್ನು ಹೊರತು ಪಡಿಸಿದ ಒಂದು ಆಯಾಮ.‌

Fourier series

ಫೋರಿಯರ್ ಸೀರೀಸ್ – ಫೋರಿಯರ್ ಸರಣಿ – ನಿಯತಕಾಲಿಕ ಗುಣಕವನ್ನು ತ್ರಿಕೋನಮಿತಿಯ (ಟ್ರಿಗೋನೋಮೆಟ್ರಿ) ಗುಣಕಗಳಾಗಿ‌ ವಿಸ್ತರಿಸಿ ಬರೆಯುವುದು.  ಇದನ್ನು ಮೊದಲು‌ ಫ್ರಾನ್ಸ್ ದೇಶದ ಗಣಿತಜ್ಞರಾದ ಜೆ.ಬಿ.ಜೆ. ಫೋರಿಯರ್‌ ( 1768 – 1830) ಅವರು ಸಂಕೀರ್ಣ ಅಲೆಯ ಸುಸಂಬದ್ಧ ಅಂಗಗಳನ್ನು ಕಂಡುಹಿಡಿಯಲು ಬಳಸಿದರು.

Foucault pendulum

ಫ್ಯೂಕೋ ಪೆಂಡ್ಯುಲಮ್  –  ಫ್ಯೂಕೋರ ಲೋಲಕ –  

ಭೂಮಿಯ ಸುತ್ತುವಿಕೆಯಿಂದಾಗಿ ನಿಧಾನವಾಗಿ ತಿರುಗುವ ಮೇಲ್ಮೈ ಹೊಂದಿರುವ ಒಂದು ಸರಳ ಲೋಲಕ ಇದು‌‌. 1851 ರಲ್ಲಿ ಫ್ರೆಂಚ್ ಭೌತವಿಜ್ಞಾನಿಯಾದ  ಜೀನ್ ಬರ್ನಾರ್ಡ್ ಲಿಯೋನ್ ಫ್ಯೂಕೋರು  ಇದನ್ನು ಕಂಡುಹಿಡಿದರು. ‌ಭೂಮಿಯ ಸುತ್ತುವಿಕೆಗೆ ಮೊದಲ ನೇರ ಸಾಕ್ಷಿ ಕೊಟ್ಟದ್ದು ಈ ಲೋಲಕ.

Fossil fuel

ಫಾಸಿಲ್ ಫ್ಯುಯೆಲ್ – ಪಳೆಯುಳಿಕೆ ಇಂಧನ – ಜನರು ಶಕ್ತಿಯ ಆಕರವಾಗಿ ಬಳಸುವ ಕಲ್ಲಿದ್ದಲು, ತೈಲ ಅಥವಾ ಜೈವಿಕ ( ಸಹಜ) ಅನಿಲದಂತಹ ಇಂಧನಗಳು.‌ ಇವುಗಳು ಜೀವಿಗಳ ಅವಶೇಷಗಳಿಂದ ರೂಪುಗೊಂಡಿರುತ್ತವೆ.  ಇವುಗಳಲ್ಲಿ ಅಧಿಕ ಪ್ರಮಾಣದ ಜಲಜನಕ ಅಥವಾ ಇಂಗಾಲ ಇರುತ್ತದೆ‌.

Formula 

ಫಾರ್ಮುಲಾ – ಸೂತ್ರ –  (ಅ)ರಸಾಯನ ಶಾಸ್ತ್ರದಲ್ಲಿ ಒಂದು ಸಂಯುಕ್ತವಸ್ತುವನ್ನು ಅಕ್ಷರ ರೂಪದಲ್ಲಿ ನಿರೂಪಿಸುವುದು. ‌ಆ ವಸ್ತುವಿನಲ್ಲಿರುವ ಪರಮಾಣುಗಳಿಗೆ ಸಂಕೇತವನ್ನು ನೀಡುವ ಮೂಲಕ ಅದರ ಸೂತ್ರವನ್ನು ಬರೆಯುತ್ತಾರೆ.

(ಆ). ಗಣಿತ ಮತ್ತು ಭೌತಶಾಸ್ತ್ರದಲ್ಲಿ ಒಂದು ನಿಯಮ ಅಥವಾ ಸಿದ್ಧಾಂತವನ್ನು ಬೀಜಗಣಿತದ ಸಂಕೇತಗಳಿಂದ ಸೂಚಿಸುವುದು. 

ಕನ್ನಡ ಗಾದೆ ಮಾತು – ಚಿನ್ನದ ಸೂಜಿ ಅಂತ ಕಣ್ಣು ಚುಚ್ಕೊಳೋಕ್ಕಾಗುತ್ತಾ?

ಕನ್ನಡ ಜನರು ಬಳಸುವ ಒಂದು ಅನುಭವಜನ್ಯ ಮಾತು ಇದು. ಸೂಜಿಯನ್ನು ಚಿನ್ನದಿಂದ ಮಾಡಿದ್ದಾರೆ ಎಂದು ಕಣ್ಣಿಗೆ ಚುಚ್ಚಿಕೊಂಡರೆ ಅದು ಚುಚ್ಚದೆ ಇರುವುದಿಲ್ಲ, ಅಲ್ಲವೇ? ಹಾಗೆಯೇ ನಮ್ಮವರು ಎಂದು ನಾವು ಭಾವಿಸುವವರು ಕೆಟ್ಟದ್ದನ್ನು ಮಾಡಿದರೆ ಅದು ಕೆಟ್ಟ ಕೆಲಸವೇ ತಾನೇ.‌ ನಮ್ಮ ಮಕ್ಕಳು/ನೆಂಟರು/ಸ್ನೇಹಿತರು ತಪ್ಪು ಕೆಲಸ ಮಾಡಿದಾಗ ಅದನ್ನು ಒಪ್ಪಿಟ್ಟುಕೊಳ್ಳಲು ಸಾಧ್ಯ ಇಲ್ಲ.‌ ಇಂತಹ ವಿಷಾದಕರ ಸಂದರ್ಭಗಳಲ್ಲಿ ಮೇಲ್ಕಂಡ ಗಾದೆಮಾತನ್ನು ಬಳಸಲಾಗುತ್ತದೆ.  Kannada proverb – Chinnada sooji antha kannu chuchkolloke aaguththa? ( Just because […]

“ಮ್ಯಾಮ್ ಅನ್ನಕ್ಕೆ ಕನ್ನಡದಲ್ಲಿ ‌ಯಾವ ಪದ ಬಳಸ್ಬೇಕು ಮ್ಯಾಮ್?”

ತರಗತಿಗಳಲ್ಲಿ ಆದಷ್ಟೂ ಕನ್ನಡ ಪದಗಳನ್ನು ಬಳಸಬೇಕು ಎಂದು ಪ್ರಯತ್ನ ಮಾಡುವ ನಾನು ನನ್ನ ವಿದ್ಯಾರ್ಥಿನಿಯರಿಗೂ  (ಈಗ ನಾನು ಕೆಲಸ ಮಾಡುತ್ತಿರುವುದು ಒಂದು ಸರ್ಕಾರಿ ಮಹಿಳಾ ಕಾಲೇಜಾದ್ದರಿಂದ ನನ್ನ ತರಗತಿಗಳಲ್ಲಿ ಕೇವಲ ವಿದ್ಯಾರ್ಥಿನಿಯರಿರುತ್ತಾರೆ)  “ಆದಷ್ಟೂ ಕನ್ನಡ ಪದಗಳನ್ನು ಬಳಸಿ ಮಾತಾಡಿ ಮಕ್ಕಳೇ, ನಿಮ್ಮ‌  ಪದ ಸಂಪತ್ತು ಹೆಚ್ಚುತ್ತೆ” ಅಂತ ಹೇಳುತ್ತಿರುತ್ತೇನೆ. ಪಾಪ, ಅವರೂ ಕಲಿಯುವ ಉತ್ಸಾಹದಲ್ಲಿ ಈ ಪ್ರಯತ್ನವನ್ನು ಶದ್ಧೆಯಿಂದ ಪ್ರಾರಂಭಿಸುತ್ತಾರೆ.‌ ‘ನಾನು ಒಳಗೆ ಬರಬಹುದೇ?’, ಸಮಯ, ತರಗತಿ, ಪಾಠ, ಪಠ್ಯಪುಸ್ತಕ, ಕಿರುಪರೀಕ್ಷೆ, ಹಾಜರಾತಿ, ನಿಯೋಜಿತ ಕಾರ್ಯ, ಅಂಕ, […]

Page 42 of 112

Kannada Sethu. All rights reserved.