Force ratio

ಫೋರ್ಸ್ ರೇಷ್ಯೋ‌ – ಬಲದ ಅನುಪಾತ – ಯಂತ್ರವೊಂದಕ್ಕೆ ಸಂಬಂಧಿಸಿದಂತೆ ಅದಕ್ಕೆ ಕೊಡುವ ಬಲ( ಎಫರ್ಟ್) ಕ್ಕೂ ಅದು ಕೊಡುವ ಬಲಕ್ಕೂ ( ಲೋಡ್) ಇರುವ ಅನುಪಾತ. ಇದಕ್ಕೆ ಯಾವುದೇ ಮೂಲಮಾನವಿಲ್ಲ, ಆದರೆ ಇದನ್ನು ಶೇಕಡಾವಾರು ಲೆಕ್ಕದಲ್ಲಿ ನಿರೂಪಿಸುತ್ತಾರೆ.  ಕಡಿಮೆ ಬಲ ಕೊಟ್ಟು ಹೆಚ್ಚು ಬಲ ಪಡೆಯುವಂತೆ ಯಂತ್ರಗಳನ್ನು ರೂಪಿಸಲು  ಯಾವಾಗಲೂ  ಪ್ರಯತ್ನಿಸುತ್ತಾರೆ.

Forced oscillation

ಫೋರ್ಸ್ಡ್ ಆಸ್ಸಿಲೇಷನ್ – ಬಲವಂತದ ಆಂದೋಲನ – ಒಂದು ವಸ್ತು ಅಥವಾ ವ್ಯವಸ್ಥೆಯ ಸಹಜ ಆವರ್ತನದ್ದಲ್ಲದ ಆಂದೋಲನ. ಬಲವಂತದ ಆಂದೋಲನವನ್ನು ನಿಯತವಾದ ಬಾಹ್ಯ ಬಲದಿಂದ ಪ್ರೇರಿಸಬೇಕಾಗುತ್ತದೆ.

Forced convection

ಫೋರ್ಸ್ಡ್ ಕನ್ವೆಕ್ಷನ್ – ಬಲವಂತದ ಉಷ್ಣವರ್ಗಾವಣೆ – ಬಿಸಿಯಾಗಿರುವ ದ್ರವವನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ರೇಚಕ ( ಪಂಪು) ಅಥವಾ ಪಂಖಾದಿಂದ ತಳ್ಳಿ ಬಲವಂತವಾಗಿ ವರ್ಗಾಯಿಸುವ ಕ್ರಿಯೆ.

Force 

ಫೋರ್ಸ್‌ – ಬಲ – ನಿಷ್ಕ್ರಿಯ ವಸ್ತುವೊಂದರ ದ್ರವ್ಯವೇಗವನ್ನು ( ಮೊಮೆಂಟಮ್ ಅನ್ನು) ಬದಲಾಯಿಸುವ ಮಾಡುಗ ಇದು‌. ಬಲವು ದ್ರವ್ಯವೇಗದ ಹೆಚ್ಚುವಿಕೆಯ ಗತಿಗೆ ಸಮಾನುಪಾತದಲ್ಲಿರುತ್ತದೆ.

Forbidden band 

ಫೊರ್ಬಿಡನ್ ಬ್ಯಾಂಡ್ – ನಿಷಿದ್ಧ ಪಟ್ಟಿ – ಒಂದು ಘನವಸ್ತುವಿನ ಹರಳಿನಲ್ಲಿ ಯಾವ ಎಲೆಕ್ಟ್ರಾನು ಸಹ ಪ್ರವೇಶಿಸದ/ತನ್ನದಾಗಿಸದ ಶಕ್ತಿ ಪಟ್ಟಿ ಇದು‌. ಶಕ್ತಿಪಟ್ಟಿಗಳ ಚಿತ್ರಗಳಲ್ಲಿ ಇವು ಖಾಲಿಜಾಗಗಳಾಗಿ ಕಂಡು ಬರುತ್ತವೆ.

ಕನ್ನಡ ಗಾದೆಮಾತು – ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ.

ಕೇಳಲು ಆಕರ್ಷಕ ಎನಿಸುವಂತೆ ಪ್ರಾಸಬದ್ಧವಾಗಿರುವ ಮೇಲಿನ ಗಾದೆಮಾತು ಬಹು ಮುಖ್ಯವಾದ ಒಂದು ಜೀವನಮೌಲ್ಯವನ್ನು ಕಲಿಸುತ್ತದೆ. ನಮಗೆ ಅನ್ನ ಹಾಕಿದ ಮನೆ – ಅದು ನಮ್ಮ ಅಪ್ಪ-ಅಮ್ಮನ ಮನೆ, ನೆಂಟರ ಮನೆ, ಸ್ನೇಹಿತರ ಮನೆ, ಹಳೆಯ ಕಾಲದಲ್ಲಿ ವಿದ್ಯಾರ್ಥಿಗಳಿಗೆ ವಾರಾನ್ನ ಹಾಕುತ್ತಿದ್ದ ಮನೆ ಯಾವುದಾದರೂ ಆಗಬಹುದು ……. ಒಟ್ಟಿನಲ್ಲಿ ಯಾವ ಮನೆ ನಮ್ಮನ್ನು ಪೋಷಿಸಿರುತ್ತದೋ, ಅಲ್ಲಿ ನಾವು ಕಳ್ಳತನ ಮಾಡಬಾರದು, ಆ ಮನೆಗೆ ತೊಂದರೆ ಆಗುವಂಥದ್ದೇನನ್ನೂ ಮಾಡಬಾರದು ಎಂಬುದು ಈ ಗಾದೆಮಾತಿನ ಅರ್ಥ. ‌ಎಷ್ಟು ಉತ್ತಮ‌ ಮೌಲ್ಯ ಅಲ್ಲವೇ ಇದು! […]

ನವಪದ ನಾಯಕಿ ಹಾಗೂ ಸೂಕ್ತಿ ಸಂಪಾದಕಿ   : ಶಾಲಾ-ಕಾಲೇಜಿನ ತರಗತಿಗಳು ಕನ್ನಡದ ಉಳಿವಿಗಾಗಿ  ತೆರೆಯಬಲ್ಲ  ಕಿಟಕಿ

 “ಅಧ್ಯಾಪಕರು ಚಿರಂತನ ಆಶಾವಾದಿಗಳು” ಎಂಬ ಒಂದು ಮಾತಿದೆ. ನಾಳೆಯ ಪ್ರಜೆಗಳಾದ ವಿದ್ಯಾರ್ಥಿಗಳ ಮನಸ್ಸನ್ನು ರೂಪಿಸುವ ಕೆಲಸ ಮಾಡುವ ಅವರು ಮುಂದಿನ ಪೀಳಿಗೆಗಳ ಬಗ್ಗೆ ಭರವಸೆ ಕಳೆದುಕೊಳ್ಳಬಾರದು ಎಂಬ ಆಶಯ ಈ ಸೂಕ್ತಿಯ ಹಿಂದೆ ಇದೆ ಅನ್ನಿಸುತ್ತೆ. ‌ಈ ಹಿನ್ನೆಲೆಯಲ್ಲಿ ಒಬ್ಬ ಕನ್ನಡ ಅಧ್ಯಾಪಕಿಯಾಗಿ ನಾನು ಮುಂದಿನ ಪೀಳಿಗೆಗಳು ಕನ್ನಡವನ್ನು  ತಮ್ಮ  ಹೃದಯಕ್ಕೆ ಹತ್ತಿರವಿರಿಸಿಕೊಳ್ಳುವಂತೆ ಪ್ರೇರೇಪಿಸಲು ಏನು ಮಾಡಬಹುದು ಎಂದು‌  ಯೋಚಿಸುತ್ತಾ ಇರುತ್ತೇನೆ.  ಹೀಗೆ ಯೋಚಿಸಿದಾಗ ಈ ಅಧ್ಯಾಪಕಿಗೆ ತೋಚಿದ ಒಂದು ಸರಳ ಉಪಾಯ ಅಂದರೆ ಪ್ರತಿದಿನವೂ ತರಗತಿಯಲ್ಲಿ ಕರಿಹಲಗೆಯ […]

Foot 

ಫುಟ್ – ಅಡಿ  :  ಫುಟ್- ಪೌಂಡ್- ಸೆಕೆಂಡ್ ( ಎಫ್. ಪಿ. ಎಸ್) ಮೂಲಮಾನ ವ್ಯವಸ್ಥೆಯಲ್ಲಿನ  ಉದ್ದದ ಮೂಲಮಾನ.‌ ಒಂದು ಗಜದ ( ಯಾರ್ಡ್ )  ಮೂರನೇ ಒಂದು ಭಾಗ. 

Focal plane

 ಫೋಕಲ್ ಪ್ಲೇನ್ – ಸಂಗಮ‌ ಮೇಲ್ಮೈ –  ಒಂದು ಮಸೂರ ಅಥವಾ ಕನ್ನಡಿಯ ಅಕ್ಷಕ್ಕೆ ಲಂಬವಾಗಿರುವ ಹಾಗೂ ಅದರ ಸಂಗಮ ಬಿಂದುವಿನ ಮೂಲಕ ಹಾಯ್ದುಹೋಗುವ ಮೇಲ್ಮೈ.

Focal length 

ಫೋಕಲ್ ಲೆಂಗ್ತ್ – ಸಂಗಮ ದೂರ – ಒಂದು ಮಸೂರ ಅಥವಾ ಕನ್ನಡಿಯು ಬೆಳಕಿನ‌ ಸಮಾಂತರ ಪುಂಜವೊಂದನ್ನು ಒಂದೇ ಬಿಂದುವಿಗೆ ಸೇರಿಸಿ ತರುವುದರ ದೂರದ ಅಳತೆ ಇದು.‌

Page 43 of 112

Kannada Sethu. All rights reserved.