ಯೂಸ್ ಇಟ್ ಆರ್ ಲೂಸ್ ಇಟ್ – ಜೀವಿಗಳು ತಮ್ಮ ದೇಹದ ಅಂಗಗಳನ್ನು ದೀರ್ಘ ಕಾಲ ಬಳಸದೆ ಹೋದರೆ ಆ ಜೀವಿಗಳ ಮುಂದಿನ ಪೀಳಿಗೆಗಳು ಆ ಅಂಗವನ್ನು ಕಳೆದುಕೊಳ್ಳುತ್ತವೆ ಎಂಬುದು ಜೀವಶಾಸ್ತ್ರದ ನಿಯಮ. ಒಬ್ಬ ಕನ್ನಡ ಭಾಷಾ ಅಧ್ಯಾಪಕಿಯಾಗಿ ನನಗೆ ಈ ನಿಯಮವು ಕನ್ನಡ ಭಾಷೆಯ ಪದಗಳಿಗೂ ಅನ್ವಯಿಸುತ್ತದೆ ಅನ್ನಿಸುತ್ತದೆ. ಸೊಗಸು, ಅವ್ಸರ, ಸಾಂಗ, ಫಜೀತಿ, ಪಿಚ್ಚೆನ್ನಿಸು, ವರ್ತ್ನೆ, ಶಾಮೀಲು, ಧಾರಾಳ, ನಿಧಾನಸ್ಥ, ತಿಂದೂ ಉಂಡೂ, ಕಂಡಿದಾರೆ ಕಂಡಿದಾರೆ, ಚಳುಕು, ಕುಸುಬಿಷ್ಟೆ, ರಾಜಾರೋಷವಾಗಿ, ದಂಡಿಯಾಗಿ, ಮಾರಾಯ್ರಾಗಿ…….ನಮ್ಮ ತಾತ, ಅಜ್ಜಿಯ ಕಾಲದಲ್ಲಿ […]
ಫ್ಲಕ್ಸ್ – ವಸ್ತುಪ್ರವಾಹ ಅಥವಾ ಶಕ್ತಿಪ್ರವಾಹ – 1. ವಸ್ತು ಅಥವಾ ಶಕ್ತಿಯು ಹರಿಯುತ್ತಿರುವ ದಿಕ್ಕಿಗೆ ಲಂಬವಾಗಿರುವ ಏಕಘಟಕ ವಿಸ್ತೀರ್ಣದಲ್ಲಿ, ಹರಿಯುವ ಆ ವಸ್ತು ಅಥವಾ ಶಕ್ತಿಯ ಹರಿವಿನ ಗತಿ.
2. ಕ್ಷೇತ್ರದಲ್ಲಿನ ಬಲದ ರೇಖೆಗಳ ಸಂಖ್ಯೆ.
ಫ್ಲೂಟ್ – ಒಂದು ಸಂಗೀತವಾದ್ಯ: ಒಂದು ಕೊಳವೆಯುದ್ದಕ್ಕೂ ಆರು ರಂಧ್ರಗಳನ್ನು ಮಾಡಿರುತ್ತಾರೆ. ಇದರ ಒಂದು ತುದಿಯಲ್ಲಿರುವ ಬಾಯಿಯಲ್ಲಿ ಊದಿದ ಗಾಳಿಯು ಕಂಪನಕ್ಕೆ ಒಳಗಾಗುತ್ತದೆ. ಇದರ ರಂಧ್ರಗಳ ಮೇಲೆ ಬೆರಳುಗಳನ್ನು ಬೇರೆ ಬೇರೆ ಸಂಯೋಜನೆಯಲ್ಲಿ ಇಟ್ಟು ತೆರೆದು ಮಾಡಿದಾಗ ಬೇರೆ ಬೇರೆ ಸ್ವರಗಳು ಹುಟ್ಟುತ್ತವೆ.
ಫ್ಲೂರೋಸ್ಕೋಪ್ – ಬಹಿರ್ ಪ್ರಕಾಶದರ್ಶಕ – ಸೂಕ್ತವಾದ ರೀತಿಯಲ್ಲಿ ಏರಿಸಲ್ಪಟ್ಟ ಬಹಿರ್ ಪ್ರಕಾಶ ಪರದೆಯನ್ನು ಹೊಂದಿರುವ ಒಂದು ಉಪಕರಣ. ಇದರಲ್ಕಿ ಕ್ಷ-ಕಿರಣ ಕೊಳವೆಯನ್ನು ಸಹ ಅಳವಡಿಸಲಾಗಿರುತ್ತದೆ. ಇದರಿಂದಾಗಿ ಪರದೆ ಮತ್ತು ಕ್ಷ-ಕಿರಣ ಕೊಳವೆಗಳ ನಡುವೆ ಇಟ್ಟ ವಸ್ತುವಿನ ಕ್ಷ-ಕಿರಣ ನೆರಳಿನ ದೃಗ್ಗೋಚರ ಬಿಂಬವು ಪರದೆಯಲ್ಲಿ ಕಾಣಿಸುತ್ತದೆ.
ಪ್ಲೋರೋಸೆಂಟ್ ಲ್ಯಾಂಪ್ – ಬಹಿರ್ ಪ್ರಕಾಶ ಬೀರುವ ವಸ್ತುವೊಂದನ್ನು ಒಂದು ಗಾಜಿನ ಕೊಳವೆಯ ಒಳಭಾಗಕ್ಕೆ ಹೆಚ್ಚಿದ್ದು, ಇದು ಬೆಳಕಿನ ಆಕರದಂತೆ ಕೆಲಸ ಮಾಡುವ ವ್ಯವಸ್ಥೆ.
ಫ್ಲೋರೋಸೆನ್ಸ್ – ಬಹಿರ್ ಪ್ರಕಾಶ – ಕೆಲವು ವಸ್ತುಗಳು ಒಂದು ತರಂಗಾಂತರದ ಬೆಳಕನ್ನು ಹೀರಿಕೊಂಡು ಇನ್ನೊಂದು ತರಂಗಾಂತರದ ಬೆಳಕನ್ನು ಹೊರಚೆಲ್ಲುತ್ತವೆ. ಇದು ಒಂದು ರೀತಿಯ ಸ್ವಯಂಪ್ರಕಾಶವಾಗಿರುತ್ತದೆ.
ಫ್ಲುಯಿಡಿಟಿ- ಪ್ರವಾಹಿ ಗುಣ( ದ್ರವತ್ವ) – ಸ್ನಿಗ್ಧತೆಯ ವಿರುದ್ಧ ಗುಣ ( ಸ್ನಿಗ್ಧತೆ = ಜಿಡ್ಡು, ಮಂದ).
ಫ್ಲುಯಿಡ್ – ದ್ರವ( ಪ್ರವಾಹಿ) – ಪ್ರವಹಿಸಬಲ್ಲ ಅಂದರೆ ಹರಿಯುವ ಸಾಮರ್ಥ್ಯವಿರುವ ವಸ್ತುವಿಗೆ ಬಳಸುವ ಪದ. ಇದು ಅನಿಲವೂ ಆಗಿರಬಹುದು.
Like us!
Follow us!