ಕನ್ನಡದ ಒಂದು ಜನಪ್ರಿಯ ಗಾದೆ ಮಾತು ಇದು ; ಉತ್ಪ್ರೇಕ್ಷೆಯ ಮೂಲಕ ಜನಗಳ ಸ್ವಭಾವವೊಂದನ್ನು ಕುರಿತು ಒಳನೋಟ ನೀಡುತ್ತದೆ. ಹಿಂದೂ ಧರ್ಮದ ದೇವಸ್ಥಾನಗಳಿಗೆ ಹೋದಾಗ ದೇವರಿಗೆ ಪೂಜೆ ಆದ ಮೇಲೆ ಮಂಗಳಾರತಿ, ತೀರ್ಥ ಕೊಡುವುದು ಪದ್ಧತಿ ಅಲ್ಲವೇ? ಅಲ್ಲಿ ಮಂಗಳಾರತಿಯ ತಾಪಕ್ಕೆ ಮತ್ತು ತೀರ್ಥದ ತಂಪಿಗೆ ನಾವು ಸಲ್ಲುವುದು ಒಂದೆರಡು ಮೂರು ಕ್ಷಣಗಳ ಕಾಲ ಅಷ್ಟೇ. ಅದರಿಂದಾಗಿ ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಆದರೆ ಕೆಲವು ಅತಿಸೂಕ್ಷ್ಮ ಮನಸ್ಸು ಅಥವಾ ಅತಿಸೂಕ್ಷ್ಮ ಆರೋಗ್ಯ ಪರಿಸ್ಥಿತಿಯವರು, ಬೇರೆಯವರು […]
ಫಿಶನ್ – ವಿದಳನ( ಒಡೆಯುವಿಕೆ) – ಪರಮಾಣು ಬೀಜಕೇಂದ್ರವು ಎರಡು ಅಥವಾ ಅದಕ್ಕಿಂತ ಹೆಚ್ಚು ಚೂರುಗಳಾಗಿ ಒಡೆದುಕೊಳ್ಳುವುದು (ವಿದಳನಗೊಳ್ಳುವುದು).
ಫಿಸ್ಸೈಲ್ ಮೇಟೀರಿಯಲ್ – ವಿದಳನ ವಸ್ತು – ಬೀಜ ಕೇಂದ್ರ ವಿದಳನ ( ಒಡೆಯುವ) ಕ್ರಿಯೆಗೆ ಒಳಗಾಗುವ ವಸ್ತು ಅಥವಾ ಸಾಮಗ್ರಿ. ಕೆಲವು ಸಲ ಈ ಕ್ರಿಯೆಯು ವಿದಳನ ವಸ್ತುವಿನಲ್ಲಿ ತನ್ನಂತಾನೇ ನಡೆಯುತ್ತದೆ. ಆದರೆ ಸಾಮಾನ್ಯವಾಗಿ ನ್ಯೂಟ್ರಾನ್‌ಗಳಿಂದ ವಿಕರಣೀಕರಿಸಿದಾಗ ಈ ವಿದಳನ ನಡೆಯುತ್ತದೆ.
ಫೈನ್ ಸ್ಟ್ರಕ್ಚರ್ – ವರ್ಣಪಟಲವೊಂದರ ಗೆರೆ ಅಥವಾ ಪಟ್ಟಿಯಲ್ಲಿರುವಂತಹ, ಹೆಚ್ಚಿನ ವಿಂಗಡಿಸುವಿಕೆಯಲ್ಲಿ ಗೋಚರವಾಗುವ, ತುಂಬ ಹತ್ತಿರ ಹತ್ತಿರ ಇರುವ ಗೆರೆಗಳು. ಎಲೆಕ್ಟ್ರಾನು ಗಿರಕಿ ಅಥವಾ ಅಣುಗಳ ಕಂಪನಯುತ ಚಲನೆಯಿಂದಾಗಿ ಇಂತಹ ನಾಜೂಕು ರಚನೆಗಳು ಉಂಟಾಗುತ್ತವೆ.
ಫಿಲ್ಟರ್- ಸೋಸುಕ – ಇದು ಒಂದು ಉಪಕರಣ ಅಥವಾ ವಿದ್ಯುನ್ಮಂಡಲ ; ಇದು ಕೆಲವು ನಿರ್ದಿಷ್ಟ ಆವರ್ತನಗಳನ್ನು ಮಾತ್ರ ಒಳಗೆ ಸರಿಯಲು ಬಿಟ್ಟು ಇನ್ನುಳಿದ ಆವರ್ತನಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಫಿಲಮೆಂಟ್ – ತಂತು (ದಾರದಂತಿರುವ ತಂತಿ) – ತುಂಬ ಹೆಚ್ಚಿನ ಕುದಿಬಿಂದು ಹೊಂದಿರುವ ಟಂಗ್ ಸ್ಟನ್ ಅಥವಾ ಬೇರೆ ಲೋಹದ, ದಾರದಷ್ಟು ತೆಳುವಾಗಿರುವ ತಂತಿ. ಇದನ್ನು ಪ್ರಕಾಶ ಬೀರುವಂತಹ ವಿದ್ಯುತ್ ದೀಪಗಳಲ್ಲಿ ಮತ್ತು ಉಷ್ಣಅಯಾನು ಕವಾಟಗಳಲ್ಲಿ ಬಳಸುತ್ತಾರೆ.
ಫೀಲ್ಡ್ ಮ್ಯಾಗ್ನೆಟ್ – ಕ್ಷೇತ್ರ ಅಯಸ್ಕಾಂತ – ಒಂದು ವಿದ್ಯುತ್ ಉಪಕರಣದಲ್ಲಿ ಕಾಂತಕ್ಷೇತ್ರವನ್ನು ನೀಡುವಂತಹ ಅಯಸ್ಕಾಂತ. ಕೆಲವು ಚಿಕ್ಕ ವಿದ್ಯುಜ್ಜನಕ ಅಥವಾ ವಿದ್ಯುದುತ್ಪಾದಕ ಯಂತ್ರಗಳಲ್ಲಿ ಇದು ಶಾಶ್ವತ ಅಯಸ್ಕಾಂತವಾಗಿರುತ್ತದೆ, ಆದರೆ ಬಹುತೇಕ ಯಂತ್ರಗಳಲ್ಲಿ ಇದೊಂದು ವಿದ್ಯುತ್ ಕಾಂತವಾಗಿರುತ್ತದೆ.
Like us!
Follow us!