Fermi level 

ಫರ್ಮಿ ಲೆವೆಲ್ – ಫರ್ಮಿ ಮಟ್ಟ – ಪರಮಶೂನ್ಯದಲ್ಲಿ ವಾಸ್ತವ್ಯವು‌ ಸಾಧ್ಯವಾಗಬಹುದಾದ ಅತಿ ಹೆಚ್ಚಿನ ಮಟ್ಟ. ‌ಇದು ವಾಹಕಗಳಲ್ಲಿ ವಾಹಕತಾ ಪಟ್ಟಿಯಲ್ಲಿ, ಅವಾಹಕಗಳಲ್ಲಿ ಅಂಚಿನ ಪಟ್ಟಿಯಲ್ಲಿ ಮತ್ತು ಅರೆವಾಹಕಗಳಲ್ಲಿ ನಿಷೇಧಿತ ಬಿರುಕುಪಟ್ಟಿಯಲ್ಲಿ ಇರುತ್ತದೆ.

Fermions

ಫರ್ಮಿಯಾನ್ಸ್ –  ಫರ್ಮಿಯಾನುಗಳು – ಫರ್ಮಿ ಡೆರಾಕ್ ಅಂಕಿಅಂಶಗಳನ್ನು ಪಾಲಿಸುವ ಕಣಗಳು.

Fermi gas model 

 ಫರ್ಮಿ ಅನಿಲ ಮಾದರಿ – ಇದು ಪರಮಾಣು ಬೀಜಕೇಂದ್ರದ ಒಂದು ವಿನ್ಯಾಸ ಮಾದರಿ. ಇದರಲ್ಲಿ ನ್ಯೂಟ್ರಾನು ಮತ್ತು ಪ್ರೋಟಾನುಗಳನ್ನು ಫರ್ಮಿ-ಡೆರಾಕ್ ಸಂಖ್ಯಾಶಾಸ್ತ್ರವನ್ಜು ಪಾಲಿಸುವ ಮತ್ತು ಬೀಜಕೇಂದ್ರದ ಅಳತೆಯ ಘನಾಕೃತಿಯೊಳಗೆ, ಹೊರಗೆ ಬರದಂತೆ ಬಂಧಿಸಿ ಇಡಲ್ಪಟ್ಟ ಸ್ವತಂತ್ರ ಕಣಗಳು ಎಂದು ನೋಡಲಾಗುತ್ತದೆ.

Fermi-Dirac statistics

ಫರ್ಮಿ‌ ಡೆರಾಕ್ ಸ್ಟ್ಯಾಟಿಸ್ಟಿಕ್ಸ್ – ಫರ್ಮಿ ಡೆರಾಕ್ ಸಂಖ್ಯಾಶಾಸ್ತ್ರ – ಸಂಖ್ಯಾಶಾಸ್ತ್ರದ ಒಂದು ‌ಶಾಖೆ ಇದು. ಇದನ್ನು ಏಕರೂಪೀ ಕಣಗಳ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಬಳಸುತ್ತಾರೆ. ಎನ್ರಿಕೊ ಫರ್ಮಿ ಮತ್ತು ಪಿ.ಎ.ಎಂ. ಡೆರಾಕ್ ಅವರ ನೆನಪಿನಲ್ಲಿ ಈ ಹೆಸರು.

Feedback

ಫೀಡ್ ಬ್ಯಾಕ್ – ಹಿಮ್ಮರಳಿಕೆ – ಒಂದು ಉಪಕರಣ( ಉದಾ : ಶಕ್ತಿ ವರ್ಧಕ)ದಿಂದ ಹೊರಬೀಳುವ ಶಕ್ತಿಯ ಒಂದು ಭಾಗವನ್ನು ಮೂಲ  ಆಕಾರಕ್ಕೆ ಹಿಮ್ಮರಳಿಸುವುದು.

ಕನ್ನಡ ಗಾದೆಮಾತು    –   ತಲೆ ಮೇಲೆ ಸಾಲ ಹೋಗ್ಬಾರ್ದು, ಒಲೆ ಮೇಲೆ ಬೆಂಕಿ ಹೋಗ್ಬಾರ್ದು. 

ಜೀವನ ವಿವೇಕದ ಮಾತೊಂದನ್ನು ಅಡಿಗೆ ಮನೆಯ ಹೋಲಿಕೆಯೊಂದಿಗೆ ಈ ಗಾದೆಮಾತು ಹೇಳುತ್ತದೆ. ನಾವು ಸಾಲ ಮಾಡುವಾಗ, ಯಾವತ್ತೂ ಸಹ,  ಎಂದಿಗೂ ತೀರಿಸಲಾಗದಷ್ಟು ಪ್ರಮಾಣದಲ್ಲಿ ಸಾಲ ಮಾಡಬಾರದು‌. ಹೀಗೆ ಮಾಡಿದರೆ ನಾವು ಭರಿಸಲಾಗದ ಕಷ್ಟನಷ್ಟಗಳನ್ನು ಅನುಭವಿಸುತ್ತೇವೆ. ಒಲೆಯ ಬೆಂಕಿ ಹೇಗೆ ಒಲೆಯಿಂದ ಮೇಲೆ ಹೋಗಿ ಅಪಾಯವುಂಟು ಮಾಡುವ ಪರಿಸ್ಥಿತಿ ಬರಬಾರದೋ, ಹಾಗೆಯೇ ಸಾಲಸೋಲ ಎನ್ನುವುದು  ಅತಿಯಾಗಬಾರದು. ಸದಾ ಒಂದು ಮಿತಿಯಲ್ಲಿ, ನಾವು ಭರಿಸಲಾಗುವ  ಸ್ಥಿತಿಯಲ್ಲಿ  ಇರಬೇಕು.  Kannada proverb – Thale mele saala hogbardu, ole mele […]

“ತರಂ……ಗ…….ತರಂ……ಗ…..”  ರಿಂಗಣಿಸುತ್ತಿದ್ದ ಪೇಪರ್ ತಾತನ ಧ್ವನಿ

ಸುಧಾ, ಕರ್ಮವೀರ ಮುಂತಾದ ಕನ್ನಡ ವಾರಪತ್ರಿಕೆಗಳ ಸಾಲಿನಲ್ಲಿ ಬರುವ ಒಂದು ವಾರಪತ್ರಿಕೆ ‘ತರಂಗ’.‌ ನಲವತ್ತೆರಡು ವರ್ಷಗಳ ಹಿಂದೆ ಪ್ರಾರಂಭವಾಯಿತು.‌ ಉದಯವಾಣಿ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಮಣಿಪಾಲ್ ಪಬ್ಲಿಕೇಷನ್ಸ್ ನವರು ತರಲಾರಂಭಿಸಿದ ವಾರಪತ್ರಿಕೆ ಇದು‌‌.  ನನ್ನ ಬಾಲ್ಯಕಾಲದ ನೆನಪುಗಳಲ್ಲಿ ‘ತರಂಗ’ ಆಪ್ತವಾಗಿ‌ ಸೇರಿ ಹೋಗಿದೆ. ಇದಕ್ಕೆ, ಮಂಗಳೂರಿನಲ್ಲಿ ಕಳೆದ ನನ್ನ ಬಾಲ್ಯದಲ್ಲಿ ಪುಸ್ತಕ ಪ್ರಿಯರಾದ ನನ್ನ ತಂದೆತಾಯಿಯರು ಮನೆಗೆ ತರಿಸುತ್ತಿದ್ದ ತರಂಗ ವಾರಪತ್ರಿಕೆ ಹಾಗೂ ಅದರಲ್ಲಿನ ‘ಬಾಲವನದಲ್ಲಿ ಕಾರಂತಜ್ಜ’ ಅಂಕಣಗಳು ಒಂದು ಕಾರಣವಾದರೆ, ಸೈಕಲ್ ಮೇಲೆ ಪತ್ರಿಕೆ ತರುವಾಗ ‘ತರಂ…ಗ…..ತರಂ…ಗ ‌…’ […]

Fatigue

ಫೆಟೀಗ್ – ವೈಫಲ್ಯ ( ಮುರಿದು ಬೀಳುವಿಕೆ ) – ಮತ್ತೆ ಮತ್ತೆ ಬೀಳುವ ಒತ್ತಡದಿಂದಾಗಿ ಒಂದು ವಸ್ತುವು ಮುರಿದು ಬಿದ್ದು ತನ್ನ ಕೆಲಸದಲ್ಲಿ ವಿಫಲಗೊಳ್ಳುವುದು.

Fast reactor 

ಫಾಸ್ಟ್ ರಿಯಾಕ್ಟರ್ – ವೇಗದ ಅಣುಸ್ಥಾವರ – ವೇಗ ನಿರೋಧಕವನ್ನು ಬಳಸದಿರುವ ಅಥವಾ ತುಸು ಪ್ರಮಾಣದಲ್ಲಷ್ಟೇ ಬಳಸುವ ಅಣುಸ್ಥಾವರ.

Fast neutron 

ಫಾಸ್ಟ್ ನ್ಯೂಟ್ರಾನ್ – ವೇಗದ ನ್ಯೂಟ್ರಾನು –  ಅಣುಬೀಜಕೇಂದ್ರದ ವಿದಳನದಿಂದ ಉತ್ಪತ್ತಿಯಾದ ಹೆಚ್ಚಿನ ಶಕ್ತಿ ಹೊಂದಿರುವ ನ್ಯೂಟ್ರಾನು.

Page 50 of 112

Kannada Sethu. All rights reserved.