ಯಕ್ಷಗಾನ. ಈ ಪದ ಕೇಳಿದ ತಕ್ಷಣ ಚಂಡೆ ವಾದ್ಯದ ಶ್ರೀಮಂತ ಧ್ವನಿ, ಅರಳಿ ಎಲೆಯಾಕಾರದ ಸುಂದರ ಕಿರೀಟವಿಟ್ಟ ಪಾತ್ರಧಾರಿಗಳು, ಅವರ ಬಣ್ಣಬಣ್ಣದ ಉಡುಪು – ಒಡವೆಗಳು, ಕಣ್ಸೆಳೆವ ಮುಖಬಣ್ಣ…ಜೊತೆಗೆ ಆಕರ್ಷಕ ಕುಣಿತ, ಅಷ್ಟೇ ಅಲ್ಲದೆ ಶೈಲಿಯುತ ಮಾತು….ಇವೆಲ್ಲ ನೆನಪಾಗುತ್ತವೆ ಅಲ್ಲವೇ? ನಮ್ಮ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎರಡೂ ಜಿಲ್ಲೆಗಳಲ್ಲಿ ತುಂಬ ಪ್ರಸಿದ್ಧವಾಗಿರುವ ಪರಂಪರಾನುಗತ ಕಲೆ ಇದು. ’ಕಡಲ ತೀರದ ಭಾರ್ಗವ’ನೆಂದು ಹೆಸರಾದ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ.ಕೆ.ಶಿವರಾಮ ಕಾರಂತರು ತುಂಬ ಇಷ್ಟ ಪಟ್ಟು […]
ಫಿಶನ್ – ವಿದಳನ( ಒಡೆಯುವಿಕೆ) – ಪರಮಾಣು ಬೀಜಕೇಂದ್ರವು ಎರಡು ಅಥವಾ ಅದಕ್ಕಿಂತ ಹೆಚ್ಚು ಚೂರುಗಳಾಗಿ ಒಡೆದುಕೊಳ್ಳುವುದು (ವಿದಳನಗೊಳ್ಳುವುದು).
ಫಿಸ್ಸೈಲ್ ಮೇಟೀರಿಯಲ್ – ವಿದಳನ ವಸ್ತು – ಬೀಜ ಕೇಂದ್ರ ವಿದಳನ ( ಒಡೆಯುವ) ಕ್ರಿಯೆಗೆ ಒಳಗಾಗುವ ವಸ್ತು ಅಥವಾ ಸಾಮಗ್ರಿ. ಕೆಲವು ಸಲ ಈ ಕ್ರಿಯೆಯು ವಿದಳನ ವಸ್ತುವಿನಲ್ಲಿ ತನ್ನಂತಾನೇ ನಡೆಯುತ್ತದೆ. ಆದರೆ ಸಾಮಾನ್ಯವಾಗಿ ನ್ಯೂಟ್ರಾನ್‌ಗಳಿಂದ ವಿಕರಣೀಕರಿಸಿದಾಗ ಈ ವಿದಳನ ನಡೆಯುತ್ತದೆ.
ಫೈನ್ ಸ್ಟ್ರಕ್ಚರ್ – ವರ್ಣಪಟಲವೊಂದರ ಗೆರೆ ಅಥವಾ ಪಟ್ಟಿಯಲ್ಲಿರುವಂತಹ, ಹೆಚ್ಚಿನ ವಿಂಗಡಿಸುವಿಕೆಯಲ್ಲಿ ಗೋಚರವಾಗುವ, ತುಂಬ ಹತ್ತಿರ ಹತ್ತಿರ ಇರುವ ಗೆರೆಗಳು. ಎಲೆಕ್ಟ್ರಾನು ಗಿರಕಿ ಅಥವಾ ಅಣುಗಳ ಕಂಪನಯುತ ಚಲನೆಯಿಂದಾಗಿ ಇಂತಹ ನಾಜೂಕು ರಚನೆಗಳು ಉಂಟಾಗುತ್ತವೆ.
ಫಿಲ್ಟರ್- ಸೋಸುಕ – ಇದು ಒಂದು ಉಪಕರಣ ಅಥವಾ ವಿದ್ಯುನ್ಮಂಡಲ ; ಇದು ಕೆಲವು ನಿರ್ದಿಷ್ಟ ಆವರ್ತನಗಳನ್ನು ಮಾತ್ರ ಒಳಗೆ ಸರಿಯಲು ಬಿಟ್ಟು ಇನ್ನುಳಿದ ಆವರ್ತನಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಫಿಲಮೆಂಟ್ – ತಂತು (ದಾರದಂತಿರುವ ತಂತಿ) – ತುಂಬ ಹೆಚ್ಚಿನ ಕುದಿಬಿಂದು ಹೊಂದಿರುವ ಟಂಗ್ ಸ್ಟನ್ ಅಥವಾ ಬೇರೆ ಲೋಹದ, ದಾರದಷ್ಟು ತೆಳುವಾಗಿರುವ ತಂತಿ. ಇದನ್ನು ಪ್ರಕಾಶ ಬೀರುವಂತಹ ವಿದ್ಯುತ್ ದೀಪಗಳಲ್ಲಿ ಮತ್ತು ಉಷ್ಣಅಯಾನು ಕವಾಟಗಳಲ್ಲಿ ಬಳಸುತ್ತಾರೆ.
ಫೀಲ್ಡ್ ಮ್ಯಾಗ್ನೆಟ್ – ಕ್ಷೇತ್ರ ಅಯಸ್ಕಾಂತ – ಒಂದು ವಿದ್ಯುತ್ ಉಪಕರಣದಲ್ಲಿ ಕಾಂತಕ್ಷೇತ್ರವನ್ನು ನೀಡುವಂತಹ ಅಯಸ್ಕಾಂತ. ಕೆಲವು ಚಿಕ್ಕ ವಿದ್ಯುಜ್ಜನಕ ಅಥವಾ ವಿದ್ಯುದುತ್ಪಾದಕ ಯಂತ್ರಗಳಲ್ಲಿ ಇದು ಶಾಶ್ವತ ಅಯಸ್ಕಾಂತವಾಗಿರುತ್ತದೆ, ಆದರೆ ಬಹುತೇಕ ಯಂತ್ರಗಳಲ್ಲಿ ಇದೊಂದು ವಿದ್ಯುತ್ ಕಾಂತವಾಗಿರುತ್ತದೆ.
ಫೀಲ್ಡ್ ಲೆನ್ಸ್ – ಕ್ಷೇತ್ರ ಮಸೂರ – ಬೆಳಕುವಿಜ್ಞಾನದ ಒಂದು ಉಪಕರಣದಲ್ಲಿನ ಮಸೂರಸಂಯೋಜನೆಗಳಲ್ಲಿ, ಕಣ್ಣಿನಿಂದ ಗರಿಷ್ಠ ದೂರದಲ್ಲಿರುವ ಮಸೂರ.
Like us!
Follow us!