Exchange force 

ಎಕ್ಸ್ ಚೇಂಜ್ ಫೋರ್ಸ್ – ವಿನಿಮಯ ಬಲ – ಎರಡು ಅಣುಗಳ ನಡುವೆ ಕಣಗಳ ವಿನಿಮಯದಿಂದ ಉತ್ಪತ್ತಿಯಾಗುವ ಬಲ.‌ ಈ ಬಲದಿಂದಾಗಿ ಆ ಅಣುಗಳ ನಡುವೆ ಬಂಧವೊಂದು‌ ಸಾಧ್ಯವಾಗುತ್ತದೆ.

ಕನ್ನಡ ಗಾದೆಮಾತು – ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ.

ಕನ್ನಡದ ಹತ್ತು ಅತ್ಯಂತ ಜನಪ್ರಿಯ ಗಾದೆ ಮಾತುಗಳನ್ನು ಪಟ್ಟಿ ಮಾಡುವುದಾದರೆ ಆ ಪಟ್ಟಿಯಲ್ಲಿ  ಈ ಗಾದೆ ಮಾತು ಕೂಡ ಸೇರುತ್ತದೆ ಅನ್ನಿಸುತ್ತೆ; ಏಕೆಂದರೆ ಕನ್ನಡಿಗರು ಮತ್ತೆ ಮತ್ತೆ ಬಹುವಾಗಿ ಬಳಸುವ ಒಂದು ಗಾದೆ ಮಾತಿದು. ಹಿಂಸೆ ಕೊಡುತ್ತಿದ್ದ ಪಿಶಾಚಿಯೊಂದು ಬಾಗಿಲಿಂದ ಹೋಯಿತಪ್ಪ, ಸದ್ಯ! ಅಂದುಕೊಳ್ಳುವಷ್ಟರಲ್ಲಿ ಅದು ಗವಾಕ್ಷಿಯಿಂದ (ವೆಂಟಿಲೇಟರ್) ವಾಪಸ್ಸು ಬಂದರೆ, ಅದರಿಂದ ತೊಂದರೆ ಅನುಭವಿಸುತ್ತಿರುವವರಿಗೆ ಹೇಗಾಗಬೇಡ!  ಇದೇ ರೀತಿಯಲ್ಲಿ,  ನಮಗೆ ಸದಾ ಕಿರಿಕಿರಿ, ತೊಂದರೆ ಮಾಡುತ್ತಿದ್ದ ಸಂಗತಿಯೊಂದು ನಮ್ಮ ಬದುಕಿನಿಂದ ಹೋಯಿತು, ಮರೆಯಾಯಿತು ಅಂದುಕೊಳ್ಳುವಷ್ಟರಲ್ಲಿ, ಅದು […]

Evaporation

ಎವಾಪೊರೇಷನ್ – ಆವಿಯಾಗುವಿಕೆ – ಘನ‌ ಅಥವಾ ದ್ರವ ಸ್ಥಿತಿಯಿಂದ ವಸ್ತುವು ಅನಿಲ ಸ್ಥಿತಿಗೆ ಬದಲಾಗುವ ಪ್ರಕ್ರಿಯೆ.

Euler force

ಯೂಲರ್ ಫೋರ್ಸ್ – ಎರಡೂ ಪಕ್ಕಗಳಲ್ಲೂ ಎರಡು ಕಂಬಗಳ ಆಧಾರದ ಮೇಲೆ ನಿಂತಿರುವಂತಹ ತೊಲೆಯನ್ನು ಬಗ್ಗಿಸಲು ಬೇಕಾದ ನಿರ್ಣಾಯಕ ಬಲ.‌

Ether

ಈಥರ್ – ಒಂದು ಕಾಲ್ಪನಿಕ ದ್ರವ. ಮುಂಚಿನ ಕಾಲದಲ್ಲಿ,  ಇದು ಇಡೀ ಖಗೋಳ ವಿಶ್ವವನ್ನು ವ್ಯಾಪಿಸಿದೆ ಮತ್ತು ವಿದ್ಯುತ್ ಕಾಂತೀಯ ಅಲೆಗಳ ಚಲನೆಗೆ ಮಾಧ್ಯಮವಾಗಿದೆ  ಎಂದು ತಿಳಿಯಲಾಗಿತ್ತು.

Electron spin resonance

ಎಲೆಕ್ಟ್ರಾನ್ ಸ್ಪಿನ್ ರೆಸೋನೆನ್ಸ್ – ಎಲೆಕ್ಟ್ರಾನು ಗಿರಕಿ ಅನುರಣನ‌ – ವರ್ಣಪಟಲ ದರ್ಶಕ ವ್ಯವಸ್ಥೆ ( spectroscopy) ಯಲ್ಲಿ ಬಳಸುವ ಒಂದು ಕಾರ್ಯವಿಧಾನ ಇದು. ಎಲೆಕ್ಟ್ರಾನಿನ ಗಿರಕಿಯನ್ನು ಮತ್ತು ಅದಕ್ಕೆ ಸಂಬಂಧಿಸಿದ ಕಾಂತೀಯ ತಿರುಗುಬಲವನ್ನು ಆಧರಿಸಿ, ಅಣು ವೊಂದರಲ್ಲಿ ಎಲೆಕ್ಟ್ರಾನೊಂದು ಎಲ್ಲಿದೆ ಎಂದು ತಿಳಿಯುವಲ್ಲಿ ಈ ವಿಧಾನವು ಸಹಾಯ ಮಾಡುತ್ತದೆ.

Electrostatic unit

ಎಲೆಕ್ಟ್ರೋಸ್ಟ್ಯಾಟಿಕ್ ಯೂನಿಟ್ – ಸ್ಥಾಯಿ ವಿದ್ಯುತ್ ಮೂಲಮಾನ – ಸಿಜಿಎಸ್( ಸೆಂಟಿಮೀಟರ್, ಗ್ರಾಂ, ಸೆಕೆಂಡ್) ಮೂಲಮಾನ ವ್ಯವಸ್ಥೆಯಲ್ಲಿನ ಸ್ಥಾಯಿವಿದ್ಯುತ್ ಮೂಲಮಾನಗಳು. ಉದಾಹರಣೆಗೆ ಸ್ಟ್ಯಾಟ್ ಕೂಲಂಬ್, ಸ್ಟ್ಯಾಟ್ ವೋಲ್ಟ್.

ಕನ್ನಡ ಗಾದೆಮಾತು – ಆಗಿಷ್ಟು ಉಂಡು ಈಗಿಷ್ಟು ಉಂಡು ರೋಗಿಷ್ಟನಾದ.

ಆರೋಗ್ಯವನ್ನು ಕಾಪಾಡಿಕೊಳ್ಳುವ ಇಚ್ಛೆ ಇರುವವರು ಇಟ್ಟುಕೊಳ್ಳಬಾರದ ಒಂದು ಅಭ್ಯಾಸದ ಬಗ್ಗೆ ಗಮನ ಸೆಳೆಯುವ, ಕನ್ನಡದ ಒಂದು ಗಾದೆಮಾತು ಇದು. ನಾವು  ಸೇವಿಸುವ ಎರಡು ಊಟಗಳ/ತಿಂಡಿಗಳ  ನಡುವೆ ಸುಮಾರು ಐದು ಗಂಟೆಯ ಬಿಡುವು ಇರಬೇಕೆಂದು ಆರೋಗ್ಯತಜ್ಞರು ಹೇಳುತ್ತಾರೆ. ‌ಏಕೆಂದರೆ ತೆಗೆದುಕೊಂಡ ಆಹಾರವನ್ನು ಜೀರ್ಣವಾಗಿಸಿ ಅದರಲ್ಲಿನ ಪೋಷಕಾಂಶಗಳನ್ನು ರಕ್ತಗತವಾಗಿಸಲು ನಮ್ಮ‌ ಜೀರ್ಣಾಂಗಗಳಿಗೆ ಅಷ್ಟು ಸಮಯಾವಕಾಶ ಬೇಕಾಗುತ್ತದೆ. ಆದರೆ ನಾವು ಗಂಟೆಗೊಮ್ಮೆ, ಅರ್ಧಗಂಟೆಗೊಮ್ಮೆ ಏನನ್ನಾದರೂ ತಿನ್ನುತ್ತಲೇ ಇದ್ದರೆ ನಮ್ಮ ಜೀರ್ಣಾಂಗಗಳ ಮೇಲೆ  ನಿರಂತರ ಒತ್ತಡ ಬಿದ್ದು ಜೀರ್ಣಕ್ರಿಯೆಗೆ ತೊಂದರೆಯಾಗಿ ಆರೋಗ್ಯ ಕೆಡುತ್ತದೆ. ಅದಕ್ಕಾಗಿಯೇ […]

ಪದವಿ ಹಂತದಲ್ಲಿನ ಕನ್ನಡ ಬರವಣಿಗೆಯ ತಪ್ಪುಗಳು – ಅಧ್ಯಾಪಕರ ಮಟ್ಟಿಗೆ ನುಂಗಲಾರದ ತುತ್ತುಗಳು 

ಹದಿನೇಳರಿಂದ ಇಪ್ಪತ್ತು ವಯಸ್ಸಿನ ವಿದ್ಯಾರ್ಥಿಗಳಿಗೆ ಅಂದರೆ ಪದವಿ ಹಂತದಲ್ಲಿರುವ  ಕಿಶೋರ ಕಿಶೋರಿಯರಿಗೆ  ಕನ್ನಡ ಪಾಠ ಮಾಡುವ ಅಧ್ಯಾಪಕರ ಒಂದು ದೊಡ್ಡ ತಲೆನೋವೆಂದರೆ, ಆ ವಿದ್ಯಾರ್ಥಿಗಳು ಮಾಡುವ  ಅಕ್ಷರ ತಪ್ಪುಗಳು. ಅಲ್ಪಪ್ರಾಣ – ಮಹಾಪ್ರಾಣ, ಹೃಸ್ವಾಕ್ಷರ – ದೀರ್ಘಾಕ್ಷರ, ಅಕಾರ-ಹಕಾರ, ವಿಭಕ್ತಿ ಪ್ರತ್ಯಯಗಳಲ್ಲಿನ ಅನೇಕ  ದೋಷಗಳು, ಲೇಖನ ಚಿಹ್ನೆಗಳಿಲ್ಲದೆ ಬರೆಯುವುದು, ಹೇಳಿ ಬರೆಸುತ್ತಿರುವಾಗ ಪದಗಳನ್ನೇ ಬಿಟ್ಟುಬಿಡುವುದು… ರಾಮಾ ರಾಮಾ….ಈ ಪಟ್ಟಿ ಬಹು ಉದ್ದವಾದುದು.‌ ತರಗತಿಯಲ್ಲಿ ಪಾಠವಿಷಯಗಳನ್ನು ಬರೆಸುವಾಗ ಅಥವಾ ಪರೀಕ್ಷೆಯ ಅವರ ಉತ್ತರ ಪತ್ರಿಕೆಗಳನ್ನು ತಿದ್ದುವಾಗ ಈ ದೋಷಗಳು […]

Escape velocity

ಎಸ್ಕೇಪ್ ವೆಲಾಸಿಟಿ – ಒಂದು ಉಪಗ್ರಹ ಅಥವಾ ಚಂದ್ರದ ಮೇಲ್ಮೈ ಯ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡು ಹೋಗಲು‌ ಒಂದು ವಸ್ತುವು ಹೊಂದಿರಬೇಕಾದ ಕನಿಷ್ಠ ವೇಗ.

Page 54 of 112

Kannada Sethu. All rights reserved.