ಈಕ್ವಿಲಿಬ್ರೆಂಟ್ – ಸಮತೋಲಕ – ಒಂದು ವಸ್ತುವಿನ ಮೇಲೆ ವರ್ತಿಸುತ್ತಿರುವ ವಿವಿಧ ಬಲಗಳ ಫಲಿತಾಂಶಬಲಕ್ಕೆ ಸಮವಾದ ಮತ್ತು ವಿರುದ್ದವಾದ ಬಲ.
ಈಕ್ವೇಟರ್ – ಭೂಮಧ್ಯರೇಖೆ – ಭೂಮಿಯ ಸುತ್ತಲೂ ಇರುವ ಮಹಾರೇಖೆ ಇದು, ಭೂಮಿಯ ಮಹಾವರ್ತುಲ. ಇದು ಭೂಮಿಯ ಅಕ್ಷಕ್ಕೆ ಲಂಬವಾಗಿರುವ ಮೇಲ್ಮೈಯಲ್ಲಿರುತ್ತದೆ ಮತ್ತು ಎರಡೂ ಧ್ರುವಗಳಿಂದ ಸಮಾನ ದೂರದಲ್ಲಿರುತ್ತದೆ.
ಎಲೆಕ್ಟ್ರಾನ್ ಪ್ರೋಬ್ ಮೈಕ್ರೋಅನಾಲಿಸಿಸ್ -ಎಲೆಕ್ಟ್ರಾನು ಬಿಂಬಾಧಾರಿತ ವಸ್ತು ವಿಶ್ಲೇಷಣೆ – ಒಂದು ವಸ್ತುವಿನಲ್ಲಿ ಯಾವ ಯಾವ ಮೂಲವಸ್ತುಗಳಿವೆ ಎಂದು ಪತ್ತೆ ಹಚ್ಚಲು, ಆ ವಸ್ತುವಿನೊಳಗೆ ಎಲೆಕ್ಟ್ರಾನು ಕಿರಣಪುಂಜವನ್ನು ಹರಿಸಿ, ಹೊರಬರುವಂತಹ ವಸ್ತುವಿಶಿಷ್ಟ ಕ್ಷಕಿರಣವನ್ನು ಅಳೆಯುವುದು.
ಎಪಿಥರ್ಮಲ್ ನ್ಯೂಟ್ರಾನ್ – ಹೆಚ್ಚು ತಾಪದ ನ್ಯೂಟ್ರಾನು - ತಾಪ ನ್ಯೂಟ್ರಾನಿನ ಶಕ್ತಿಗಿಂತ ಹೆಚ್ಚಾದ ಮತ್ತು ವೇಗದ ನ್ಯೂಟ್ರಾನಿಗಿಂತ ಕಡಿಮೆ ಶಕ್ತಿಯುಳ್ಳ ನ್ಯೂಟ್ರಾನು.
ಎಪಿಟ್ಯಾಕ್ಸಿ – ಪದರ ಬೆಳೆಸುವಿಕೆ – ಒಂದು ವಸ್ತುವಿನ ಏಕ ಹರಳಿನ ಮೇಲೆ ಇನ್ನೊಂದು ವಸ್ತುವಿನ ಪದರವೊಂದನ್ನು ಬೆಳೆಸುವುದು.
ಎಪಿಡಿಯಾಸ್ಕೋಪ್ – ಬಿಂಬ ದರ್ಶಕ – ಬೋಧನಾ ವೃತ್ತಿಯಲ್ಲಿರುವವರು ಬಳಸುವ ಒಂದು ದೃಶ್ಯೋಪಕರಣ ಇದು. ಒಂದು ಪಾರದರ್ಶಕ ಅಥವಾ ಅಪಾರದರ್ಶಕ ವಸ್ತುವೊಂದರ ಹಿಗ್ಗಲಿಸಿದ ಬಿಂಬವನ್ನು ಪರದೆಯ ಮೇಲೆ ಬೀರಲು ಈ ಉಪಕರಣವನ್ನು ಬಳಸುತ್ತಾರೆ.
Like us!
Follow us!