ಐ – ಕಣ್ಣು ( ನೇತ್ರ) – ಒಂದು ಪ್ರಜ್ಞೇಂದ್ರಿಯ – ದೃಶ್ಯಬಿಂಬಗಳನ್ನು ಉತ್ಪತ್ತಿ ಮಾಡಿ ತತ್ಸಂಬಂಧೀ ನರಸಂಕೇತಗಳನ್ನು ಮೆದುಳಿಗೆ ಕಳಿಸುವ ಸಾಮರ್ಥ್ಯವು ಈ ಇಂದ್ರಿಯಕ್ಕೆ ಇರುತ್ತದೆ.
ಐ ಲೆನ್ಸ್ – ನೇತ್ರ ಮಸೂರ – ಮಸೂರಗಳ ಸಂಯೋಜನೆಯಲ್ಲಿ ಕಣ್ಣಿಗೆ ಅತ್ಯಂತ ಹತ್ತಿರ ಇರುವ ಮಸೂರ.
ಎಕ್ಸ್ಟೆನ್ಸೋಮೀಟರ್ – ವಿಸ್ತರಣಾ ಮಾಪಕ – ವಿಸ್ತರಣಾ ಮಾಪಕ – ರೇಖಾತ್ಮಕ ಬಲಪ್ರಯೋಗದಿಂದ ಉಂಟಾಗುವ ವಿಸ್ತರಣೆಯನ್ನು ( ಎಳೆತವನ್ನು) ಅಳೆಯುವ ಉಪಕರಣ.
ಎಕ್ಸ್ಪಾನ್ಸಿವಿಟಿ – ವಿಸ್ತರಣಾ ಸಾಮರ್ಥ್ಯ – ಒಂದು ವಸ್ತುವಿನ ತಾಪಮಾನವನ್ನು ಹೆಚ್ಚಿಸಿದಾಗ ಅದು ಎಷ್ಟು ಹಿಗ್ಗುತ್ತದೆ ಎಂಬುದರ ಅಳತೆ.
ಎಕ್ಸೋಥರ್ಮಿಕ್ – ಬಹಿರುಷ್ಣಕ ಕ್ರಿಯೆ – ಉಷ್ಣತೆಯು ಉತ್ಪತ್ತಿಯಾಗುವಂತಹ ರಾಸಾಯನಿಕ ಕ್ರಿಯೆ. ಉದಾಹರಣೆಗೆ ದಹನ.
ಎಕ್ಸ್ಪಾನ್ಶನ್, ಥರ್ಮಲ್ – ತಾಪಮಾನೀಯ ವಿಸ್ತರಣೆ ಅಥವಾ ಉಷ್ಣತಾ ವಿಸ್ತರಣೆ – ಉಷ್ಣತೆಯು ಹೆಚ್ಚಾದಾಗ ಘನ, ದ್ರವ ಅಥವಾ ಅನಿಲರೂಪದ ವಸ್ತು, ಗಾತ್ರಗಳು ಹೆಚ್ಚುವ ಪ್ರಕ್ರಿಯೆ.
ಎಕ್ಸ್ ಪಾನ್ಶನ್ ಕ್ಲೌಡ್ ಛೇಂಬರ್ – ವಿಸ್ತರಣಾ ಮೋಡ ಕೋಣೆ ಅಥವಾ ವಿಸ್ತರಣಾ ಆವಿ ಪಂಜರ – ವಿಕಿರಣಕಾರೀ ಕಣಗಳ ಪಥವು ಕಾಣುವಂತೆ ಮಾಡಲು ಬಳಸುವ ಒಂದು ಉಪಕರಣ.
ಎಕ್ಸೋಸ್ಫಿಯರ್ – ಹೊರಗೋಳ – 400 ಕಿಲೋಮೀಟರುಗಳ ದೂರದಲ್ಲಿ ಇರುವಂತಹ, ಭೂಮಿಯ ಅತ್ಯಂತ ಹೊರಗಿರುವ ವಾತಾವರಣ ಪದರ.
Like us!
Follow us!