ಈಚೆಗೆ ನಮ್ಮ ಹಂಪಿನಗರದ ಏಳನೇ ಮುಖ್ಯರಸ್ತೆಯ ಬಳಿ ಹೂವು ಕೊಂಡುಕೊಳ್ಳುತ್ತಿದ್ದಾಗ ಒಂದು ಕುತೂಹಲಕರ ವಿಷಯವನ್ನು ಗಮನಿಸಿದೆ. ಹೂಮಾರುವವರು ತಮ್ಮ ಬುಟ್ಟಿ ಇತ್ಯಾದಿಗಳನ್ನು ಇಟ್ಟುಕೊಂಡ ಜಾಗದ ಪಕ್ಕದಲ್ಲಿ ಇದ್ದ ಕಂಬವೊಂದಕ್ಕೆ ಕೆಲವು ಪುಟ್ಟ ಪುಟ್ಟ ದೇವರ ವಿಗ್ರಹಗಳನ್ನು ಕಟ್ಟಿಟ್ಟದ್ದು ಕಂಡುಬಂತು. ಬಹುಶಃ ಆ ಹೂ ಮಾರುವವರು ಮತ್ತು ಸುತ್ತಮುತ್ತ ಇದ್ದ ಹಣ್ಣಿನ ವ್ಯಾಪಾರಿಗಳು ಆ ವಿಗ್ರಹಗಳಿಗೆ ನಮಿಸಿ ತಮ್ಮ ದಿನದ ವ್ಯಾಪಾರವನ್ನು ಶುರು ಮಾಡುತ್ತಾರೆಂದು ತೋರುತ್ತದೆ. ಕಲ್ಲಿಗೆ ಭಕ್ತಿಯಿಂದ ಕುಂಕುಮ ಹಚ್ಚಿ ಹೂ ಇಟ್ಟು ಅದನ್ನೇ ಭಗವಂತನೆಂದು ತಿಳಿಯುವ […]
ಎಲೆಕ್ಟ್ರೋಸ್ಟ್ಯಾಟಿಕ್ ಜೆನರೇಟರ್ – ಸ್ಥಾಯೀವಿದ್ಯುತ್ತಿನ ಮೂಲಕ ನಿರಂತರ ವಿದ್ಯುತ್ ಸರಬರಾಜು ಆಗುವಂತೆ ವಿನ್ಯಾಸಗೊಳಿಸಿದ ಒಂದು ಉಪಕರಣ.
ಎಲೆಕ್ಟ್ರೋಸ್ಟ್ಯಾಟಿಕ್ ಫೀಲ್ಡ್ – ಸ್ಥಾಯಿ (ಚಲಿಸದಿರುವ)ವಿದ್ಯುದಂಶದಿಂದ ಉತ್ಪತ್ತಿಯಾದ ವಿದ್ಯುತ್ ಕ್ಷೇತ್ರ.
ಎಲೆಕ್ಟ್ರೋಸ್ಕೋಪ್ – ವಿದ್ಯುತ್ ಸಾಮರ್ಥ್ಯ ಶೋಧಕ – ವಿದ್ಯುತ್ ಅಂತಃ ಸಾಮರ್ಥ್ಯವ್ಯತ್ಯಾಸವನ್ನು ಪತ್ತೆ ಮಾಡುವ ಉಪಕರಣ.
ಎಲೆಕ್ಟ್ರೋಪ್ಲೇಟಿಂಗ್ – ವಿದ್ಯುಲ್ಲೇಪನ – ಒಂದು ಘನವಸ್ತುವಿನ ಮೇಲ್ಮೈಗೆ ವಿದ್ಯುದ್ವಿಭಜನೆಯ ಮೂಲಕ ಒಂದು ಲೋಹವನ್ನು ಲೇಪಿಸುವುದು.
ಎಲೆಕ್ಟ್ರೋಆಪ್ಟಿಕಲ್ ಎಫೆಕ್ಟ್ – ವಿದ್ಯುತ್ ದೃಶ್ಯ ಬೆಳಕು ಪರಿಣಾಮ – ಯಾವುದಾದರೊಂದು ಪಾರದರ್ಶಕ ವಿದ್ಯುತ್ ನಿರೋಧಕ ವಸ್ತುವೊಂದನ್ನು ತುಂಬ ಬಲವತ್ತರವಾದ ವಿದ್ಯುತ್ ಕ್ಷೇತ್ರದಲ್ಲಿರಿಸಿದಾಗ ಆ ಕ್ಷೇತ್ರದ ಹಾಗೂ ಆ ವಸ್ತುವಿನ ವಕ್ರೀಭವನದ ಗುಣಲಕ್ಷಣಗಳ ನಡುವೆ ಉಂಟಾಗುವ ಅಂತರ್ ಕ್ರಿಯೆ.
ಎಲೆಕ್ಟ್ರಾನು ಕೊಳವೆ – ಎರಡು ವಿದ್ಯುದ್ವಾರಗಳ ನಡುವಿನ ಎಲೆಕ್ಟ್ರಾನುಗಳ ಚಲನೆಯು ಒಂದು ಮುಚ್ಚಿರುವ ಅಥವಾ ನಿರಂತರವಾಗಿ ಬರಿದಾಗುತ್ತಿರುವ ಆವರಣದೊಳಗಡೆ ನಡೆಯುತ್ತಿರುವಂತಹ ಒಂದು ಉಪಕರಣ.
ಎಲೆಕ್ಟ್ರಾನು ಉಷ್ಣತೆ – ಪ್ಲಾಸ್ಮಾದೊಳಗಿನ ಎಲೆಕ್ಟ್ರಾನುಗಳ ಸರಾಸರಿ ಚಲನಶಕ್ತಿಯನ್ನೇ ಅನಿಲದ ಅಣುಗಳು ಕೂಡ ಹೊಂದಿರುವ ಉಷ್ಣತೆ.
Like us!
Follow us!