ಕನ್ನಡ ವಿವೇಕದ ಒಂದು ನೆಲೆಯನ್ನು ಬಹು ಅರ್ಥವತ್ತಾಗಿ ಹೇಳುವ ಗಾದೆ ಮಾತು ಇದು. ಮೊದಲು ಮನುಷ್ಯನು ತನ್ನ ಮನೆಯನ್ನು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು, ನಂತರವಷ್ಟೇ ಅವನು ಮಾರಿನ ಬಗ್ಗೆ ಅಂದರೆ ಮನೆಯಾಚೆಗಿನ ವಿಸ್ತಾರ ಪ್ರದೇಶದ ಹಿತ, ನೆಮ್ಮದಿಗಳ ಬಗ್ಗೆ ಆಲೋಚಿಸಬೇಕು. ತನ್ನ ಮನೆಯನ್ನು ನಿರ್ಲಕ್ಷಿಸಿ, ನೋಯಿಸಿದವನು ಎಷ್ಟು ಲೋಕೋಪಕಾರ ಮಾಡಿದರೆ ಏನು ಪ್ರಯೋಜನ? ಯೋಚಿಸಿ ನೋಡಬೇಕಾದ ವಿಷಯ ಇದು. Kannada proverb – Mane geddu maaru gellu – ( First win the hearts […]
ಎಲೆಕ್ಟ್ರಾನನಿಲ – ಒಂದು ಘನವಸ್ತು ಅಥವಾ ದ್ರವವಸ್ತುವಿನೊಳಗೆ ಮುಕ್ತ ಎಲೆಕ್ಟ್ರಾನುಗಳು ಅನಿಲದಂತೆ ಓಡಾಡಿಕೊಂಡಿರುವುದು.
ಎಲೆಕ್ಟ್ರಾನಲೆಯ ಹಬ್ಬುವಿಕೆ – ಅಣುಗಳು ಅಥವಾ ಪರಮಾಣುಗಳು ಎಲೆಕ್ಟ್ರಾನುಗಳ ಕಿರಣಪುಂಜವೊಂದು ಹಬ್ಬುವಂತೆ ಮಾಡುವುದು.
ಎಲೆಕ್ಟ್ರಾನು ವಶ – ಒಂದು ಪರಮಾಣು ಅಥವಾ ಅಣುವು ಹೆಚ್ಚಿನ ಮುಕ್ತ ಎಲೆಕ್ಟ್ರಾನೊಂದನ್ನು ಪಡೆದುಕೊಳ್ಳುವುದರಿಂದ ಋಣ ವಿದ್ಯುದಣುವು ರೂಪುಗೊಳ್ಳುವ ಪ್ರಕ್ರಿಯೆ.
ಎಲೆಕ್ಟ್ರಾನಾಕರ್ಷಣೆ – ಒಂದು ಋಣವಿದ್ಯುದಣುವಿನಿಂದ ಒಂದು ಎಲೆಕ್ಟ್ರಾನನ್ನು ಅಣುವೊಂದು ಅಥವಾ ಪರಮಾಣುವೊಂದು ಗಳಿಸಿದಾಗ ಉಂಟಾಗುವ ಶಕ್ತಿ ವ್ಯತ್ಯಾಸ.
ಎಲೆಕ್ಟ್ರಾನು – ಒಂದು ಮೂಲಭೂತ ಕಣ. ಪರಮಾಣು ಬೀಜಕೇಂದ್ರದ ಸುತ್ತ ಇರುವ ಕವಚಗಳಲ್ಲಿ ಇರುತ್ತದೆ ಹಾಗೂ ಋಣ ವಿದ್ಯುದಂಶವನ್ನು ಹೊಂದಿರುತ್ತದೆ.
ವಿದ್ಯುತ್ಕಾಂತೀಯ ವರ್ಣಪಟಲ – ಒಂದು ವಿಸ್ತಾರವಾದ ಹರಹಿನಲ್ಲಿ ಕ್ರಮವಾಗಿ ಇರಿಸಿದ ವಿದ್ಯುತ್ಕಾಂತೀಯ ವಿಕಿರಣಗಳು. ಇದರಲ್ಲಿ ಅತಿನೇರಳೆ, ಅಧೋಕೆಂಪು, ಕಣ್ಣಿಗೆ ಕಾಣುವ ಅಲೆಗಳೇ ಮುಂತಾದ ವಿವಿಧ ರೀತಿಯ ಅಲೆಗಳು ಇರುತ್ತವೆ.
Like us!
Follow us!