ವಿದ್ಯುತ್ ರಸಾಯನಿಕ ಶಾಸ್ತ್ರ- ದ್ರಾವಕಗಳಲ್ಲಿ ವಿದ್ಯುದಣುಗಳ ರೂಪಣೆ ಮತ್ತು ವರ್ತನೆಗಳನ್ನು ಅಧ್ಯಯನ ಮಾಡುವ ಜ್ಞಾನಶಾಖೆ.
ವಿದ್ಯುತ್ ರಾಸಾಯನಿಕ ಸರಣಿ – ರಾಸಾಯನಿಕ ಮೂಲವಸ್ತುಗಳನ್ನು ಅವುಗಳ ನಿಯತ ವಿದ್ಯುದ್ವಾರ ಅಂತಃ ಸಾಮರ್ಥ್ಯಕ್ಕೆ ಅನುಗುಣವಾಗಿ ಜೋಡಿಸುವುದು.
ವಿದ್ಯುತ್ ಕಿಡಿ – ಒಂದು ಅನಿಲದಲ್ಲಿ ಬೆಳಕು ಮತ್ತು ಶಬ್ಧಸಹಿತವಾಗಿ ವಿದ್ಯುತ್ ಶಕ್ತಿಯ ಹೊರಚೆಲ್ಲುವಿಕೆ.
ವಿದ್ಯುತ್ ಅಂತಃ ಸಾಮರ್ಥ್ಯ – ಅನಂತದಿಂದ ಒಂದು ಘಟಕ ಅಳತೆಯ ವಿದ್ಯುದಂಶವನ್ನು ಒಂದು ಬಿಂದುವಿಗೆ ತರಲಿಕ್ಕಾಗಿ ಬೇಕಾದ ಶಕ್ತಿ. ಇದರ ಮೂಲಮಾನ ವೋಲ್ಟ್ (V).
ವಿದ್ಯುತ್ ಧ್ರುವೀಕರಣ – ಒಂದು ಪರಮಾಣುವನ್ಬು ಅಥವಾ ವಿದ್ಯುತ್ ನಿರೋಧಕ ಕ್ಷೇತ್ರವೊಂದರಲ್ಲಿಟ್ಟಾಗ ಅದರಲ್ಲಿನ ಧನ ಹಾಗೂ ವಿದ್ಯುದಂಶಗಳು ಸ್ಥಾನಪಲ್ಲಟಗೊಳ್ಳುವುದು.
ವಿದ್ಯುತ್ ಬಲ ರೇಖೆಗಳು – ತನಗೆ ಲಂಬವಾಗಿರುವ ಪ್ರದೇಶ ಅಥವಾ ಮೇಲ್ಮೈಗೆ ಹರಿಯುವ ವಿದ್ಯುತ್ ಕ್ಷೇತ್ರವೊಂದರ ಬಲದ ರೇಖೆಗಳ ಸಂಖ್ಯೆ.
ವಿದ್ಯುತ್ ಬಿಂಬ – ಒಂದು ವಾಹಕ ಮೇಲ್ಮೈಯಿಂದ ಒಂದಷ್ಟು ದೂರದಲ್ಲಿ ಒಂದು ವಿದ್ಯುದಂಶವನ್ನು ಇಟ್ಟಿದ್ದೇವೆ ಅಂದುಕೊಳ್ಳೋಣ. ಈ ವಿದ್ಯುದಂಶದ ಪರಿಣಾಮವು, ಅದನ್ನು ಆ ವಾಹಕದ ಹಿಂದೆ ಇಟ್ಟರೂ ಮುಂದೆ ಇಟ್ಟರೂ, ದೂರವು ಸಮನಾಗಿದ್ದಾಗ ಒಂದೇ ಆಗಿರುತ್ತದೆ, ಕನ್ನಡಿಯಲ್ಲಿನ ಬಿಂಬವೋ ಎಂಬಂತೆ. ಇದೇ ‘ವಿದ್ಯುತ್ ಬಿಂಬ’.
ವಿದ್ಯುಚ್ಛಕ್ತಿ -ಒಂದು ವಿದ್ಯುತ್ ಕ್ಷೇತ್ರದಲ್ಲಿ ವಿದ್ಯುದಂಶವುಳ್ಳ ಕಣಗಳಿಗೆ ಸಂಬಂಧಿಸಿದ ಶಕ್ತಿ.
Like us!
Follow us!