Electric field

ವಿದ್ಯುತ್ ಕ್ಷೇತ್ರ‌- ವಿದ್ಯುದಂಶ ಹೊಂದಿದ ಕಣವೊಂದು ಒಂದು ಬಲವನ್ನು ಅನುಭವಿಸುವಂತಹ ಒಂದು‌ ಕ್ಷೇತ್ರ‌.

 ‘ಬೆಳಗಿನ ಶುಭೋದಯ’ ಏಕೆ, ಶುಭೋದಯ ಸಾಕಲ್ಲವೇ?

ಗುಡ್ ಮಾರ್ನಿಂಗ್ ಎಂದು ಇಂಗ್ಲಿಷ್ ಭಾಷೆಯಲ್ಲಿ ಹೇಳುವ ಬದಲು  ಕನ್ನಡದಲ್ಲಿ ಅದನ್ನು ಹೇಳಬಯಸುವವರು ‘ಬೆಳಗಿನ ಶುಭೋದಯ’ ಎಂದು ಹೇಳುವುದನ್ನು ನಾವು ಅನೇಕ ಸಾರಿ ಗಮನಿಸುತ್ತೇವೆ. ಶುಭೋದಯ ಎಂಬ ಒಂದು ಪದದಲ್ಲಿ ಗುಡ್( ಶುಭ) ಮತ್ತು ಉದಯ( ಮಾರ್ನಿಂಗ್) ಎಂಬ ಎರಡೂ ಪದಗಳಿವೆ! ಹೀಗಾಗಿ ಬೆಳಗಿನ ಶುಭೋದಯ ಎಂದು ಹೇಳಿದಾಗ ಗುಡ್ ಮಾರ್ನಿಂಗ್ ಆಫ್ ಮಾರ್ನಿಂಗ್ ಎಂಬ ಅರ್ಥ ಬರುತ್ತದೆ! ಹೀಗಾಗಿ‌ ಶುಭೋದಯ ಸಾಕು. ‘ಬೆಳಗಿನ ಶುಭೋದಯ’ ಬೇಡ. ಇನ್ನು ಕೆಲವರು ಗುಡ್ ಆಫ್ಟರ್ ನೂನ್ ಗೆ ಕನ್ನಡದಲ್ಲಿ […]

ಕನ್ನಡ ಗಾದೆಮಾತು – ಉಪವಾಸ ಇರಬಹುದು, ಉಪದ್ರವ ತಾಳಲಾಗದು.

ನಮ್ಮ ಜೀವನಾನುಭವದಲ್ಲಿ ನಾವು ಗಮನಿಸಿಯೇ ಇರುವಂತೆ, ಒಂದು ಹೊತ್ತು ಊಟ ಇಲ್ಲದದ್ದರೆ  ಹೇಗೋ ತಾಳಿಕೊಂಡುಬಿಡುತ್ತೇವೆ, ಆದರೆ ಯಾರಾದರೂ ನಮಗೆ ಒಂದೇ ಸಮ, ಕಿರಿಕಿರಿ ಅನ್ನಿಸುವಂತೆ ಉಪದ್ರವ ಕೊಡುತ್ತಿದ್ದರೆ ತಾಳಿಕೊಳ್ಳುವುದು ತುಂಬ ಕಷ್ಟ. ‌ಸದಾ ಮಾತಾಡುವ  ವಾಚಾಳಿಗಳು, ತಾನು ಮಾರುವ ವಸ್ತುವನ್ನು ಕೊಂಡುಕೋ, ಕೊಂಡುಕೋ ಎಂದು ಮೂರು ಹೊತ್ತೂ ದುಂಬಾಲು ಬೀಳುವ ಮಾರಾಟಗಾರರು, ಸದಾ ಗೋಳು ಹೇಳುತ್ತಾ ಸಾಲ ಕೇಳುತ್ತಲೇ ಇರುವವರು….ಇಂತಹವರ ಉಪದ್ರವವನ್ನು ತಡೆದುಕೊಳ್ಳುವುದು ಕಷ್ಟ. ಯಾವಾಗಲೂ ಗುಂಯ್ಗುಡುತ್ತಾ ಕಿರಿಕಿರಿ ಮಾಡುವ ಸೊಳ್ಳೆಗಳದ್ದೂ ಉಪದ್ರವವೇ. ಇಂತಹದ್ದನ್ನು ಸಹಿಸುವುದು ಒಂದು ಹೊತ್ತು […]

Electric lighting

ವಿದ್ಯುತ್ತೀಯ ಬೆಳಕು ವ್ಯವಸ್ಥೆ- ವಿದ್ಯುತ್ತಿನಿಂದ ನೀಡಲಾದಂತಹ ಬೆಳಕಿನ ವ್ಯವಸ್ಥೆ. ಇದಕ್ಕಾಗಿ ಬಳಸುವ ಉಪಕರಣಗಳೆಂದರೆ ವಿದ್ಯುತ್ ‌ಪ್ರಕಾಶ ದೀಪ( ಎಲೆಕ್ಟ್ರಿಕ್ ಆರ್ಕ್ ಲ್ಯಾಂಪ್), ವಿದ್ಯುತ್ ಬುರುಡೆ ದೀಪ( ಬಲ್ಬು) ಹಾಗೂ ಬೆಳಕು ಹೊರಹೊಮ್ಮಿಸುವ ( ಪ್ಲೋರೋಸೆಂಟ್ ಕೊಳವೆಗಳು). 

Electric displacement

ವಿದ್ಯುತ್ ಸ್ಥಾನಪಲ್ಲಟ – ವಿದ್ಯುತ್ ನಿರೋಧಕವಾದ ಒಂದು ಮಾಧ್ಯಮದಲ್ಲಿನ ವಿದ್ಯುತ್ ಪ್ರವಾಹದ ( ಹರಿವಿನ) ಸಾಂದ್ರತೆ.

Electric dipole

ವಿದ್ಯುತ್ ದ್ವಿಧ್ರುವ – ಪರಸ್ಪರ ಹತ್ತಿರ ಇರುವ ಎರಡು ಸಮಸಮ ಮತ್ತು ವಿರುದ್ಧ ವಿದ್ಯುದಂಶಗಳು.

Electric degree

ವಿದ್ಯುತ್ ಕೋನ – ಪರ್ಯಾಯ ಹರಿವಿನ  ವಿದ್ಯುತ್ತಿನ  ಆವರ್ತನದ ‘ಮುನ್ನೂರ ಅರವತ್ತರಲ್ಲೊಂದು’ ಭಾಗವನ್ನು ಸೂಚಿಸುತ್ತದೆ.

Electric current 

ವಿದ್ಯುತ್ ಪ್ರವಾಹ – ವಿದ್ಯುದಂಶಗಳ ಒಂದು ಪ್ರವಾಹ ಇದು.

Electric charge

ವಿದ್ಯುದಂಶ – ವಸ್ತುವಿನ ಮೂಲಕಣಗಳ ಒಂದು ಮೂಲಭೂತ ಗುಣಲಕ್ಷಣ.

ಚಿಂತೆ ಮಾಡಿದರೆ ಸಂತೆ ಸಾಗೀತೇ?

ಮನುಷ್ಯನ ಮನಸ್ಸು ಯಾವುದಾದರೂ ಚಿಂತೆಗೆ ಬಿತ್ತೆಂದರೆ ಅವನ ಕೈಯಲ್ಲಿ ಯಾವ ಕೆಲಸವೂ ಸಾಗುವುದಿಲ್ಲ. ಸಂತೆಯಲ್ಲಾದರೂ ಅಷ್ಟೇ, ಮನೆಯಲ್ಲಾದರೂ ಅಷ್ಟೇ.  ಈ ಬದುಕು  ಸಹ ಒಂದು ರೀತಿಯಲ್ಲಿ ಸಂತೆ ಇದ್ದಂತೆ. ಜನ ಬರುತ್ತಾರೆ, ಹೋಗುತ್ತಾರೆ, ತಮ್ಮಲ್ಲಿರುವುದನ್ನು ಮಾರುತ್ತಾರೆ, ತಮಗೆ ಬೇಕಾದ್ದನ್ನು ಕೊಳ್ಳುತ್ತಾರೆ. ‌ಇಂತಹ ಗಡಿಬಿಡಿ ಗೌಜಿಯ ವಾತಾವರಣದಲ್ಲಿ ಮನುಷ್ಯನು‌ ಯಾವುದೋ ವಿಷಯದ ಬಗ್ಗೆ ಚಿಂತೆ ಮಾಡುತ್ತಾ ಕುಳಿತರೆ ವ್ಯಾಪಾರ ಸಾಗುವುದಿಲ್ಲ. ಹಾಗೆಯೇ ಯಾವ್ಯಾವುದಕ್ಕೋ ಚಿಂತೆ ಮಾಡುತ್ತಾ ಕುಳಿತಿದ್ದರೆ ನಮ್ಮ ಬದುಕಿನ ಬಂಡಿ ಮುಂದೆ ಹೋಗದು. ಹೀಗಾಗಿ ನಾವು ಚಿಂತೆ ಮಾಡುವ […]

Page 65 of 112

Kannada Sethu. All rights reserved.