“ಸೂಳ್ ಬಪ್ಪುದು ಕಾಣಾ ಮಹಾಜಿರಂಗದೊಳ್”

ಸುಮಾರು 34-35 ವರ್ಷಗಳ ಹಿಂದೆ,  ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ವಿದ್ಯಾವರ್ಧಕ ಸಂಘ – ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಿ.ಎಸ್ಸಿ. ಪದವಿಯ ಕನ್ನಡ ತರಗತಿಯೊಂದರಲ್ಲಿ, ಶ್ರೀಮತಿ ಶಾಂತಾ ನಾಗರಾಜ್ ಎಂಬ ಕನ್ನಡ ಅಧ್ಯಾಪಕಿಯು ಉಲ್ಲೇಖಿಸಿದ ವಾಕ್ಯ ಇದು‌. ಈ ಲೇಖಕಿ‌ ಕೂಡಾ ಆ ತರಗತಿಯ ವಿದ್ಯಾರ್ಥಿನಿಯರ ಗುಂಪಿನಲ್ಲಿ ಒಬ್ಬಳಾಗಿದ್ದಳು. 25-30 ಜನ ಅರಳುಗಣ್ಣಿನ ಮತ್ತು ಅಷ್ಟೇ ತುಂಟ ಸ್ವಭಾವದ ವಿಜ್ಞಾನದ ವಿದ್ಯಾರ್ಥಿನಿಯರಿಗೆ ಕನ್ನಡದ ಆದಿಕವಿಯ ಈ  ಅವಿಸ್ಮರಣೀಯ ಉದ್ಗಾರದ ಮಹತ್ವ ಎಷ್ಟು ಅರ್ಥವಾಯಿತೋ ಬಿಟ್ಟಿತೋ! ಆದರೆ ಮೇಡಂ […]

Electron gas

ಎಲೆಕ್ಟ್ರಾನನಿಲ‌ – ಒಂದು ಘನವಸ್ತು ಅಥವಾ ದ್ರವವಸ್ತುವಿನೊಳಗೆ ಮುಕ್ತ ಎಲೆಕ್ಟ್ರಾನುಗಳು‌ ಅನಿಲದಂತೆ ಓಡಾಡಿಕೊಂಡಿರುವುದು.

Electron diffraction 

ಎಲೆಕ್ಟ್ರಾನಲೆಯ ಹಬ್ಬುವಿಕೆ – ಅಣುಗಳು ಅಥವಾ ಪರಮಾಣುಗಳು ಎಲೆಕ್ಟ್ರಾನುಗಳ ಕಿರಣಪುಂಜವೊಂದು ಹಬ್ಬುವಂತೆ ಮಾಡುವುದು‌.

Electron capture

ಎಲೆಕ್ಟ್ರಾನು ವಶ – ಒಂದು ಪರಮಾಣು ಅಥವಾ ಅಣುವು ಹೆಚ್ಚಿನ ಮುಕ್ತ ಎಲೆಕ್ಟ್ರಾನೊಂದನ್ನು ಪಡೆದುಕೊಳ್ಳುವುದರಿಂದ ಋಣ ವಿದ್ಯುದಣುವು ರೂಪುಗೊಳ್ಳುವ ಪ್ರಕ್ರಿಯೆ.

Electron affinity 

ಎಲೆಕ್ಟ್ರಾನಾಕರ್ಷಣೆ – ಒಂದು ಋಣವಿದ್ಯುದಣುವಿನಿಂದ ಒಂದು ಎಲೆಕ್ಟ್ರಾನನ್ನು ಅಣುವೊಂದು ಅಥವಾ ಪರಮಾಣುವೊಂದು ಗಳಿಸಿದಾಗ ಉಂಟಾಗುವ ಶಕ್ತಿ ವ್ಯತ್ಯಾಸ.

Electron

ಎಲೆಕ್ಟ್ರಾನು – ಒಂದು ಮೂಲಭೂತ ಕಣ. ಪರಮಾಣು ಬೀಜಕೇಂದ್ರದ ಸುತ್ತ ಇರುವ ಕವಚಗಳಲ್ಲಿ ಇರುತ್ತದೆ ಹಾಗೂ ಋಣ ವಿದ್ಯುದಂಶವನ್ನು ಹೊಂದಿರುತ್ತದೆ.

ಕನ್ನಡ ಗಾದೆಮಾತು –  ಹೂವಿನ ಜೊತೆ ನಾರೂ ಸ್ವರ್ಗ ಸೇರಿತು.

ಕನ್ನಡ ಭಾಷೆಯಲ್ಲಿನ ಒಂದು ವಿಶಿಷ್ಟ ಗಾದೆಮಾತಿದು. ದೇವರಿಗೆ ಹೂವಿನ ಹಾರ ಹಾಕಲು ಹೂ ಕಟ್ಟುವಾಗ ಬಾಳೆಯ ಅಥವಾ ಇನ್ಯಾವುದಾದರೂ ಗಿಡದ ನಾರನ್ನು ಬಳಸುತ್ತಾರೆ ಅಲ್ಲವೇ? ದೇವರಿಗೆ ಅರ್ಪಿಸಿದ ಹೂವು ಸ್ವರ್ಗ ಸೇರುತ್ತದೆ, ಏಕೆಂದರೆ ದೇವರ ಆವಾಸಸ್ಥಾನ ಸ್ವರ್ಗ ತಾನೇ. ಇಲ್ಲಿ ಸ್ವಾರಸ್ಯದ ಸಂಗತಿ ಅಂದರೆ ಸುಂದರ, ಸುಗಂಧಮಯ ಹೂವು ಸ್ವರ್ಗ ಸೇರುವುದೇನೋ ಸರಿಯೇ ; ಅದರೆ ಅದನ್ನು ಕಟ್ಟಲು ಬಳಸಿದ ಅಂದಚಂದ ಇಲ್ಲದ ಸರಳ ಸಾಧಾರಣ ನಾರೂ ಸಹ ಅದರೊಂದಿಗೆ ಸ್ವರ್ಗ ಸೇರಿಬಿಡುತ್ತದಲ್ಲ!! ನಮ್ಮ ಜೀವನದಲ್ಲಿ ಯಾರಾದರೂ […]

ಕನ್ನಡಿಗರ ಮನೆಯಾಗಲಿ ಮೊದಲ ‘ಕನ್ನಡ ಶಾಲೆ’

ನಮ್ಮ ‘ಚಿತ್ರನಾಟ್ಯ’ – ಭರತನಾಟ್ಯ ತರಗತಿಗೆ ಪುಟಾಣಿ ಮಕ್ಕಳು ಬಂದು ನಾಟ್ಯ ಕಲಿಯಲು ಸೇರುತ್ತವೆ. ಐದು- ಐದೂವರೆ- ಆರು ವಯಸ್ಸಿನ ಎಳೆಯ ಮಕ್ಕಳಿಗೆ ನಾಟ್ಯ ಹೇಳಿಕೊಡುವಾಗ ಅವಕ್ಕೆ ಅರ್ಥ ಆಗುವ ಭಾಷೆಯಲ್ಲಿ ಹೇಳಿಕೊಡುವುದು ಮುಖ್ಯ‌. ಹೀಗಾಗಿ ಮಕ್ಕಳನ್ನು ಅವರ ಮನೆಯ ಭಾಷೆ/ತಾಯಿ ನುಡಿಯ ಬಗ್ಗೆ ನಾನು ಸಾಮಾನ್ಯವಾಗಿ ವಿಚಾರಿಸುತ್ತೇನೆ.  ಮೇಲೆ ಹೇಳಿದ ಹಿನ್ನಲೆಯಲ್ಲಿ ಒಮ್ಮೆ ಒಂದು ಮಗುವನ್ನು ” ನಿಮ್ಮ ಮನೆಯಲ್ಲಿ ಯಾವ ಭಾಷೆ ಮಾತಾಡ್ತೀರಮ್ಮ?” ಎಂದು ನಾನು ಕೇಳಿದಾಗ ಅದು ” ಇಂಗ್ಲಿಷ್ ” ಎಂದು […]

Electromagnetic spectrum 

ವಿದ್ಯುತ್ಕಾಂತೀಯ ವರ್ಣಪಟಲ – ಒಂದು‌ ವಿಸ್ತಾರವಾದ ಹರಹಿನಲ್ಲಿ ಕ್ರಮವಾಗಿ ಇರಿಸಿದ ವಿದ್ಯುತ್ಕಾಂತೀಯ ವಿಕಿರಣಗಳು‌. ಇದರಲ್ಲಿ ಅತಿನೇರಳೆ, ಅಧೋಕೆಂಪು, ಕಣ್ಣಿಗೆ ಕಾಣುವ ಅಲೆಗಳೇ ಮುಂತಾದ ವಿವಿಧ‌ ರೀತಿಯ ಅಲೆಗಳು ಇರುತ್ತವೆ.

Electromagnetic radiation or Electromagnetic wave

ವಿದ್ಯುತ್ ಕಾಂತೀಯ ವಿಕಿರಣ ಅಥವಾ ವಿದ್ಯುತ್ಕಾಂತೀಯ ಅಲೆ – ವಿದ್ಯುತ್ ಕ್ಷೇತ್ರ ಹಾಗೂ ಕಾಂತಕ್ಷೇತ್ರಗಳನ್ನು ಒಳಗೊಂಡಿರುವ ಮತ್ತು ಚಲಿಸಲು ಯಾವ ಮಾಧ್ಯಮವೂ ಬೇಕಿಲ್ಲದ ಅಲೆಗಳು. ಬೆಳಕು ಸಹ ಇಂತಹ ಒಂದು ಅಲೆಯಾಗಿದೆ.

Page 66 of 117

Kannada Sethu. All rights reserved.