ಕೆಲಸ, ಸಂಪತ್ತಿನ ಕ್ರೋಢೀಕರಣ, ನಮ್ಮ ಚಿಂತನಾ ವಿನ್ಯಾಸ ಈ ಮುಂತಾದವುಗಳ ಬಗ್ಗೆ ಉತ್ತಮವಾದ ತಿಳುವಳಿಕೆಯನ್ನು ಕೊಡುವ ಒಂದು ಗಾದೆ ಮಾತು ಇದು. ಒಂದೇ ರೀತಿಯ ಸಂಗತಿಗಳಿಗೆ ಒಂದಕ್ಕೊಂದು ಸೇರಿ ಕಾಲಾಂತರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯುವ ಗುಣ ಇದೆ. ನೀರಿನ ಒಂದೊಂದೇ ಹನಿ ಸೇರಿ ದೊಡ್ಡ ಹಳ್ಳವಾಗಿಬಿಡುತ್ತವೆ, ತೆನೆಯ ಒಂದೊಂದೇ ಕಾಳು ಸೇರಿ ಬಳ್ಳ (ಧಾನ್ಯವನ್ನು ಅಳೆಯುವ ಒಂದು ಗ್ರಾಮೀಣ ಅಳತೆ, ಒಂದು ಬಳ್ಳ = ನಾಲ್ಕುಸೇರು) ವಾಗುತ್ತವೆ. ಹೀಗೆಯೇ, ಒಂದೇ ಕ್ಷೇತ್ರದಲ್ಲಿ ದಿನವೂ ಮಾಡಿದ ತುಸು ಪ್ರಮಾಣದ […]
ವಿದ್ಯುತ್ತೀಯ ಚಲನಶಾಸ್ತ್ರ – ಚಲನೆಯಲ್ಲಿರುವ ವಿದ್ಯುದಂಶಗಳು, ವಿದ್ಯುತ್ತೀಯ ಹಾಗೂ ಕಾಂತಕ್ಷೇತ್ರಗಳಿಂದ ಸೃಷ್ಟಿಯಾಗುವ ಬಲಗಳ ನಡುವಿನ ಸಂಬಂಧ ( ಮುಖ್ಯವಾಗಿ ವಿದ್ಯುಜ್ಜನಕ ಯಂತ್ರಗಳಿಗೆ ಸಂಬಂಧ ಪಟ್ಟಂತೆ) – ಈ ವಿಷಯಗಳ ಅಧ್ಯಯನ.
ವಿದ್ಯುದ್ವಾರದ ಅಂತಃಸಾಮರ್ಥ್ಯ – ಒಂದು ಲೋಹವು ತನ್ನನ್ನು ಸುತ್ತುವರೆದಿರುವ ದ್ರಾವಕಕ್ಕೆ ತನ್ನ ಎಲೆಕ್ಟ್ರಾನುಗಳನ್ನು ಕೊಟ್ಟುಬಿಡುವ ಪ್ರವೃತ್ತಿಯ ಅಳತೆ.
ವಿದ್ಯುತ್ತೀಯ ದ್ರವ ಶುದ್ಧೀಕರಣ – ನಿರ್ಲವಣೀಕರಣ ಅಥವಾ ನೀರಿನಿಂದ ಉಪ್ಪನ್ನು ಪ್ರತ್ಯೇಕಿಸುವಂತೆ, ಉಪ್ಪಿರುವ ನೀರಿನಿಂದ ಶುದ್ಧ ನೀರನ್ನು ಪಡೆಯುವ ವಿಧಾನ.
ವಿದ್ಯುತ್ತೀಯ ಪದರಗಟ್ಟುವಿಕೆ – ವಿದ್ಯುತ್ ರಾಸಾಯನಿಕ ಕ್ರಿಯೆಯ ಮೂಲಕ ಒಂದು ಘನವಸ್ತುವಿನ ( ಲೋಹ) ಒಂದು ಪದರವನ್ನು ಒಂದು ವಿದ್ಯುದ್ವಾರದ ಮೇಲ್ಮೈಗೆ ಹಚ್ಚುವುದು.
ವಿದ್ಯುದ್ವಾರ – ಒಂದು ವಿದ್ಯುತ್ ಉಪಕರಣದಲ್ಲಿ ಅಥವಾ ವಿದ್ಯುತ್ ವ್ಯವಸ್ಥೆಯಲ್ಲಿ ಎಲೆಕ್ಟ್ರಾನುಗಳನ್ನು ಅಥವಾ ಬೇರೆ ವಿಧದ ವಿದ್ಯುತ್ ಒಯ್ಯಕಗಳನ್ನು ಹೊರಸೂಸುವ ಅಥವಾ ಸಂಗ್ರಹಿಸುವ ಭಾಗ.
ವಿದ್ಯುತ್ ರಸಾಯನಿಕ ಶಾಸ್ತ್ರ- ದ್ರಾವಕಗಳಲ್ಲಿ ವಿದ್ಯುದಣುಗಳ ರೂಪಣೆ ಮತ್ತು ವರ್ತನೆಗಳನ್ನು ಅಧ್ಯಯನ ಮಾಡುವ ಜ್ಞಾನಶಾಖೆ.
Like us!
Follow us!