Domain

ಕಾಂತಪ್ರದೇಶ – ಅಯಸ್ಕಾಂತಗುಣೀ ವಸ್ತುವಿನಲ್ಲಿ ಎಲ್ಲ ಪರಮಾಣುಗಳ ಕಾಂತಕ್ಷೇತ್ರಗಳೂ ಒಂದೇ ದಿಕ್ಕಿನಲ್ಲಿ ಸ್ಥಿತಗೊಂಡಿರುವ ಪ್ರದೇಶ.‌

Diverging lens

ದಿಕ್ಬದಲನಾ ಮಸೂರ – ಸಮಾನಾಂತರವಾಗಿರುವ ಬೆಳಕಿನ ಕಿರಣಗಳ ದಿಕ್ಕನ್ನು‌ ಬೇರೆಬೇರೆಯಾಗಿಸುವ ಮಸೂರ‌. ಇದು ಮಧ್ಯದಲ್ಲಿ ತಗ್ಗಿದ್ದು ತುದಿಗಳಲ್ಲಿ ಉಬ್ಬಿರುತ್ತದೆ.

Distortion

ವಿರೂಪಗೊಳಿಸುವಿಕೆ – ತನಗೆ ದತ್ತವಾದದ್ದರ ಗುಣಲಕ್ಷಣಗಳನ್ನು ಅವು ಇದ್ದಂತೆಯೇ ಮರುಉತ್ಪಾದಿಸುವಲ್ಲಿ ವ್ಯವಸ್ಥೆಯು ವಿಫಲಗೊಳ್ಳುವ ಸ್ಥಿತಿ.

Dissonance

ಅಪಸ್ವರ – ಸಂಗೀತದಲ್ಲಿ ಕೆಲವು ಸ್ವರಗಳನ್ನು ಒಟ್ಟಿಗೆ ನುಡಿಸಿದಾಗ ಉಂಟಾಗುವ, ಕಿವಿಗೆ  ಕರ್ಕಶವಾಗಿ  ಕೇಳಿಸುವಂತಹ  ಸ್ವರಮಿಶ್ರಣ.

Disperse phase

ಚದುರಿದ ಅವಸ್ಥೆ – ಕಲಿಲಗಳಲ್ಲಿ ಅಂದರೆ ಪರಸ್ಪರ ಕರಗದ ವಸ್ತುಗಳ ಮಿಶ್ರಣದಲ್ಲಿ ಚದುರಿದ ಸ್ಥಿತಿಯಲ್ಲಿರುವ ವಸ್ತುವಿನ ರೂಪ ಅಥವಾ ಅವಸ್ಥೆ.

ಕನ್ನಡ ಗಾದೆಮಾತು – ಹೊಸದರಲ್ಲಿ ಅಗಸ ಗೋಣಿ ಎತ್ತಿ ಎತ್ತಿ ಒಗೆದನಂತೆ. 

ಲೋಕಾನುಭವದ ಸಾರರೂಪವೇ ಗಾದೆಮಾತುಗಳು. ಅದಕ್ಕೆ  ಮೇಲಿನದೂ  ಅಪವಾದ ಅಲ್ಲ.  ಜನ ಏನಾದರೂ ಕೆಲಸವನ್ನು ಪ್ರಾರಂಭಿಸುವಾಗ ಬಲು ಉತ್ಸಾಹದಿಂದ ಪ್ರಾರಂಭಿಸುತ್ತಾರೆ, ನೋಡುವವರು ಆಹಾ ಎನ್ನುವಂತೆ. ಪ್ರಾರಂಭದಲ್ಲಿ ಅಗಸನು ಯಕಃಶ್ಚಿತ್ ಗೋಣಿಚೀಲವನ್ನು ಸಹ ಎತ್ತಿ ಎತ್ತಿ ಒಗೆದಂತೆ.‌ ಆದರೆ, ದಿನ ಕಳೆಯುತ್ತಾ ಹೋದಂತೆ ಅವರ ಉತ್ಸಾಹ ಕುಗ್ಗಿ ಕೆಲಸದ ಗುಣಮಟ್ಟವು ಕಡಿಮೆ ಆಗುತ್ತದೆ. ಇಂತಹ ಮಾತಿಗೆ ಅವಕಾಶ ಕೊಡದಂತೆ ನಾವು ಕೆಲಸದ ಗುಣಮಟ್ಟ‌ ಮತ್ತು‌ ನಮ್ಮ ಉತ್ಸಾಹವನ್ನು ಯಾವಾಗಲೂ ಒಂದೇ ಸಮನಾಗಿರುವಂತೆ  ಕಾಪಾಡಿಕೊಳ್ಳಬೇಕು. Kannada proverb – Hosadaralli agasa […]

ಕೊಸರಿನ ಧರ್ಮ, ಕನ್ನಡ ವ್ಯಾಪಾರದ ಒಳಮರ್ಮ

ಮೈಸೂರು, ಬೆಂಗಳೂರು ಮುಂತಾದ ಹಳೆ ಮೈಸೂರಿನ ಪ್ರದೇಶಗಳಲ್ಲಿ ಸ್ಥಳೀಯ ವ್ಯಾಪಾರಿಗಳ ಬಳಿ ಹೂವು, ತರಕಾರಿ ಮುಂತಾದವನ್ನು ಕೊಂಡವರಿಗೆ ‘ಕೊಸರು’ ಎಂಬ ಪದ ಹಾಗೂ ಪ್ರಕ್ರಿಯೆಯ ಪರಿಚಯ ಇರುತ್ತದೆ ಎಂದು ನಾವು ಭಾವಿಸಬಹುದು. ಉದಾಹರಣೆಗೆ ನಾಲ್ಕು ರಸ್ತೆಗಳು ಕೂಡುವ ವೃತ್ತದ ಬಳಿ ಹೂಮಾರಾಟ ಮಾಡುತ್ತಿರುವ, ಹಳೆಕಾಲದ ವ್ಯಾಪಾರಿಯೊಬ್ಬರ ಬಳಿ ನೀವು ಒಂದು ಮೊಳ ಮಲ್ಲಿಗೆ ಅಥವಾ ಕನಕಾಂಬರ ಹೂವನ್ನು ಕೊಂಡಿರಿ ಎಂದಿಟ್ಟುಕೊಳ್ಳೋಣ. ಬೆಲೆ ವಿಚಾರಿಸಿ ನಿಮಗೆ ಎಷ್ಟು ಬೇಕೋ ಅಷ್ಟನ್ನು ಕೊಡುವಂತೆ ಹೇಳಿ ವ್ಯಾಪಾರಿಗೆ ನೀವು ಹಣ ಕೊಟ್ಟು, […]

Dislocation

ಸ್ಥಾನಾಂತರ – ಸ್ಫಟಿಕದಲ್ಲಿನ(ಹರಳಿನಲ್ಲಿನ) ಒಂದು ಗೆರೆದೋಷ ಇದು‌. ಇದರಿಂದಾಗಿ ಸ್ಫಟಿಕದ ಒಟ್ಟು ಚೌಕಟ್ಟಿನ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಮೇಲ್ಮೈಗಳಲ್ಲಿ ಸ್ಥಾನಾಂತರ ಆಗುತ್ತದೆ( ಸ್ಥಾನಂತರ = ವಸ್ತುಗಳು ಎಲ್ಲಿರಬೇಕೋ ಅಲ್ಲಿ ಇರದಿರುವುದು).

Disintegration

ವಿಘಟನೆ – ಒಂದು ಪರಮಾಣುವಿನ ಬೀಜಕೇಂದ್ರವು ಒಡೆದು ಚೂರುಚೂರಾಗುವುದು‌.

Discriminator

ಭೇದಕಾರಕ ವಿದ್ಯುನ್ಮಂಡಲ – ಕೆಲವು ವಿದ್ಯುತ್ ಅಲೆಗಳನ್ನು ಆಯ್ದುಕೊಳ್ಳುವ ಹಾಗೂ ಇನ್ನು ಕೆಲವನ್ನು ತಿರಸ್ಕರಿಸುವ ವಿದ್ಯುನ್ಮಂಡಲ.

Page 71 of 112

Kannada Sethu. All rights reserved.