ಭಾಷಾ ತರಗತಿಗಳು ಭಾವರಹಿತವಾದರೆ ಅವು ಪರಿಣಾಮಕಾರಿಯಾಗುವುದಿಲ್ಲ. ಒಬ್ಬ ಕನ್ನಡ ಅಧ್ಯಾಪಕಿಯಾಗಿ ನಾನು ಭಾವಿಸಿದ ಹಾಗೂ ಜೀವಿಸಿದ ಅನುಭವವಿದು. ಭಾಷೆಯು ಸಾಹಿತ್ಯದ ಸಂದರ್ಭದಲ್ಲಿ ಅಥವಾ ಸಂವಹನ ಸಂದರ್ಭದಲ್ಲಿ ಬಳಕೆಯಾಗುವಾಗ ಭಾವಭರಿತವಾದ ರೂಪ, ಆಕಾರಗಳನ್ನು ಹೊಂದಿರುತ್ತದೆ. ವಿಜ್ಞಾನ, ವಾಣಿಜ್ಯ, ತರ್ಕ ಮುಂತಾದ ವಿಷಯಗಳನ್ನು ಬೋಧಿಸುವಾಗ ಅಥವಾ ಬರೆಯುವಾಗ ಭಾಷೆಯು ತನ್ನ ಭಾವರೂಪವನ್ನು ಹಿಂದಿಟ್ಟು ಜ್ಞಾನರೂಪವನ್ನು ಮುಂದಿಡುತ್ತದೇನೋ. ಆದರೆ ಕನ್ನಡ ಅಥವಾ ಯಾವುದೇ ಭಾಷಾ/ಸಾಹಿತ್ಯ ತರಗತಿಗಳಲ್ಲಿ ಅದು ಭಾವರೂಪಿಯಲ್ಲದೇ ಹೋದರೆ ತಾನು ಹೇಳಬೇಕಾದುದನ್ನು ಸಮರ್ಥವಾಗಿ ಹೇಳಲಾಗದು. ಅಕ್ಷರ, ಪದ, ವಾಕ್ಯಗಳನ್ನು ಉಚ್ಚರಿಸುವಾಗ […]
ಚೆಲ್ಲಾಪಿಲ್ಲಿ ಚಲನೆ – ಒಂದು ವಸ್ತುವಿನಲ್ಲಿನ ಅಣುಗಳು ತಾಪದ ಕಾರಣದಿಂದ ಚೆಲ್ಲಾಪಿಲ್ಲಿಯಾಗಿ ಚಲಿಸುವುದು.
ಬೆಳಕಿನಲೆಯ ಹಬ್ಬುವಿಕೆ – ಬೆಳಕಿನ ಕಿರಣ ಪುಂಜವೊಂದು ಕಿರಿದಾದ ಕಿಂಡಿಯೊಂದರ ಮೂಲಕ ಹಾಯ್ದು ಪರದೆಯೊಂದರ ಮೇಲೆ ಬೀಳುವಂತೆ ಮಾಡಿದಾಗ, ಉಜ್ವಲವಾಗಿ ಮತ್ತು ಮಸುಕಾದ ಪರ್ಯಾಯ ಪಟ್ಟಿಗಳಾಗಿ ಹಬ್ಬುವ ವಿದ್ಯಮಾನ.
ರಾಟೆ ವ್ಯವಸ್ಥೆ – ಎರಡು ರಾಟೆಗಳು ಮತ್ತು ಕೊನೆಯಿಲ್ಲದ ಸರಪಣಿಯನ್ನು ಬಳಸಿಕೊಂಡು ಕೆಲಸ ಮಾಡುವ ಒಂದು ಯಾಂತ್ರಿಕ ವ್ಯವಸ್ಥೆ.
ಅವಾಹಕ – ತನ್ನೊಳಗೆ ವಿದ್ಯುತ್ತನ್ನು ಹರಿಯಲು ಬಿಡದ ವಸ್ತು.
ದ್ವಿವರ್ಣತೆ – ಟೌರ್ಮಲೈನ್ ತರಹದ ಕೆಲವು ಹರಳುಗಳಲ್ಲಿ ಕಾಣುವಂತಹ ಒಂದು ಗುಣ, ಬೆಳಕಿನ ಕೆಲವು ಕಿರಣಗಳನ್ನು ಹೀರಿಕೊಂಡು, ಇನ್ನು ಕೆಲವನ್ನು ತಮ್ಮ ಮೂಲಕ ಸಾಗಿಹೋಗಲು ಬಿಡುವಂತಹ ಗುಣ. ಇದರಿಂದಾಗಿ ಒಂದೇ ಹರಳಿನಲ್ಲಿ ಒಂದಕ್ಕಿಂತ ಹೆಚ್ಚು ಬಣ್ಣ ಕಾಣುತ್ತದೆ.
ಚಿತ್ರಯಂತ್ರ – ಅರೆಪಾರದರ್ಶಕ ವಸ್ತುಗಳನ್ನು ಬಿಂಬಿಸಲು ಬಳಸುವ ಒಂದು ದೃಶ್ಯೋಪಕರಣ.
ತಡೆಗೋಡೆ – ದೃಶ್ಯೋಪಕರಣಗಳಲ್ಲಿ ಕ್ಯಾಮರಾ ಕಿಂಡಿಯೊಳಗೆ ಬರುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ಸಾಧನ.
Like us!
Follow us!