ಕನ್ನಡದ ಒಂದು ಪ್ರಸಿದ್ಧ ನಾಣ್ಣುಡಿ ಇದು. ನಾವು ನಮಗಾಗಿ ಮಾಡಿಕೊಂಡ ಅಡಿಗೆಯನ್ನು ನಾವೇ ಉಣ್ಣಬೇಕು. ಹಾಗೆಯೇ ನಮ್ಮ ಕೆಲಸದಲ್ಲಿನ ಸರಿತಪ್ಪುಗಳ ಫಲವನ್ನು ನಾವೇ ಅನುಭವಿಸಬೇಕು. ಈ ನುಡಿಯನ್ನು ನೆನೆದು ಬದುಕಿನಲ್ಲಿ ನಾವು ಎಚ್ಚರಿಕೆಯಿಂದ ನಮ್ಮ ಹೆಜ್ಜೆಗಳನ್ನು ಇಡಬೇಕು. Kannada saying – Madiddunno maharaya( Eat what you cooked sir!). This is a very popular saying in Kannada. We have to eat what we cooked. Just like this […]
ಸಾಂದ್ರತೆ – ಏಕಘಟಕ ಪರಿಮಾಣದಲ್ಲಿರುವ ಒಂದು ವಸ್ತುವಿನ ದ್ರವ್ಯರಾಶಿ.
ಸಾಂದ್ರತಾ ಮಾಪಕ – ಒಂದು ಚಿತ್ರಪರದೆ ಅಥವಾ ಛಾಯಾಚಿತ್ರದ ಮುದ್ರಿತ ಪ್ರತಿಯಲ್ಲಿನ ಒಂದು ಬಿಂಬದ ಸಾಂದ್ರತೆಯನ್ನು ಅಳೆಯಲು ಬಳಸುವ ಒಂದು ಮಾಪಕ.
ಗುಣಗೆಡಿಸುವುದು – ಒಂದು ವಸ್ತುವಿಗೆ ತಾಪ ನೀಡಿ ಅಥವಾ ರಾಸಾಯನಿಕ ಪದಾರ್ಥಗಳು ಮುಂತಾದುವನ್ನು ಸೇರಿಸಿ ಅದರ ಮೂಲ ಸ್ವಭಾವವನ್ನು ಕೆಡಿಸುವುದು.
ನಿಷ್ಕಾಂತೀಕರಣ – ಒಂದು ಅಯಸ್ಕಾಂತದ ಕಾಂತಕ್ಷೇತ್ರವನ್ನು ಉಷ್ಣತಾ ಉಪಚಾರ ನೀಡಿ ಅಥವಾ ಪರ್ಯಾಯಗೊಳ್ಳುವ ವಿದ್ಯುತ್ ನೀಡಿ ತೆಗೆದು ಹಾಕುವುದು.
ಅಂಕೀಯ ಗಣಕಯಂತ್ರ- 0 ಮತ್ತು 1 ಎಂಬ ಅಂಕಿಗಳಲ್ಲಿರುವ ದತ್ತಾಂಶವನ್ನು ಬಳಸಿಕೊಂಡು ಕೆಲಸ ಮಾಡುವ ಗಣಕಯಂತ್ರ. ಇದು ಭೌತಿಕ ಪರಿಮಾಣಗಳನ್ನು ಬಳಸುವ ಗಣಕಯಂತ್ರಕ್ಕಿಂತ ( analogue computer) ಗಿಂತ ಭಿನ್ನವಾದದ್ದು.
ಸ್ವಾತಂತ್ರ್ಯದ ಮಟ್ಟಗಳು – ಪರಮಾಣುಗಳಲ್ಲಿ ಕಣಗಳು ಶಕ್ತಿಯನ್ನು ಪಡೆದುಕೊಳ್ಳುವ ಸ್ವತಂತ್ರ ರೀತಿಗಳು.
Like us!
Follow us!