ಕನ್ನಡ ಜನರು ತಮ್ಮ ಮಾತಿನಲ್ಲಿ ಆಗಾಗ ಬಳಸುವ ಗಾದೆಮಾತು ಇದು. ಮೊದಲು ಈ ಗಾದೆಮಾತಿನ ಮೇಲ್ನೋಟದ ಅರ್ಥವನ್ನು ಅರಿಯೋಣ. ತುಪ್ಪ ಎಂಬುದು ಅತ್ಯಂತ ರುಚಿಯಾದ ಮತ್ತು ಬೇರೆ ತಿನಿಸುಗಳ ರುಚಿಯನ್ನು ಹೆಚ್ಚಿಸುವ ಪದಾರ್ಥ.ಇದು ದುಬಾರಿಯೂ ಆದ್ದರಿಂದ ಬಡವರ ಮನೆಗಳಲ್ಲಿ ಎಂದೋ ಒಂದು ಹಬ್ಬದಲ್ಲಿ, ವಿಶೇಷ ದಿನದಲ್ಲಿ ಮಾತ್ರ ಬಳಕೆಗೆ ಸಿಗುವಂಥದ್ದು. ಇಂತಹ ತುಪ್ಪ ಒಂದು ವೇಳೆ ಬಿಸಿಯಾಗಿದ್ದು ನೀವು ನೋಡದೆ ಅದನ್ನು ಬಾಯಿಗೆ ಹಾಕಿಕೊಂಡಿರಿ ಎಂದುಕೊಳ್ಳಿ. ಆಗ ಅದನ್ನು ಉಗಿಯಲೂ ಆಗುವುದಿಲ್ಲ (ರುಚಿ, ಮೌಲ್ಯದ ಕಾರಣದಿಂದಾಗಿ), ನುಂಗಲೂ ಆಗುವುದಿಲ್ಲ ( ಬಾಯಿ ಸುಟ್ಟುಕೊಂಡು ಒದ್ದಾಡಬೇಕಾದ ಕಾರಣದಿಂದಾಗಿ). ಜೀವನದಲ್ಲೂ ಕೆಲವು ಸನ್ನಿವೇಶಗಳು ಹೀಗೆ ಬರುತ್ತವೆ. ಉದಾಹರಣೆಗೆ, ತಾನಿರುವ ಊರಲ್ಲೇ ಇದ್ದು ವಯಸ್ಸಾದ ಅಪ್ಪ ಅಮ್ಮಂದಿರನ್ನು ನೋಡಿಕೊಳ್ಳಲೇಬೇಕಾದ ಉದ್ಯೋಗಸ್ಥ ಮಗನಿಗೆ ದೊಡ್ಡ ಹುದ್ದೆಗೆ ಬಡ್ತಿ ಸಿಕ್ಕಿ ಬೇರೆ ಊರಿಗೆ ಹೋಗಬೇಕಾಗುವುದು, ಅಥವಾ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳುವ ಮೇಲಧಿಕಾರಿಯ ಜೊತೆಯಲ್ಲಿ ಕೆಲಸ ಮಾಡುವ ಇಕ್ಕಟ್ಟು, ಸೋಮಾರಿಗಳಾದ ನೆಂಟರು ಸಾಲ ಕೇಳುವಾಗ ಉಂಟಾಗುವ ಧರ್ಮ ಸಂಕಟ… ಇಂತಹವೆಲ್ಲ ಆದಾಗ ಜನ ‘ಅಯ್ಯೋ, ಬಿಸಿ ತುಪ್ಪ ನೋಡಿ, ಉಗಳಕ್ಕಾಗದು ನುಂಗಕ್ಕಾಗದು’ ಅನ್ನುತ್ತಾರೆ.
Kannada proverb – Bisi thuppa : ugulokagadu, nungokagadu( It is hot ghee, I can’t spit it out, I can’t swallow).
Ghee is very tasty, and at the same time it is very costly. By chance if someone swallows hot ghee, he can not swallow it because it is too hot to swallow, and he can not spit it out because of taste and cost.
In our life sometimes we face this ‘hot ghee’ situation. For example, the job may be good but boss may be bad, promotion got entwined with a transfer to a far away place, a high healed very pretty shoes but it bites…When kannadigas face such situations this proverb is used by them.