ಫ್ರೆಸ್ನೆಲ್ ಲೆನ್ಸ್ – ಫ್ರೆಸ್ನೆಲ್ ಮಸೂರ – ಒಂದು ರೀತಿಯ ಮಸೂರ ಇದು.‌ ಇದರ ಒಂದು ಮೇಲ್ಮೈಯನ್ನು ಮೆಟ್ಟಿಲು ಮೆಟ್ಟಿಲಾಗಿ ಕತ್ತರಿಸಿರುತ್ತಾರೆ. ಇದರಿಂದಾಗಿ ಈ ಮಸೂರದಿಂದ ಇನ್ನೂ ದಪ್ಪ, ಭಾರ ಹಾಗೂ ದುಬಾರಿಯಾದ ಸಾಂಪ್ರದಾಯಿಕ ಮಸೂರದ ಮೂಲಕ ಆಗುವಂತಹ ಬೆಳಕಿನ ವಕ್ರೀಭವನ ಉಂಟಾಗುತ್ತದೆ.