ಕನ್ನಡ ಭಾಷೆಯಲ್ಲಿ ಬಹುವಾಗಿ ಬಳಕೆಯಾಗುವ ಗಾದೆಮಾತುಗಳಲ್ಲಿ ಇದೂ ಒಂದು. ನಾವು ಮನೆಯಲ್ಲಿ ಹುಣಿಸೆ ಹಣ್ಣನ್ನು ಸಾರು, ಸಾಂಬಾರು, ಗೊಜ್ಜು, ಪುಳಿಯೋಗರೆ ಮುಂತಾದವನ್ನು ಮಾಡಲು ಬಳಸುವಾಗ, ನಮಗೆ ಎಷ್ಟು ಬೇಕೋ ಅಷ್ಟನ್ನು ನೀರಿನಲ್ಲಿ ಕಿವುಚಿಕೊಂಡು ರಸ ತೆಗೆದು ಬಳಸುತ್ತೇವಲ್ಲ,  ಇದು ನಮ್ಮ ದಿನದ ರೂಢಿಯ ಮಾತಾಯಿತು. ಆದರೆ ಇಷ್ಟೇ ಪ್ರಮಾಣದ ಹುಣಿಸೆ ಹಣ್ಣನ್ನು ಒಂದು ಹೊಳೆ ಅಥವಾ ನದಿಯಲ್ಲಿ ಕಿವುಚಿದರೆ ಏನಾಗಬಹುದು!? ಆ ಹಣ್ಣು ವ್ಯರ್ಥವಾಗಿ ಹೋಗುತ್ತದೆಯೇ ಹೊರತು ನಮಗೆ ಅದರ ಹುಳಿರುಚಿ‌ ಸ್ವಲ್ಪವೂ ದೊರೆಯುವುದಿಲ್ಲ.   

ಹೀಗೆಯೇ ಬದುಕಿನಲ್ಲಿ  ನಾವು

ತುಂಬ ಶ್ರಮದಿಂದ ಮಾಡಿದ ಕೆಲಸಗಳು ಕೆಲವೊಮ್ಮೆ  ವ್ಯರ್ಥವಾಗುತ್ತವೆ. ಉದಾಹರಣೆಗೆ ತರಗತಿಯಲ್ಲಿ ನಮ್ಮಂತಹ ಕನ್ನಡ ಅಧ್ಯಾಪಕರು ಪಾಠಕ್ಕೆ ಪೀಠಿಕೆ ಎಂದು ಕನ್ನಡ ಸಾಹಿತ್ಯ ಚರಿತ್ರೆ, ಕವಿ ಪರಿಚಯ, ಸಾಹಿತ್ಯ ಚಳುವಳಿ ಮುಂತಾದವುಗಳ ಬಗ್ಗೆ ಒಂದು ಗಂಟೆ – ಎರಡು ಗಂಟೆ ಪಾಠ ಹೇಳಿದ್ದರೂ, ಮುಂದಿನ ತರಗತಿಯಲ್ಲಿ ವಿದ್ಯಾರ್ಥಿಗಳು ಒಂದೇ ಒಂದು ವಾಕ್ಯವನ್ನೂ ನೆನಪಿಟ್ಟುಕೊಳ್ಳದಿರುವುದು, ದಿನಾಲೂ ಶುಚಿ ಮಾಡುವ ಅಭ್ಯಾಸ ಇಟ್ಟುಕೊಳ್ಳದ ಸ್ಥಳಗಳಲ್ಲಿ ಗಾಂಧಿ ಜಯಂತಿಯಂದು ಸ್ವಚ್ಛತಾ ಅಭಿಯಾನದ ಹೆಸರಲ್ಲಿ ಕಷ್ಟ ಪಟ್ಟು ಗುಡಿಸಿ, ಕಸ ತೆಗೆದರೂ ಇನ್ನು ಎರಡು- ಮೂರು ದಿನಕ್ಕೆ ಮತ್ತೆ ಎಲ್ಲ‌ ಕಡೆ ಕಸ ತುಂಬಿಕೊಳ್ಳುವುದು ……. ಇಂತಹ ಸಂದರ್ಭಗಳಲ್ಲಿ ಮೇಲಿನ ಗಾದೆಮಾತು ಬಳಕೆಯಾಗುತ್ತದೆ. ಎಷ್ಟು ಅರ್ಥ ಗರ್ಭಿತ ಅಲ್ಲವೇ, ನಮ್ಮ ಹಿರಿಯರ ವಿವೇಕದ ನುಡಿಗಳು!

Kannada proverb – Holeyalli hunise hannu kivuchidhange ( It is like squeezing tamarind in a stream).

This proverb can only be understood in the context of cultural and culinary context of Kannada language and culture. Especially in Southern Karnataka the tamarind fruit is extensively used in cooking to give a sour(tangy) taste to the dishes. We can not think of puliyogare or traditional sambar without tamarind. Usually, at homes, a lime sized or orange sized, skinned and  deseeded tamarind fruit is taken, soaked in water and the thick pulp is used in dishes. But if we soak or squeeze the tamarind in a flowing stream all the taste will be lost. Isn’t it? Similarly if we give a lecture at a market, or sing in a busy crowd our speech or song go unheard and we feel that our effort is wasted. In such contexts the above proverb is used. It is an oft used proverb.