ಕೆಲಸದ ವಿಷಯ ಬಂದರೆ  ನಾವು ಎರಡು ತರಹದ ಜನರನ್ನು ನೋಡಬಹುದು. ‌ಒಂದು, ಯಾವುದೇ ನೆಪ ಹೇಳದೆ ಅಚ್ಚುಕಟ್ಟಾಗಿ ಕೆಲಸ ಮಾಡುವವರು, ಇನ್ನೊಂದು, ಕೆಲಸ ಮಾಡದೆ ಬರೀ ನೆಪ ಹೇಳುವವರು‌.‌ ಈ ಎರಡನೆಯ ರೀತಿಯ ಜನರು ತಮ್ಮ ಕೈಲಿ ಕೆಲಸ ಸಾಗದು ಎಂಬ ಕಾರಣಕ್ಕಾಗಿ ಸಮಯ, ಸಲಕರಣೆಗಳು, ಸಂಗಡಿಗರು, ಸನ್ನಿವೇಶ ಎಲ್ಲವನ್ನೂ ದೂರುತ್ತಾ ಇರುತ್ತಾರೆ. ಉದಾಹರಣೆಗೆ ಹೊಲದಲ್ಲಿ ಪೈರು ಕುಯ್ಯುವವನು, ಬೆನ್ನು ಬಾಗಿಸಿ, ಬಾಯಿ ಮುಚ್ಚಿಕೊಂಡು ತನ್ನ ಕುಡುಗೋಲಿನಿಂದ( ಕೃಷಿಯಲ್ಲಿ ಬಳಸುವ, ಬಾಗಿರುವ ಒಂದು ರೀತಿಯ ಕತ್ತಿ) ಪೈರು ಕೊಯ್ಯಬೇಕಲ್ಲವೆ? ಅದು ಬಿಟ್ಟು ‘ಈ ಕುಡುಗೋಲು ಸರಿ ಇಲ್ಲ, ಬೇರೆಯದು ಬೇಕು, ಊಂಹೂಂ ಇದೂ ಸರಿಯಿಲ್ಲ, ಇನ್ನೊಂದು ಕೊಡಿ, ಈ ಕುಡುಗೋಲು ಮೊಂಡ, ಆ ಕುಡುಗೋಲಿನ ಹಿಡಿ ಸರಿ ಇಲ್ಲ‌’ ಎಂದು ಕುಡಗೋಲುಗಳನ್ನು ದೂರುತ್ತಾ ಇದ್ದರೆ ಏನು ಅರ್ಥ? ಅವನ ಕೈಯಲ್ಲಿ ಕೆಲಸ ಸಾಗುವುದಿಲ್ಲ ಎಂದೇ ಅರ್ಥ ಅಲ್ಲವೆ? ಇಂತಹವನಿಗೆ ಒಂಬತ್ತು ಕುಡುಗೋಲಿದ್ದರೂ ಸಾಲದು, ತೊಂಬತ್ತಿದ್ದರೂ ಸಾಲದು. ಏಕೆಂದರೆ ಕುಡುಗೋಲನ್ನು ದೂರುವುದೇ ಅವನ ಕೆಲಸ ; ಪೈರು ಕುಯ್ಯುವುದಲ್ಲ. ನಾವು ಇಂಥವರಾಗಬಾರದು.‌ ಅಲ್ಲವೆ?

Kannada proverb – Kuyyalaradavanige kudagolombaththu(The one who does not cut the crop, needs nine sickles).

When it comes to work, we see two types of people. One, those who work silently without any excuses, and two, who never work but only complain. The second type can blame the weather, workmates, their tools, time…anything to cover up their lazyness and inefficiency. For example, a lazy man who has been given the job of cutting the crops can blame his sickle ; ‘This is not sharp, give me another one, that is too short, this is too long, the other one’s handle is loose’…..so on and so forth. Even if you give nine or ninety different sickles his whining will not stop. This is because he is a work shirker. We should not be known as such a person. Isn’t it?