ಅತಿ ಕುಗ್ಗಿದ – ಗ್ಯಾಲ್ವನೋಮೀಟರಿನಂತಹ ಉಪಕರಣದಲ್ಲಿನ ಆಂದೋಲನಗಳು ಅತ್ಯಂತ ಕಡಿಮೆ ಸಮಯದಲ್ಲಿ ನಿಂತು ಹೋದಾಗ ಅದನ್ನು ಅತಿ ಕುಗ್ಗಿದ ಸ್ಥಿತಿಯದ್ದು ಎನ್ನುತ್ತಾರೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಭೂ ಸಂಪರ್ಕ – ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ಬಳಸುವ ಪದವಿದು. ಯಾವುದೇ ಒಂದು ವಾಹಕಕ್ಕೂ (ವಿದ್ಯುತ್ ಹರಿಯುತ್ತಿರುವ) ಭೂಮಿಗೂ ಕಡಿಮೆ ಪ್ರತಿರೋಧವುಳ್ಳ ಸಂಪರ್ಕ ಕಲ್ಪಿಸಿರುವ ಸನ್ನಿವೇಶ ಇದು.
ವಿನಾಶ – ಒಂದು ವಿಕಿರಣ ಬೀಜಕೇಂದ್ರವು ಇನ್ನೊಂದು ವಿಕಿರಣ ಬೀಜಕೇಂದ್ರವಾಗಿ ಮಾರ್ಪಾಟುಗೊಳ್ಳುವುದು.
ಇಳಿಜಾರು ಮಾಪಕ – ಅಯಸ್ಕಾಂತೀಯ ಇಳಿಜಾರನ್ನು ಅಳೆಯಲು ಬಳಸುವ ಉಪಕರಣ.
ಜೋಡಣೆ ಕಳಚುವಿಕೆ – ವಿದ್ಯುನ್ಮಂಡಲವೊಂದರಿಂದ ಯಾವುದಾದರೂ ಭಾಗವನ್ನು ತೆಗೆದುಬಿಡುವುದು.
ನಿಷ್ಕಾಂತಗೊಳಿಸುವಿಕೆ – ಒಂದು ವಸ್ತುವಿನ ಕಾಂತಕ್ಷೇತ್ರವನ್ನು ಅದಕ್ಕೆ ಸಮವಾಗಿರುವ ಮತ್ತು ಅದರ ವಿರುದ್ಧ ದಿಕ್ಕಿನಲ್ಲಿರುವ ಕಾಂತಕ್ಷೇತ್ರದ ಬಳಕೆಯಿಂದ ತಟಸ್ಥಗೊಳಿಸುವುದು.
ಸ್ವಾತಂತ್ರ್ಯದ ಮಟ್ಟಗಳು – ಪರಮಾಣುಗಳಲ್ಲಿ ಕಣಗಳು ಶಕ್ತಿಯನ್ನು ಪಡೆದುಕೊಳ್ಳುವ ಸ್ವತಂತ್ರ ರೀತಿಗಳು.
ನಿಷ್ಕಾಂತೀಕರಣ – ಒಂದು ಅಯಸ್ಕಾಂತದ ಕಾಂತಕ್ಷೇತ್ರವನ್ನು ಉಷ್ಣತಾ ಉಪಚಾರ ನೀಡಿ ಅಥವಾ ಪರ್ಯಾಯಗೊಳ್ಳುವ ವಿದ್ಯುತ್ ನೀಡಿ ತೆಗೆದು ಹಾಕುವುದು.
ಗುಣಗೆಡಿಸುವುದು – ಒಂದು ವಸ್ತುವಿಗೆ ತಾಪ ನೀಡಿ ಅಥವಾ ರಾಸಾಯನಿಕ ಪದಾರ್ಥಗಳು ಮುಂತಾದುವನ್ನು ಸೇರಿಸಿ ಅದರ ಮೂಲ ಸ್ವಭಾವವನ್ನು ಕೆಡಿಸುವುದು.
ಸಾಂದ್ರತಾ ಮಾಪಕ – ಒಂದು ಚಿತ್ರಪರದೆ ಅಥವಾ ಛಾಯಾಚಿತ್ರದ ಮುದ್ರಿತ ಪ್ರತಿಯಲ್ಲಿನ ಒಂದು ಬಿಂಬದ ಸಾಂದ್ರತೆಯನ್ನು ಅಳೆಯಲು ಬಳಸುವ ಒಂದು ಮಾಪಕ.
Like us!
Follow us!