ಸಾಂದ್ರತೆ – ಏಕಘಟಕ ಪರಿಮಾಣದಲ್ಲಿರುವ ಒಂದು ವಸ್ತುವಿನ ದ್ರವ್ಯರಾಶಿ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಧ್ರುವೀಕರಣ ನಿವಾರಕ – ವಿದ್ಯುತ್ ರಾಸಾಯನಿಕ ( ವೋಲ್ಟಾಯಿಕ್) ಕೋಶದಲ್ಲಿ ಧ್ರುವೀಕರಣವನ್ನು ಮ್ಯಾಂಗನೀಸ್ ಡೈಯಾಕ್ಸೈಡ್ ನಂತಹ ವಸ್ತುವನ್ನು ಬಳಸಲಾಗುತ್ತದೆ.
ದೃಷ್ಟಿಕ್ಷೇತ್ರದ ಹರಹು – ಛಾಯಾಗ್ರಹಕ ಯಂತ್ರ (ಕ್ಯಾಮೆರಾ) ಅಥವಾ ಅಂತಹ ದೃಶ್ಯಸಂಬಂಧೀ ಉಪಕರಣಗಳು ಒಂದು ವಸ್ತುವಿನ ಸುಸ್ಪಷ್ಟ ಬಿಂಬವನ್ನು ಉತ್ಪಾದಿಸುವಷ್ಡು ವಿಸ್ತಾರದ ಶ್ರೇಣಿ.
ಆಸ್ಫೋಟನ – ಅತಿ ಹೆಚ್ಚು ವೇಗವುಳ್ಳ ಆಘಾತ ತರಂಗಗಳೊಡನೆ ಆಗುವಂತಹ ಅತಿ ಕ್ಷಿಪ್ರ ದಹನಕ್ರಿಯೆ( ಬಾಂಬುಗಳಲ್ಲಿ ಆಗುವಂತೆ).
ಡ್ಯುಟೇರಿಯಂ – ಜಲಜನಕದ ಒಂದು ಸಮರೂಪಿ ಇದು. ಇದರ ದ್ರವ್ಯರಾಶಿ ಸಂಖ್ಯೆ 2. ಇದನ್ನು ಭಾರದ ಜಲಜನಕ ಎಂದೂ ಕರೆಯುತ್ತಾರೆ. ಸಹಜ ಜಲಜನಕದಲ್ಲಿ ಡ್ಯುಟೇರಿಯಂನ ಪ್ರಮಾಣ 0.0156%.
ಇಬ್ಬನಿ – ಗಾಳಿಯ ಉಷ್ಣತೆ ಕಡಿಮೆಯಾಗಿ ಅದರಲ್ಲಿನ ಆವಿಯ ಪ್ರಮಾಣವು ಗರಿಷ್ಠ ಆರ್ದ್ರತೆಗೆ ತಲುಪಿದಾಗ ನೀರು ಪಡೆವ ಹನಿರೂಪ.
ಬಲಮುಖೀ ತಿರುಗಣೆ – ಮೇಲ್ಮೈ ಧ್ರುವೀಕೃತ ಬೆಳಕನ್ನು ಎಡದಿಂದ ಬಲಕ್ಕೆ ರಾಸಾಯನಿಕ ಸಂಯುಕ್ತವೊಂದರ ಮೂಲಕ ತಿರುಗಿಸುವುದು.
ಕಾಂತವಿರೋಧಿ ಗುಣ – ತುಂಬಾ ದುರ್ಬಲವಾದ ಕಾಂತಗುಣ ಇದು. ಬಿಸ್ಮತ್ ಮತ್ತು ಸೀಸದಂತಹ ಕೆಲವು ಮೂಲವಸ್ತಗಳು ಅಯಸ್ಕಾಂತ ಗುಣವನ್ನು ವಿರೋಧಿಸುವ ನೆಲೆ.
ತಡೆಗೋಡೆ – ದೃಶ್ಯೋಪಕರಣಗಳಲ್ಲಿ ಕ್ಯಾಮರಾ ಕಿಂಡಿಯೊಳಗೆ ಬರುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ಸಾಧನ.
ಚಿತ್ರಯಂತ್ರ – ಅರೆಪಾರದರ್ಶಕ ವಸ್ತುಗಳನ್ನು ಬಿಂಬಿಸಲು ಬಳಸುವ ಒಂದು ದೃಶ್ಯೋಪಕರಣ.
Like us!
Follow us!